ರಾಷ್ಟ್ರರಾಜಕಾರಕ್ಕೆ ಹೋಗುತ್ತಿದ್ದಂತೆಯೇ ಮಗನಿಗೆ ರಾಜ್ಯ ರಾಜ್ಯರಾಜಕಾರಣದ ಪಟ್ಟಕಟ್ಟಲು ಮುಂದಾದ ಹೆಚ್‌ಡಿಕೆ

ರಾಷ್ಟ್ರರಾಜಕಾರಕ್ಕೆ ಹೋಗುತ್ತಿದ್ದಂತೆಯೇ ಮಗನಿಗೆ ರಾಜ್ಯ ರಾಜ್ಯ ರಾಜಕಾರಣದ ಪಟ್ಟಕಟ್ಟಲು ಕೇಂದ್ರ ಸಚಿವ ಹೆಚ್‌ಡಿ ಕುಮಾಸ್ವಾಮಿ ಮುಂದಾಗಿದ್ದಾರೆ. ಇದಕ್ಕಾಗಿ ನಿಧಾನವಾಗಿ ಅಖಾಡ ಕೂಡ  ರೆಡಿ ಆಗ್ತಿದೆ.

HDK enter national politics and planning to karnataka JDS leadership transfer to son Nikhil Kumaraswamy gow

ಬೆಂಗಳೂರು (ಜೂ.30): ರಾಷ್ಟ್ರರಾಜಕಾರಕ್ಕೆ ಹೋಗುತ್ತಿದ್ದಂತೆಯೇ ಮಗನಿಗೆ ರಾಜ್ಯ ರಾಜ್ಯ ರಾಜಕಾರಣದ ಪಟ್ಟಕಟ್ಟಲು ಕೇಂದ್ರ ಸಚಿವ ಹೆಚ್‌ಡಿ ಕುಮಾಸ್ವಾಮಿ ಮುಂದಾಗಿದ್ದಾರೆ. ಇದಕ್ಕಾಗಿ ನಿಧಾನವಾಗಿ ಅಖಾಡ ಕೂಡ  ರೆಡಿ ಆಗ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ಮೂಲಕ ನಿಖಿಲ್ ರಾಜ್ಯ ರಾಜಕಾರಣದಲ್ಲಿ ಮುಂಚೂಣಿಗೆ ಬರಲು ತಯಾರಿ ನಡೆದಿದೆ.

ಈಗಾಗಲೇ ಕೆಂದ್ರ ಸಚಿವರಾಗಿ ದೆಹಲಿಯಲ್ಲೇ ಉಳಿದಿರುವ ಕುಮಾರಸ್ವಾಮಿ ರಾಜ್ಯದಲ್ಲಿ ಪಕ್ಷದ ಜವಾಬ್ದಾರಿಯನ್ನು ಮಗ ನಿಖಿಲ್ ಗೆ ಹೊರಿಸಲು ತಯಾರಿ ಮಾಡುತ್ತಿದ್ದಾರೆ. ಪಕ್ಷದ ಜವಾಬ್ದಾರಿ ತೆಗೆದು ಕೊಳ್ಳಲು ಕುಮಾರಸ್ವಾಮಿ ಸೂಚನೆ ನೀಡಿದ್ದಾರಂತೆ.

ಫೇವರಿಟ್ ಅಂತ ತಿಂದ್ರೆ ರೋಗ ಕಟ್ಟಿಟ್ಟ ಬುತ್ತಿ, ರಾಜ್ಯಾದ್ಯಂತ ಶವರ್ಮಾದಲ್ಲಿ ಬ್ಯಾಕ್ಟೀರಿಯಾ, ಈಸ್ಟ್‌ ಪತ್ತೆ!

ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವಂತೆ ಮಗ ನಿಖಿಲ್  ಕುಮಾರಸ್ವಾಮಿಗೆ ಹೆಚ್‌ಡಿಕೆ ಸೂಚನೆ ನೀಡಿದ್ದಾರೆ. ಹಾಗಾಗಿ ರಾಜ್ಯದ ಎಲ್ಲೆಡೆ ಪಕ್ಷದ ಕಾರ್ಯಕ್ರಮಗಳಲ್ಲಿ ಯುವ ಜೆಡಿಎಸ್‌ ಘಟಕದ ಅಧ್ಯಕ್ಷ  ನಿಖಿಲ್ ಭಾಗವಹಿಸುತ್ತಿದ್ದಾರೆ.

