ಹೈಕೋರ್ಟ್ ಮಧ್ಯಂತರ ಆದೇಶ: Shivamogga ಪಾಲಿಕೆ ಚುನಾವಣೆ ಮುಂದೂಡಿಕೆ
ಇದೇ ತಿಂಗಳು 13ರಂದು ನಡೆಯಬೇಕಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಹೈಕೋರ್ಟ್ ಮಧ್ಯಂತರ ಆದೇಶ ಹಿನ್ನೆಲೆ ಚುನಾವಣೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ - ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ (ಸೆ.6) ಇದೇ ತಿಂಗಳು 13ರಂದು ನಡೆಯಬೇಕಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಹೈಕೋರ್ಟ್ ಮಧ್ಯಂತರ ಆದೇಶ ಹಿನ್ನೆಲೆ ಚುನಾವಣೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ - ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ. ಮೇಯರ್ ಸ್ಥಾನ ಎಸ್‌ಟಿಗೆ ಮೀಸಲಾಗಿಲ್ಲ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸದಸ್ಯರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ಚುನಾವಣೆ ದಿನಾಂಕವನ್ನು ಮುಂದೂಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಹೀಗಾಗಿ ಸೆ.13ರಂದು ನಡೆಯಬೇಕಿದ್ದ ಮೇಯರ್ ಚುನಾವಣೆ ತಾತ್ಕಾಲಿಕ ಮುಂದೂಡಲಾಗಿದೆ.
ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ : ಪಕ್ಷಗಳ ರಣತಂತ್ರ
ಮೇಯರ್ ಸುನೀತಾ ಅಣ್ಣಪ್ಪ(Mayor suneeta Annappa) ಅಧಿಕಾರಾವಧಿ ಮುಕ್ತಾಯಕ್ಕೂ ಮುನ್ನವೇ ವಾಲ್ಮೀಕಿ ಸಮುದಾಯ(Valmiki)ದ ಕೆಲವರು ಕೋರ್ಟ್(High Court) ಮೆಟ್ಟಿಲೇರಿದ್ದರು. ಎಸ್‌ಟಿಗೆ ಮೀಸಲು ನಿಗದಿ ಮಾಡಬೇಕೆಂದು ಮನವಿ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರನ ಮನವಿಯನ್ನು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು.
ಮೀಸಲಾತಿ ಪುರಸ್ಕರಿಸದಿದ್ದರೆ ಮೇಯರ್ ಚುನಾವಣೆ ವೇಳೆ ಅವಕಾಶವಿದೆ ಎಂದು ಸರ್ಕಾರ ಅರ್ಜಿದಾರರಿಗೆ ತಿಳಿಸಿತ್ತು. ಆದರೆ ಇದೀಗ ಬಿಸಿಎಂ ಅಭ್ಯರ್ಥಿಗೆ ಮೀಸಲು ಘೋಷಣೆಯಾಗುತ್ತಿದ್ದಂತೆ ಮತ್ತೆ ಮೀಸಲಾತಿ ವಿಚಾರ ಹೈಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಂಗ ಪ್ರಕ್ರಿಯೆ ವಿಳಂಬವಾದಷ್ಟೂ ಹಾಲಿ ಮೇಯರ್, ಉಪಮೇಯರ್ ಅಧಿಕಾರ ಅವಧಿ ವಿಸ್ತರಣೆಯಾಗಲಿದೆ. ಮೇಯರ್ ಚುನಾವಣೆಗೆ ಸಿದ್ಧತೆ ನಡೆಸಿದ್ದ ಪಕ್ಷಗಳಿಗೆ ಈ ಬೆಳವಣಿಗೆಯಿಂದ ನಿರಾಸೆಯಾದಂತಾಗಿದೆ. ಇಂದು ಮೈಸೂರು ನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