* ಬಿಜೆಪಿ ವಿರುದ್ಧ  ಹಿಂದೂ ಮಹಾಸಭಾ ವಾಗ್ದಾಳಿ* ಬಿಜೆಪಿಯದ್ದು ನಕಲಿ ಮತ್ತು ಡೋಂಗಿ ರಾಜಕಾರಣ ಎಂದ ಹಿಂದೂ ಮಹಾಸಭಾ* ರಾಜಕೀಯ ಡೊಂಬರಾಟಕ್ಕಾಗಿ ಹಿಂದೂ ಕಾರ್ಯಕರ್ತರು ಬಲಿಯಾಗಬೇಡಿ ಎಂದು ಕರೆ

ಮಂಗಳೂರು, (ಆ.17): ಜಿಲ್ಲೆಯ ಕಬಕದಲ್ಲಿ ವೀರ ಸಾವರ್ಕರ್‌ ಫೋಟೋ ಬಳಕೆಗೆ ಆಕ್ಷೇಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಮಹಾಸಭಾ ಬಿಜೆಪಿ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದೆ. 

ಪುತ್ತೂರು ತಾಲೂಕಿನ ಕಬಕದಲ್ಲಿ ವೀರ ಸಾವರ್ಕರ್‌ಗೆ ಅವಮಾನ ವಿಚಾರಕ್ಕೆ ಸಂಬಂಧಿಸಿದಂತೆ, ಘಟನೆ ಖಂಡಿಸಿ ಬಿಜೆಪಿ, ಸಂಘ ಪರಿವಾರದ ಪ್ರತಿಭಟನೆ ರಾಜಕೀಯ ಡೊಂಬರಾಟ ನಡೆದಿದೆ. ಬಿಜೆಪಿಗೆ ತಾಕತ್ತಿದ್ದರೆ ಎಸ್‌ಡಿಪಿಐ, ಪಿಎಫ್‌ಐ ಬ್ಯಾನ್ ಮಾಡಲಿ ಎಂದು ಬಿಜೆಪಿಗೆ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪುತ್ರನ್ ಸವಾಲು ಹಾಕಿದರು. 

ಸ್ವಾತಂತ್ರ್ಯ ರಥದಲ್ಲಿ ಸಾವರ್ಕರ್ ಫೋಟೋ ಬಳಕೆಗೆ ಆಕ್ಷೇಪ, ಮೂವರ ಬಂಧನ

ಕಾಂಗ್ರೆಸ್‌ಗಿಂತ ಹೀನಾಯ ಸ್ಥಿತಿಗೆ ಬಿಜೆಪಿಗೆ ಬರುತ್ತಿದೆ. ಸಾವರ್ಕರ್ ಹೆಸರು ರಾಜಕೀಯಕ್ಕಾಗಿ ಉಪಯೋಗ ಖಂಡನೀಯವಾಗಿದೆ. ರಾಜಕೀಯ ಡೊಂಬರಾಟಕ್ಕಾಗಿ ಹಿಂದೂ ಕಾರ್ಯಕರ್ತರು ಬಲಿಯಾಗಬೇಡಿ ಎಂದು ಮನವಿ ಮಾಡಿದರು.

ಕೇಂದ್ರ, ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಇದೆ. ಬಿಜೆಪಿಯದ್ದು ನಕಲಿ ಮತ್ತು ಡೋಂಗಿ ರಾಜಕಾರಣವಾಗಿದೆ. ಕಬಕದ ಘಟನೆ ಜಿ.ಪಂ, ತಾ.ಪಂ ಚುನಾವಣೆ ಗಮನದಲ್ಲಿಟ್ಟು ಮಾಡಿದ ಷಡ್ಯಂತ್ರವಾಗಿದೆ. ಎಸ್‌ಡಿಪಿಐ ಮತ್ತು ಬಿಜೆಪಿಯ ಒಳ ಒಪ್ಪಂದದ ಕಾರ್ಯಕ್ರಮವಾಗಿದೆ. ಗೋಹತ್ಯೆ ನಿಷೇಧ ಮಾಡಲು ಬಿಜೆಪಿಗೆ ತಾಕತ್ತಿಲ್ಲ. ಬಿಜೆಪಿಯಿಂದ ರಾಜಕೀಯ ಡೊಂಬರಾಟವಷ್ಟೇ ಆಗುತ್ತಿದೆ ವಾಗ್ದಾಳಿ ನಡೆಸಿದರು.

ಸಾವರ್ಕರ್ ಹಿಂದೂ ಮಹಾಸಭಾದ ನಾಯಕರು. ನಿಮಗೆ ಹಿಂದೂ ಮಹಾಸಭಾ ಬೇಡವಾದರೆ ಸಾವರ್ಕರ್ ಏಕೆ ಬೇಕು. ಈ ಕ್ಷಣ ಚುನಾವಣೆಯಾದರೆ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲ್ಲ. ಕರ್ನಾಟಕದಲ್ಲಿ 10 ಸೀಟು ಗೆಲ್ಲುವ ಯೋಗ್ಯತೆ ಬಿಜೆಪಿಗೆ ಇಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖ ಇದ್ದಂತೆ ಎಂದು ಗುಡುಗಿದರು.