ಮಾತ್ರವಲ್ಲ ಅಪ್ಪನ ಸೂಚನೆ ಬೆನ್ನಲ್ಲೇ ಆಕ್ಟೀವ್ ಆಗಿರುವ ನಿಖಿಲ್ ಬಿಜೆಪಿ ನಾಯಕರ ಜೊತೆಗೂ ಸೌಹಾರ್ದ ಸಂಬಂಧ ಕಾಯ್ದುಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ  ಶನಿವಾರ  ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಜೊತೆ ನಿಖಿಲ್  ವೇದಿಕೆ ಹಂಚಿಕೊಂಡಿದ್ದರು. ಜೊತೆಗೆ  ಅರ್ ಅಶೋಕ್ ಈ ಕಾರ್ಯಕ್ರಮ ದಲ್ಲಿ ನಿಖಿಲ್ ರನ್ನು ಹಾಡಿ ಹೊಗಳಿದ್ದರು. ಮುಂದೆ ನಿಖಿಲ್ ರಾಜ್ಯಾಧ್ಯಕ್ಷರಾಗುತ್ತಾರೆ ಎಂದಿದ್ದರು.

ಹನಿಮೂನ್ ಫೋಟೋ ಹಂಚಿಕೊಂಡು ಕ್ಷಮಿಸಿ ಎಂದ ವಿಜಯ್‌ ಮಲ್ಯ ಸೊಸೆ ಜಾಸ್ಮಿನ್‌!

ಹೀಗಾಗಿ ನಿಧಾನವಾಗಿ ನಿಖಿಲ್ ರಾಜ್ಯದಲ್ಲಿ ವರ್ಚಸ್ಸು ಬೆಳೆಸಿಕೊಳ್ಳುವತ್ತ ಗಮನ ಕೊಡುತ್ತಿದ್ದಾರೆ. ಈ ಹಿಂದೆ ಲೋಕಸಭಾ ಚುನಾವಣಾ ಸಮಯದಲ್ಲೇ ಚಲನಚಿತ್ರಗಳಲ್ಲಿ ಅಭಿನಯ ಮಾಡುವುದನ್ನು ನಿಲ್ಲಿಸುವುದಾಗಿ ತಿಳಿಸಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಕ್ರೀಯ ರಾಜಕಾರಣದಲ್ಲಿ ಇರುವುದಾಗಿ ತಿಳಿಸಿದ್ದರು. ಅದರಂತೆ ಈಗ ನಡೆದುಕೊಳ್ಳುತ್ತಿದ್ದಾರೆ.

ಅತ್ತ ಚನ್ನಪಟ್ಟಣದಲ್ಲಿ ಜುಲೈ1ರಿಂದ ಡಿಸಿಎಂ  ಡಿಕೆ ಶಿವಕುಮಾರ್ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮುಂಚೆಯೇ ನಿಖಿಲ್ ಚನ್ನಪಟ್ಟಣ ಪ್ರವಾಸ ಕೈಗೊಂಡಿದ್ದಾರೆ. ಇಂದೇ ಚನ್ನಪಟ್ಟಣಕ್ಕೆ ಭೇಟಿ ನೀಡಲಿರುವ ನಿಖಿಲ್ ಕುಮಾರಸ್ವಾಮಿ ಈ ಮೂಲಕ ಡಿಕೆಶಿಗೆ  ಟಾಂಗ್ ಕೊಡಲು ಮುಂದಾಗಿದ್ದಾರೆ. ಕುಮಾರಸ್ವಾಮಿಯಿಂದ ತೆರವಾಗಿರುವ ಚೆನ್ನಪಟ್ಟಣ ಶಾಸಕ ಸ್ಥಾನಕ್ಕೆ ನಿಖಿಲ್  ಅವರನ್ನು ಉಪಚುನಾವಣೆಗೆ ನಿಲ್ಲಿಸುತ್ತಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಆದ್ರೆ ಬಿಜೆಪಿಯ ಸಿಪಿ ಯೋಗೇಶ್ವರ್ ಕೂಡ ಚೆನ್ನಪಟ್ಟಣದಿಂದ ಸ್ಫರ್ಧಿಸಲು ಮುಂದಾಗಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಚೆನ್ನಪಟ್ಟಣದಲ್ಲಿ ನಿಲ್ಲಲು ತಯಾರಿ ನಡೆಸಿದ್ದಾರೆ.

Latest Videos
Follow Us:
Download App:
  • android
  • ios