ಬಿಜೆಪಿ ಕಾರ್ಯಕಾರಣಿ ಸಭೆಯ ಮೊದಲ ದಿನದ ಸಂಪೂರ್ಣ ಮಾಹಿತಿ
* ಹೊಸಪೇಟೆಯಲ್ಲಿ ಭರ್ಜರಿಯಾಗಿ ನಡೆದ ಬಿಜೆಪಿ ಕಾರ್ಯಕಾರಣಿ
* ಬಿಜೆಪಿ ಕಾರ್ಯಕಾರಣಿ ಸಭೆಯ ಮೊದಲ ದಿನದ ಸಂಪೂರ್ಣ ಮಾಹಿತಿ
* ಈಶ್ವರಪ್ಪ ಪ್ರಕರಣ ಹಿನ್ನಲೆ ಕಪ್ಪು ಬಾವುಟ ಪ್ರದರ್ಶಿಸಿದ ಕಾಂಗ್ರೆಸ್
* ರಾಜೀನಾಮೆ ಅಲ್ಲ ಈಶ್ವರಪ್ಪ ಬಂಧನವಾಗಬೇಕು ಎಂದು ಆಗ್ರಹ
ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ವಿಜಯನಗರ, (ಏ.16): ಮುಂಬರುವ ಚುನಾವಣೆ ದೃಷ್ಟಿಕೋನ, ಕಲ್ಯಾಣ ಕರ್ನಾಟಕದ 40 ಜಿಲ್ಲೆಯಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲಬೇಕು ಗುರಿ, ರಾಜ್ಯ ಮತ್ತು ಕೇಂದ್ರದ ಯೋಜನೆ ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರ ಪಾತ್ರ ಈ ರೀತಿಯ ಹತ್ತು ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಹೊಸಪೇಟೆಯಲ್ಲಿ ನಡೆಯುತ್ತಿರೋ ಬಿಜೆಪಿ ರಾಜ್ಯಮಟ್ಟದ ಕಾರ್ಯಕಾರಣಿ ಮೊದಲ ದಿನ ಬಹುತೇಕ ಯಶಸ್ಸಿಯಾಗಿದೆ.
ಬೆಳಿಗ್ಗೆ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೋಪೂಜೆ ಮಾಡೋ ಮೂಲಕ ಕಾರ್ಯಕಾರಣಿಗೆ ಸಾಂಕೇತಿಕವಾಗಿ ಚಾಲನೆ ನೀಡಿದ್ರೇ ಮಧ್ಯಾಹ್ನ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಯಿ ರಾಜ್ಯಧ್ಯಕ್ಷ ಕಟೀಲ್ ಮತ್ತು ಬಿಎಲ್ ಸಂತೋಷ ಅವರು ಬಿಜೆಪಿಯ ಧ್ವಜಾರೋಹಣ ಮಾಡೋ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದ್ರು.
ಹೊಸಪೇಟೆಯಲ್ಲಿ ಇಂದಿನಿಂದ ಬಿಜೆಪಿ ಕಾರ್ಯಕಾರಿಣಿ; ಮುಜುಗರ ತಪ್ಪಿಸಲು ಈಶ್ವರಪ್ಪ ಗೈರು
ಹಂಪಿ ಸ್ಮಾರಕ ಹೊಲುವ ಬೃಹತ್ ವೇದಿಕೆಯಲ್ಲಿ ಪಕ್ಷ ಸಂಘಟನೆ ಕುರಿತು ನಾಯಕರು ಭರ್ಜರಿ ಮಾತನಾಡಿದ್ರು. ಪರೋಕ್ಷವಾಗಿ ಈಶ್ವರಪ್ಪ ಪ್ರಕರಣ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎನ್ನುವ ಸಂದೇಶ ಸಾರಿದ್ರು..
ಕಾರ್ಯಕಾರಣಿಗೆ ಕಪ್ಪು ಪಟ್ಟಿ ಪ್ರದೇಶನ
ಈಶ್ವರಪ್ಪ ಅವರ ಲಂಚ ಪ್ರಕರಣವನ್ನು ಮುಂದಿಟ್ಟುಕೊಂಡು ಕಾರ್ಯಕಾರಣಿ ಅನತಿ ದೂರದಲ್ಲಿ ಇರೋ ಕನಕದಾಸ ವೃತ್ತದ ಬಳಿ ಮಾಜಿ ಸಚಿವ ಹೆಚ್ಕೆ ಪಾಟೀಲ್ ನೇತೃತ್ವದಲ್ಲಿ ಬಳ್ಳಾರಿ ವಿಜಯನಗರ ಶಾಸಕರಾದ ನಾಗೇಂದ್ರ, ತುಕಾರಾಂ, ಭೀಮಾನಾಯ್ಕ್ ಮತ್ತು ರಾಜ್ಯಸಭೆಯ ಸದಸ್ಯ ನಾಸೀರ್ ಹುಸೇನ್ ನೂರಾರು ಕಾರ್ಯಕರ್ತರ ಬೃಹತ್ ಪ್ರತಿಭಟನೆ ಮಾಡಿದ್ರು ಆರಕ್ಕೂ ಹೆಚ್ಚು ಬಸ್ ಗಳಲ್ಲಿ ಎಲ್ಲ ಕಾರ್ಯಕರ್ತರನ್ನು ಬಂಧನ ಮಾಡಲಾಯಿತು.
