Asianet Suvarna News Asianet Suvarna News

ಕಾಂಗ್ರೆಸ್‌ ಮುಕ್ತ ಭಾರತ ಮಾಡಬೇಕು: ಗೃಹ ಸಚಿವ ಆರಗ ಜ್ಞಾನೇಂದ್ರ

ಕಾಂಗ್ರೆಸ್‌ ಪಕ್ಷವು ಈ ದೇಶಕ್ಕೆ ಅವಶ್ಯಕತೆ ಇಲ್ಲ. ದೇಶಕ್ಕೆ ಕಳಂಕ ತಂದಿರುವ ಕಾಂಗ್ರೆಸ್‌ ಪಕ್ಷವನ್ನು ಹೊಡೆದೋಡಿಸಲು ಸಂಕಲ್ಪ ಮಾಡಬೇಕು. ಕಾಂಗ್ರೆಸ್‌ ಮುಕ್ತ ಭಾರತ ಮಾಡಬೇಕು ಎಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.

Home Minister Araga Jnanendra Slams On Congress At Kadur gvd
Author
First Published Mar 18, 2023, 1:30 AM IST

ಕಡೂರು (ಮಾ.18): ಕಾಂಗ್ರೆಸ್‌ ಪಕ್ಷವು ಈ ದೇಶಕ್ಕೆ ಅವಶ್ಯಕತೆ ಇಲ್ಲ. ದೇಶಕ್ಕೆ ಕಳಂಕ ತಂದಿರುವ ಕಾಂಗ್ರೆಸ್‌ ಪಕ್ಷವನ್ನು ಹೊಡೆದೋಡಿಸಲು ಸಂಕಲ್ಪ ಮಾಡಬೇಕು. ಕಾಂಗ್ರೆಸ್‌ ಮುಕ್ತ ಭಾರತ ಮಾಡಬೇಕು ಎಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು. ಪಟ್ಟಣದ ಕೆಎಲ್‌ವಿ ವೃತ್ತದಲ್ಲಿ ವಿಜಯ ಸಂಕಲ್ಪ ಯಾತ್ರೆಯ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಈ ಜನರನ್ನು ನೋಡಿದರೆ ಬೆಳ್ಳಿ ಪ್ರಕಾಶ್‌ರವರ ಬರಲಿರುವ ಅವರ ವಿಜಯೋತ್ಸವ ನೋಡುತ್ತಿದ್ದೇವೆ ಎನಿಸುತ್ತಿದೆ. ಕಡೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸುವ ಮೂಲಕ ಅವರು ಶಾಸಕರಾಗಬೇಕು ಎಂಬುದು ನನ್ನ ಮಹಾದಾಸೆ ಎಂದರು.

ಶಾಶ್ವತ ನೀರಾವರಿ ಸೇರಿದಂತೆ ಸದಾ ಕಡೂರು ಕ್ಷೇತ್ರದ ಅಭಿವೃದ್ಧಿಯ ಚಿಂತನೆ ನಡೆಸುವ ಬೆಳ್ಳಿ ಪ್ರಕಾಶ್‌ ನೀವು ನೀಡಿರುವ ವೋಟಿಗೆ ನ್ಯಾಯ ದೊರಕಿಸಿದ್ದಾರೆ. ಮುಂದಿನ ಐದು ವರ್ಷಕ್ಕೆ ಮತ್ತೊಮ್ಮೆ ಶಾಸಕರಾಗಲು ಅವರಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ನಮ್ಮ ಕಾರ್ಯಕರ್ತರೇ ಬಿಜೆಪಿಯ ದೇವರಾಗಿದ್ದು, ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ನಮ್ಮ ಸರ್ಕಾರದ ಸಾಧನೆಗಳನ್ನು ಹೇಳಿ ಮತ ಕೊಡಿಸಬೇಕು ಎಂದು ಸಚಿವರು ಕೋರಿದರು.

ಬೆಲೆ ಏರಿಸಿ ಬದುಕು ಮೂರಾಬಟ್ಟೆ ಮಾಡುತ್ತಿರುವ ಬಿಜೆಪಿ: ಯತೀಂದ್ರ ಸಿದ್ದರಾಮಯ್ಯ

ಶಾಸಕ ಬೆಳ್ಳಿ ಪ್ರಕಾಶ್‌ ಮಾತನಾಡಿ, ನನ್ನ ಅಧಿಕಾರದ ಕಳೆದ ಐದು ವರ್ಷಗಳಲ್ಲಿ ಕಡೂರು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದೇನೆ. ನನಗೆ ಮತ ನೀಡಿದ ಜನರಿಗಾಗಿ ಆತ್ಮತೃಪ್ತಿಯಾಗಿ ಕೆಲಸ ಮಾಡಿದ್ದೇನೆ. ಜಾತಿಗೆ ಆದ್ಯತೆ ನೀಡದೆ, ಸರ್ವ ಜನರ ಅಭ್ಯುದಯಕ್ಕಾಗಿ ದುಡಿದಿದ್ದೇನೆ. ನಮ್ಮ ನಾಯಕರಾದ ಬಿ.ಎಸ್‌ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೇರಿ ಈ ನಮ್ಮ ಕಡೂರು ಬರದನಾಡಿಗೆ ಶಾಶ್ವತ ನೀರಾವರಿ ಯೋಜನೆ ನೀಡಿದ್ದಾರೆ ಎಂದರು.

