ಮುಖ್ಯಮಂತ್ರಿ ಬದಲಾವಣೆ ಚರ್ಚೆ, ಬಿಜೆಪಿ ಜತೆಗಿನ ಸಖ್ಯದ ವದಂತಿ ನಡುವೆಯೇ ಉಪ ಮುಖ್ಯಮ೦ತ್ರಿ ಡಿ.ಕೆ.ಶಿವಕುಮಾರ್ ಅವರು ಮೃದು ಹಿಂದುತ್ವ ಧೋರಣೆ ಅನುಸರಿಸುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು (ಫೆ.28): ಮುಖ್ಯಮಂತ್ರಿ ಬದಲಾವಣೆ ಚರ್ಚೆ, ಬಿಜೆಪಿ ಜತೆಗಿನ ಸಖ್ಯದ ವದಂತಿ ನಡುವೆಯೇ ಉಪ ಮುಖ್ಯಮ೦ತ್ರಿ ಡಿ.ಕೆ.ಶಿವಕುಮಾರ್ ಅವರು ಮೃದು ಹಿಂದುತ್ವ ಧೋರಣೆ ಅನುಸರಿಸುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಹಾಕುಂಭ ಮೇಳದ ಕುರಿತು ವ್ಯತಿ ರಿಕ್ತ ಹೇಳಿಕೆ ನೀಡಿದ ನಂತರವೂ ಶಿವಕುಮಾ ಅವರು ಕುಟುಂಬ ಸಮೇತರಾಗಿ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದರು. ನಂತರ ತಾವು ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದನ್ನು ಸಮರ್ಥಿಸಿಕೊಂಡು, ನಂಬಿದ್ದನ್ನು ಪಾಲಿಸು ವುದು ನನ್ನ ವೈಯಕ್ತಿಕ. ನಾನು ಹಿಂದುವಾಗಿ ಹುಟ್ಟಿದ್ದು, ಹಿಂದುವಾಗಿಯೇ ಸಾಯುತ್ತೇನೆ ಎಂಬ ಹೇಳಿಕೆಗಳನ್ನೂ ನೀಡಿದ್ದರು.
ಅದರ ಜತೆಗೆ ಮಹಾಕುಂಭ ಮೇಳ ಆಯೋಜನೆ ಬಗ್ಗೆ ಹೊಗಳಿಕೆಯ ಮಾತನ್ನಾಡಿ, ಪರೋಕ್ಷವಾಗಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದರ ಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಂಡಿದ್ದ ಇಶಾ ಯೋಗ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಶಿವರಾತ್ರಿ ಕಾರ್ಯಕ್ರಮ ದಲ್ಲಿ ಭಾಗಿಯಾಗಿ, ಅಮಿತ್ ಶಾ ಅವರೊಂ ದಿಗೆ ವೇದಿಕೆ ಹಂಚಿಕೊಂಡಿದ್ದರು. ಈಶಾ ಯೋಗ ಕೇಂದ್ರದ ಕಾರ್ಯಕ್ರಮದ ಬಗ್ಗೆ ಅನುಭವ ಖಾತೇಲಿ ಹಂಚಿಕೊಂಡಿದ್ದರು. ಒಂದೆಡೆ ಸಿಎಂ ಸಿದ್ದರಾಮಯ್ಯ ಮತ್ತು ಇತರ ನಾಯಕರು, ಅಲ್ಪಸಂಖ್ಯಾತರ ತುಷ್ಟಿಕರಣ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಅದರ ನಡುವೆ ಶಿವಕುಮಾರ್ ಅವರು ಹಿಂದು ತ್ವದ ಪರವಾದ ಮಾತುಗಳು, ಮೃದು ಹಿಂ ದುತ್ವ ಧೋರಣೆ ಅಳಡಿಸಿಕೊಳ್ಳುತ್ತಿರುವುದಕ್ಕೆ ಸಾಕ್ಷಿ ನೀಡುವಂತಿದೆ.
ನನ್ನ ನಂಬಿಕೆ ನನ್ನ ಸಂತ ವಿಚಾರ: ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭ ಮೇಳ, ಈಶಾ ಯೋಗ ಕೇಂದ್ರದಲ್ಲಿ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನನ್ನ ನಂಬಿಕೆ. ನಂಬಿಕೆ ನನ್ನ ಸ್ವಂತದ್ದು, ಅದರ ಬಗ್ಗೆ ಯಾರೂ ಮಾತನಾಡುವುದು ಬೇಡ. ಅವರ ಮಾತುಗಳನ್ನು ಸ್ವಾಗತಿಸುವ ಅವಶ್ಯಕತೆಯೂ ನನಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀಕ್ಷ್ಮವಾಗಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ನಂಬಿಕೆ ನನ್ನ ಸ್ವಂತ ವಿಚಾರ. ಅದರ ಬಗ್ಗೆ ಯಾರಾರೋ ಮಾತನಾಡುತ್ತಾರೆ.
ರಿಯಲ್ ಎಸ್ಟೇಟ್ ಲಾಬಿಗೆ ಮಣಿಯದೆ ಮೆಟ್ರೋಗೆ ಹೆಬ್ಬಾಳ ಭೂಮಿ ನೀಡಿ: ಸುರೇಶ್ ಕುಮಾರ್ ಬಹಿರಂಗ ಪತ್ರ
ನನಗೆ ಬಿಜೆಪಿ ಸ್ವಾಗತಿಸುವುದೂ ಬೇಡ, ಮಾಧ್ಯಮದವರೂ ನನ್ನ ಬಗ್ಗೆ ಮಾತನಾಡುವ ಅವಶ್ಯಕತೆಯೂ ನನಗಿಲ್ಲ. ಸದ್ಗುರು ಜಗ್ಗಿ ವಾಸುದೇವ ನಮ್ಮ ರಾಜ್ಯದವರು. ಕಾರ್ಯಕ್ರಮಕ್ಕೆ ಮನೆಗೆ ಬಂದು ಕರೆದರು. ಅದಕ್ಕಾಗಿ ಹೋಗಿದ್ದೆ ಎಂದರು. ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ: ನೀವು ಸಾಫ್ಟ್ ಹಿಂದುತ್ವದತ್ತ ವಾಲುತ್ತಿದ್ದೀರಾ ಎಂಬ ಪ್ರಶ್ನೆಗೆ, ಇದೇ ಧರ್ಮದಲ್ಲಿ ಹುಟ್ಟಬೇಕೆಂದು ಯಾರೂ ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಅಂಬೇಡ್ಕರ್ ಹಿಂದು ಧರ್ಮದಲ್ಲಿ ಹುಟ್ಟಿ, ಬೌದ್ಧ ಧರ್ಮಕ್ಕೆ ಸೇರಿದರು. ಗಂಗಾಮಾತೆಗೆ ಜಾತಿ ಇದೆಯೇ? ಧರ್ಮ ವಿಚಾರದಲ್ಲಿ ರಾಜಕಾರಣ ಮಾಡಬಾರದೆಂದರು.