ಪ್ರಕರಣದ ಎ1 ಆರೋಪಿಯಾಗಿದ್ರೂ ರಾಜೀನಾಮೆ ನೀಡದೇ ಮೂರು ದಿನಗಳ ಕಾಲ ಕಾಂಗ್ರೆಸ್ ಹೋರಾಟ ಮಾಡಿದ ಪರಿಣಾಮ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ಆದ್ರೇ ರಾಜೀನಾಮೆ ಸಾಲಲ್ಲ ಅವರನ್ನು ಬಂಧಿಸಬೇಕೆಂದು ಹೆಚ್ಕೆ ಪಾಟೀಲ್ ಒತ್ತಾಯಿಸಿದ್ರು.. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಎಲ್ಲರನ್ನೂ ಬಂಧಿಸಲಾಯಿತು..
ಕಾಂಗ್ರೆಸ್ ಒಬ್ಬರ ಮೇಲೋಬ್ಬರು ವಾಗ್ದಾಳಿ
ಕಾಂಗ್ರೆಸ್ ನಾಯಕರ ಪ್ರತಿಭಟನೆ ಹಿನ್ನಲೆ ಸಚಿವ ಆನಂದ ಸಿಂಗ್, ನಳಿನ್ ಕುಮಾರ್ ಕಟೀಲ್ ಸಿ.ಟಿ.ರವಿ, ಯತ್ನಾಳ ಸೇರಿದಂತೆ ಬಹುತೇಕ ನಾಯಕರು ಈಶ್ವರಪ್ಪ ಪರ ಬ್ಯಾಟಿಂಗ್ ಮಾಡೋ ಮೂಲಕ ಕಾಂಗ್ರೆಸ್ ಪ್ರತಿಭಟನೆಯನ್ನು ವ್ಯಂಗ್ಯವಾಡಿದ್ರು.. ನ್ಯಾಯ ಸಮ್ಮತ ಹೋರಾಟ ಮಾಡಲಿ ಆದ್ರೇ ಈ ರೀತಿಯ ನೂರಾರು ಆರೋಪ ಮೈಮೇಲೆ ಇರೋರು ಹೋರಾಟ ಮಾಡಿದ್ರೇ ಜೈಲಿಗೆ ಕಳುಹಿಸಬೇಕಾಗ್ತದೆ ಎಂದು ಕಟೀಲ್ ಎಚ್ಚರಿಕೆ ನೀಡಿದ್ರು.. ಮಹಾನ್ ನಾಯಕನ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ ಈ ಬಗ್ಗೆ ಸೋಮವಾರ ರಮೇಶ್ ಜಾರಕಿಹೊಳಿ ಸೋಮವಾರ ಇದಕ್ಕೆ ಉತ್ತರಿಸಲಿದ್ದಾರೆ. ಕಾಮಗಾರಿ ಟೆಂಡರ್ ಇಲ್ಲದೇ ಯಾವ ಗುತ್ತಿಗೆದಾರ ಕೆಲಸ ಮಾಡೋದಿಲ್ಲ ಸುಖಾಸುಮ್ಮನೆ ಈಶ್ವರಪ್ಪ ಅವರನ್ನು ಸಿಲುಕಿಸಲಾಗಿದೆ. ಪೂರ್ಣ ತನಿಖೆಯಾದ್ರೇ ಕಾಂಗ್ರೆಸ್ ನಾಯಕರು ಸಿಲುಕಿಕೊಳ್ಳುತ್ತಾರೆಂದರು..
ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಶಕ್ತಿ
ಕಲ್ಯಾಣ ಕರ್ನಾಟಕ ಹೆಬ್ಬಾಗಿಲು ಆಗಿರೋ ಹೊಸಪೇಟೆಯಲ್ಲಿ ಕಾರ್ಯಕಾರಣಿ ಮಾಡೋ ಮೂಲಕ ಬಿಜೆಪಿ ಕಲ್ಯಾಣ ಕರ್ನಾಟಕದ ನಲವತ್ತು ಕ್ಷೇತ್ರಗಳನ್ನು ಹೆಚ್ಚು ಗಮನಿಸುತ್ತದೆ. ಯಾಕಂದ್ರೇ 2008ರಲ್ಲಿ ಅತಿಹೆಚ್ಚು ಸ್ಥಾನ ಬಂದಿದ್ದು ಬಿಟ್ರೇ ಇಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಹೀಗಾಗಿ ಇಲ್ಲಿ ಈ ಬಾರಿ ಹಿನ್ನಡೆಯಾಗಬಾರದೆಂದು ಕಾರ್ಯಕರ್ತರಿಗೆ ಎಚ್ಚರಿಕೆ ನೀಡಲಾಗಿದೆ..
ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ
ಕಾರ್ಯಕಾರಣಿಗೆ ಅಗಿಸಿರೋ ಸಿಎಂ ಕಾರ್ಯಕ್ರಮಕ್ಕೂ ಮುನ್ನ ಹಂಪಿ ಕನ್ನಡ ವಿವಿಯಲ್ಲಿ ವಿವಿದ ಕಟ್ಟಡ ಕಾಮಗಾರಿ, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾದ್ರು. ಸಂಜೆ ಕಂಪ್ಲಿಯ ಸೋಮಪ್ಪ ಕೆರೆ ಉದ್ಘಾಟನೆ ಮತ್ತು ನೂತನ ಪೊಲೀಸ್ ಠಾಣೆ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ್ರು..