ಲೋಕೋಪಯೋಗಿ ಸಚಿವ ರೇವಣ್ಣ ಅವರು ಇದೀಗ ತಮ್ಮ ನಿರ್ಧಾರದಂತೆ ನಡೆದುಕೊಳ್ಳಲು ಬಿಗಿ ಪಟ್ಟು ಹಿಡಿದಿದ್ದು ಇದೀಗ ರೇವಣ್ಣ ಅವರ ಪಟ್ಟಿನಿಂದ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.
ಬೆಂಗಳೂರು : ಡಿಸೆಂಬರ್ ನಲ್ಲಿ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದ್ದುಮ ಶುಭ ದಿನದಂದೇ ಅಧಿವೇಶನ ಆರಂಭಿಸಲು ಎಚ್.ಡಿ ರೇವಣ್ಣ ಪಟ್ಟು ಹಿಡಿದಿದ್ದಾರೆ.
ಈಗಾಗಲೇ ಬೆಳಗಾವಿ ಅಧಿವೇಶನಕ್ಕೆ ನಿಗದಿಯಾಗಿದ್ದ ದಿನಾಂಕ ಬದಲಿಸುವಂತೆ ಅಧಿಕಾರಿಗಳಿಗೆ ಎಚ್.ಡಿ ರೇವಣ್ಣ ಸೂಚನೆ ನೀಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಡಿಸೆಂಬರ್ 3 ರಿಂದ 10 ದಿನ ಅಧಿವೇಶನ ನಡೆಸಲು ನಿರ್ದೇಶನ ನೀಡಿದ್ದಾರೆ.
ಆದರೆ ಡಿಸೆಂಬರ್ 3 ರ ಬದಲು 5 ರಂದು ಅಧಿವೇಶನ ಪ್ರಾರಂಭಿಸುವಂತೆ ಸೂಚನೆ ಎಚ್.ಡಿ ರೇವಣ್ಣ ಸೂಚನೆ ನೀಡಿದ್ದಾರೆ. ಡಿಸೆಂಬರ್ 3 ರಂದು ದಿನ ಚೆನ್ನಾಗಿಲ್ಲ. ಹೀಗಾಗಿ 5 ರಂದೇ ಬೆಳಗಾವಿ ಅಧಿವೇಶನ ಆರಂಭವಾಗಬೇಕು ಎಂದು ಹೇಳಿದ್ದಾರೆ.
ರೇವಣ್ಣ ಮುಹೂರ್ತ ಕೇಳಿ ವಿಧಾನಸಭೆ ಅಧಿಕಾರಿಗಳು ಪೇಚಿಗೆ ಸಿಲುಕಿದ್ದು, ಈಗಾಗಲೇ ಡಿ. 3 ರಂದು ದಿನಾಂಕ ನಿಗದಿಯಾಗಿದೆ. ಈಗ ದಿನಾಂಕ ಬದಲಿಸಲು ಹೋದರೆ 10 ದಿನ ಕಲಾಪ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಡಿ. 5 ರಿಂದ ಆರಂಭವಾದರೆ ಎರಡು ದಿನ ಕಡಿಮೆ ಆಗುತ್ತದೆ. ಅಲ್ಲದೇ ಮೊದಲ ದಿನ ಸಂತಾಪ ಸೂಚನೆಗೆ ಮೀಸಲಾಗುತ್ತದೆ. ಶುಕ್ರವಾರ ಅರ್ಧ ದಿನಕ್ಕೆ ಕಲಾಪ ಮುಗಿಯುತ್ತದೆ. ಕೇವಲ 5 ದಿನ ಮಾತ್ರ ಕಲಾಪಕ್ಕೆ ಅವಕಾಶ ಸಿಗುವಂತಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರೇವಣ್ಣ ಟೆನ್ಷನ್ ನಡುವೆ ನವೆಂಬರ್ 19 ರಂದು ಬೆಳಗಾವಿ ಅಧಿವೇಶನ ಕುರಿತು ಪೂರ್ವಬಾವಿ ಸಭೆ ನಡೆಸಲು ಸ್ಪೀಕರ್ ರಮೇಶ್ ಕುಮಾರ್ ನಿರ್ಧರಿಸಿದ್ದಾರೆ.
