Asianet Suvarna News Asianet Suvarna News

Council Election Karnataka: 18 ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲ ಯಾರಿಗೆ ..?

  • ವಿಧಾನ ಪರಿಷತ್‌ ಚುನಾವಣೆಯಲ್ಲಿ ತಮ್ಮ ಪಕ್ಷದ ವತಿಯಿಂದ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿ
  • ಉಳಿದ ಕ್ಷೇತ್ರಗಳಲ್ಲಿ ಯಾರಿಗೆ ಬೆಂಬಲ ನೀಡಬೇಕೆಂಬುದರ ಬಗ್ಗೆ  ಕುಮಾರಸ್ವಾಮಿಯವರು ತಿಳಿಸಲಿದ್ದಾರೆ 
HD Kumaraswamy will Decide on Support  for Council election snr
Author
Bengaluru, First Published Dec 5, 2021, 7:14 AM IST

 ತುಮಕೂರು (ಡಿ.05):  ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election)  ತಮ್ಮ ಪಕ್ಷದ ವತಿಯಿಂದ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಮಾತ್ರ ಹಾಕಿದ್ದು ಉಳಿದ ಕ್ಷೇತ್ರಗಳಲ್ಲಿ ಯಾರಿಗೆ ಬೆಂಬಲ ನೀಡಬೇಕೆಂಬುದರ ಬಗ್ಗೆ ಕುಮಾರಸ್ವಾಮಿಯವರು ತಿಳಿಸಲಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು (HD Devegowda) ತಿಳಿಸಿದ್ದಾರೆ.  ಅವರು ತುಮಕೂರು (Tumakuru) ತಾಲೂಕು ಬಳ್ಳಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಜಯಪುರದಲ್ಲಿ(vijayapura) ನಮ್ಮ ಪಕ್ಷದ ಬೆಂಬಲಿಗರ 890 ವೋಟ್‌, ಗುಲ್ಬರ್ಗಾದಲ್ಲಿ (Kalaburagi) 1000. ಬೀದರ್‌ನಲ್ಲಿ 490, ರಾಯಚೂರಿನಲ್ಲಿ 890 ವೋಟ್‌ಗಳಿವೆ. ಹಾಗೆಯೇ ಧಾರವಾಡ, ಗದಗ, ಹಾವೇರಿಯಲ್ಲಿ ವೋಟ್‌ಗಳಿವೆ. ಅಲ್ಲಿ ನಾವು ಅಭ್ಯರ್ಥಿಗಳನ್ನು ಹಾಕಲು ಸಾಧ್ಯವಾಗಿಲ್ಲ. ಇಲ್ಲಿ ಕಾಂಗ್ರೆಸ್‌(Congress), ಬಿಜೆಪಿಯವರದ್ದು(BJP) ಹೆಚ್ಚಿನ ಮತಗಳಿವೆ. ಭಾನುವಾರ ಸಭೆ ನಡೆಸಿ ಇಲ್ಲಿನ ಮತಗಳನ್ನು ಯಾರಿಗೆ ಕೊಡಬೇಕು ಎಂದು ತಿಳಿಸುತ್ತೇವೆ ಎಂದರು.

ಕುಮಾರಸ್ವಾಮಿ (HD Kumaraswamy) ಅವರು ಆ ಭಾಗದ ಮುಖಂಡರ ಸಭೆ ನಡೆಸಲಿದ್ದಾರೆ. ಯಾರಿಗೆ ಬೆಂಬಲ ನೀಡಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದರು. ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ,  ತುಮಕೂರು (tumakur) ಕ್ಷೇತ್ರಗಳಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದು ಈ ಕ್ಷೇತ್ರಗಳಲ್ಲಿ ಗೆಲ್ಲಲ್ಲು ನಾವು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಚುನಾವಣೆಯಲ್ಲಿ ಗೆಲ್ಲುವ ಶಕ್ತಿ ಇಲ್ಲದ ಕಡೆ ಅಭ್ಯರ್ಥಿ ನಿಲ್ಲಿಸುವ ಬದಲಿಗೆ ಶಕ್ತಿ ಇರುವ ಕಡೆ ಪೈಪೋಟಿ ನೀಡಲು ತೀರ್ಮಾನಿಸಿರುವುದಾಗಿ ಹೇಳಿದರು.

