ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ವರ್ಗಾವಣೆ ದಂಧೆ ಆರಂಭವಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಕ್ಕೆ ಕಾಂಗ್ರೆಸ್‌ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಆ.6) :  ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ವರ್ಗಾವಣೆ ದಂಧೆ ಆರಂಭವಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಕ್ಕೆ ಕಾಂಗ್ರೆಸ್‌ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವೆ ಲಕ್ಷ್ಮೇ ಹೆಬ್ಬಾಳ್ಕರ್‌, ಕುಮಾರಸ್ವಾಮಿಯವರು ಧೈರ್ಯವಿದ್ದರೆ ನಮ್ಮ ಎದುರು ನಿಂತು ಮಾತನಾಡಲಿ, ಹಿಟ್‌ ಆ್ಯಂಡ್‌ ರನ್‌ ಮಾಡಬಾರದು. ಅವರು ಮೋದಿಗೆ ದೂರು ನೀಡಿದರೂ ಅದನ್ನು ಸ್ವಾಗತಿಸುತ್ತೇವೆ ಎಂದರು. ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಈಗಾಗಲೇ ನಮ್ಮ ಸದಸ್ಯರು ಸದನದಲ್ಲಿ ದಾಖಲೆ ಕೊಡುವಂತೆ ಹೇಳಿದ್ದಾರೆ. ಇದನ್ನು ಪದೇ ಪದೇ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದರು.

ನನಗೆ ಆ ರೀತಿಯ ತಮ್ಮ ಇಡೀ ಜನ್ಮದಲ್ಲೆ ಇಲ್ಲ..ಡಿಕೆಶಿಗೆ ಹೆಚ್‌ಡಿಕೆ ಟಾಂಗ್‌

ಮಂಡ್ಯದಲ್ಲಿ ಮಾತನಾಡಿದ ಚಲುವರಾಯಸ್ವಾಮಿ(Chaluvarayaswamy), ಕುಮಾರಸ್ವಾಮಿ(HD Kumaraswamy)ಯವರನ್ನು ಬಿಜೆಪಿಯವರು ತಮ್ಮ ಪಕ್ಷದ ವಕ್ತಾರರನ್ನಾಗಿ ನೇಮಕ ಮಾಡಿರಬೇಕು. ಅದಕ್ಕೆ ಬಿಜೆಪಿಯವರು ಏನೂ ಮಾತನಾಡದಿದ್ದರೂ ಇವರೇ ಎಲ್ಲವನ್ನೂ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಶಿಕ್ಷಣ ಸಚಿ​ವ ಮಧು ಬಂಗಾರಪ್ಪ(Madhubangarappa), ವರ್ಗಾವಣೆ ಕುರಿತು ಮಾತನಾಡುವ ಕುಮಾರಸ್ವಾಮಿ ಈ ಕೆಲಸವನ್ನು ಎಷ್ಟುಸಲ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ(MB Patil), ಕುಮಾರಸ್ವಾಮಿಯವರು ಸರ್ಕಾರ ಉರುಳಿಸುವ ಕನಸು ಕಾಣುತ್ತಿದ್ದಾರೆ. ಅವರ ಕನಸು ಎಂದಿಗೂ ಈಡೇರುವುದಿಲ್ಲ ಎಂದರು.

ಬಿಜೆಪಿ ಜತೆ ಹೋಗುವ ದಾರಿದ್ರ್ಯ ನಮಗೆ ಬಂದಿಲ್ಲ: ಕುಮಾರಸ್ವಾಮಿ ಸಡ್ಡು