ದೇಶವನ್ನು ಸುಭದ್ರವಾಗಿ ಕಟ್ಟಲು ಮತ್ತು ನಾವುಗಳು ಸುರಕ್ಷಿತವಾಗಿ ಬದುಕುವಂತೆ ಮಾಡುವಲ್ಲಿ ಭಾರತೀಯ ಜನತಾ ಪಕ್ಷವು ಕಂಕಣ ಬದ್ಧವಾಗಿದೆ. ಮತ್ತೊಮ್ಮೆ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಬೇಕು ಎಂದು ಕೋರಿದರು. ರೋಡ್‌ ಶೋನಲ್ಲಿ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ, ವಿಧಾನ ಪರಿಷತ್‌ ಉಪ ಸಭಾಪತಿ ಎಂ.ಕೆ .ಪ್ರಾಣೇಶ್‌, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರಡಪ್ಪ, ಬಿಜೆಪಿ ಜಿಲ್ಲಾ ಸಹ ವಕ್ತಾರ ರವಿ ಚಿಕ್ಕ ದೇವನೂರು, ಬಿಜೆಪಿ ಮುಖಂಡರಾದ ಮಹೇಶ್‌ ಒಡೆಯರ್‌, ಕೆ.ಬಿ.ಸೋಮೇಶ್‌ , ಅಡಿಕೆ ಚಂದ್ರು, ನವೀನ್‌, ಸುದರ್ಶನ್‌, ಜಿಗಣೇಹಳ್ಳಿ ನೀಲಕಂಠಪ್ಪ, ಶಾಮಿಯಾನ ಚಂದ್ರು, ಪುರಸಭೆ ಸದಸ್ಯರು, ಮಹಿಳಾ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮಂಡ್ಯ ಜಿಲ್ಲೆ ಜವಾಬ್ದಾರಿ ನನ್ನದೇ, ಪ್ರಚಾರದ ಉಸ್ತುವಾರಿ ನಾನೇ ವಹಿಸುವೆ: ಎಚ್‌.ಡಿ.ದೇವೆಗೌಡ

ಬಿಜೆಪಿ ದೇಶವನ್ನು ಬದಲಿಸಿದೆ: ಕಾಂಗ್ರೆಸ್‌ ಪಕ್ಷವು ಈ ದೇಶಕ್ಕೆ ಅವಶ್ಯಕತೆ ಇಲ್ಲ. ದೇಶಕ್ಕೆ ಕಳಂಕ ತಂದಿರುವ ಕಾಂಗ್ರೆಸ್‌ ಪಕ್ಷವನ್ನು ಹೊಡೆದೋಡಿಸಲು ಸಂಕಲ್ಪ ಮಾಡ ಬೇಕು, ಇಂದು ದೇಶದ ಯಾವ ರಾಜ್ಯಗಳಲ್ಲೂ ಕಾಂಗ್ರೆಸ್‌ ಅಸ್ತಿತ್ವದಲ್ಲಿ ಇಲ್ಲ ಇಂದು ಲೇವಡಿ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಎಲ್ಲ ರೀತಿಯ ಭದ್ರತೆಯನ್ನು ನೀಡಿರುವ ಬಿಜೆಪಿ ಸರ್ಕಾರವು ಈ ದೇಶದ ಬದುಕನ್ನು ಬದಲಿಸಿದೆ. ಆಯುಷ್ಮಾನ್‌ ಯೋಜನೆಯಲ್ಲಿ ದೇಶದ ಎಲ್ಲ ಬಡ ಜನರ ಆರೋಗ್ಯ ಚಿಕಿತ್ಸೆಗೆ 5 ಲಕ್ಷ ರು. ನೀಡಿದೆ. ಬೆಳೆ ಹಾಳಾದ ರೈತರಿಗೆ ಕಿಸಾನ್‌ ಸಮ್ಮಾನ್‌ನಲ್ಲಿ ಆತನ ಖಾತೆಗೆ ಹಣ ನೀಡಿ ದ್ದು ಬಿಜೆಪಿ ಸರ್ಕಾರ. ಅಡಿಕೆ ಬೆಳೆಗಾರರಿಗೆ ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಆಮದು ನಿಲ್ಲಿಸಿ ದೇಶದ ಅಡಿಕೆ ಧಾರಣೆ ಹೆಚ್ಚಳ ಸೇರಿದಂತೆ ನೂರಾರು ಕಾರ್ಯಕ್ರಮಗಳು ಬಿಜೆಪಿಯ ಸಾಧನೆ ಎಂದರು.

Follow Us:
Download App:
  • android
  • ios