ಪ್ರಧಾನಿಗೆ ಇರುವ ಕಷ್ಟವನ್ನಒಂದು ಮಾತಲ್ಲಿ ಹೇಳೋಕಾಗಲ್ಲ

ತಮ್ಮ ಮತ್ತು ಪ್ರಧಾನಿ ಮೋದಿ (Prime Minister narendra Modi ) ಭೇಟಿ ವಿಚಾರದ ಬಗ್ಗೆ ಪ್ರಸ್ತಾಪಿಸಿದ ದೇವೇಗೌಡರು ಪ್ರಧಾನಿಗೆ ಇರುವಂತಹ ಕಷ್ಟವನ್ನು ಒಂದು ಮಾತಲ್ಲಿ ಹೇಳೋದಕ್ಕೆ ಆಗುವುದಿಲ್ಲ ಎಂದರು. ಇಡೀ ಪ್ರಪಂಚವನ್ನೇ ಪೀಡಿಸುತ್ತಿರುವ ಕೊರೋನಾವನ್ನು (Corona) ಎದುರಿಸುವುದು ಅಷ್ಟು ಸುಲಭ ಅಲ್ಲ. ನಮ್ಮ ದೇಶ ಚಿಕ್ಕ ದೇಶವಲ್ಲ, 130 ಕೋಟಿ ಜನ ಸಂಖ್ಯೆ ಇರುವ ದೇಶ ಎಂದರು. ಮಣ್ಣಿನ ಮಗ ಎಂದು ನನ್ನ ತಂದೆ ನನಗೆ ನಾಮಕರಣ ಮಾಡಿಲ್ಲ. ಯಾರು ನಾಮಕರಣ ಮಾಡಿದರೋ ನನಗೆ ಗೊತ್ತಿಲ್ಲ ಎಂದ ಅವರು ಯಾರು ಹೇಳಿದರೋ, ಯಾವಾಗ ಹೇಳಿದರೋ ಗೊತ್ತಿಲ್ಲ, ಅದನ್ನು ಹೇಳಿಕೊಂಡು ಬರುತ್ತಿದ್ದಾರೆ. ಯಾರು ಎಂದು ಹುಡುಕಲಿ ಎಂದರು. ಹೀಗೆ ಹೇಳಿ ಎಂದು ನಾನು ಯಾರಿಗಾದರೂ ಹೇಳಿದ್ದೀನಾ ಎಂದು ಪ್ರಶ್ನಿಸಿದ ಗೌಡರು ಜನರಿಗೆ ನನ್ನ ಮೇಲೆ ಪ್ರೀತಿ ಹಾಗೂ ಹೋರಾಟದ ಮೇಲೆ ನಂಬಿಕೆಯಿಂದ ಹಾಗೆ ಕೂಗುತ್ತಾರೆ ಎಂದರು.

6 ಕ್ಷೇತ್ರದಲ್ಲಿ ಯಾರ ಬೆಂಬಲವನ್ನೂ ಕೇಳಲ್ಲ : ವಿಧಾನ ಪರಿಷತ್‌ ಚುನಾವಣೆಯಲ್ಲಿ (Karnataka MLC Election) ನಾವು ಸ್ಪರ್ಧಿಸಿರುವ 6 ಕ್ಷೇತ್ರಗಳಲ್ಲಿ ಯಾರ ಬೆಂಬಲವನ್ನೂ ಕೇಳಲ್ಲ. ಅವರ ಅಭ್ಯರ್ಥಿ ಸೋಲಿಸಿ ನಮಗೆ ಬೆಂಬಲ ಕೊಡಿ ಎನ್ನಲಾಗುವುದಿಲ್ಲ. 6 ಕ್ಷೇತ್ರಗಳಲ್ಲೂ ತ್ರಿಕೋನ ಸ್ಪರ್ಧೆ ಇದೆ. ಆದರೆ, ನಾವು ಸ್ಪರ್ಧೆ ಮಾಡದ ಕ್ಷೇತ್ರದಲ್ಲಿ ಯಾರಿಗೆ ಬೆಂಬಲ ಕೊಡಬೇಕೆಂಬುದನ್ನು ಇನ್ನು ಎರಡು ದಿನದಲ್ಲಿ ತೀರ್ಮಾನ ಮಾಡಲಾಗುತ್ತದೆ. ಮುಂದಿನ 2023ರ ಚುನಾವಣೆಯನ್ನು (Karnataka assembly Election) ಗಮನದಲ್ಲಿ ಇಟ್ಟುಕೊಂಡು ಬೆಂಬಲ ನೀಡುತ್ತೇವೆ.

-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

  • ವಿಧಾನ ಪರಿಷತ್‌ ಚುನಾವಣೆಯಲ್ಲಿ ತಮ್ಮ ಪಕ್ಷದ ವತಿಯಿಂದ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿ
  •  18 ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲ ಯಾರಿಗೆ ..?
  • ಯಾರಿಗೆ ಬೆಂಬಲ ನೀಡಬೇಕೆಂಬುದರ ಬಗ್ಗೆ ಕುಮಾರಸ್ವಾಮಿಯವರು ತಿಳಿಸಲಿದ್ದಾರೆ
  • ಪ್ರಧಾನಿಗೆ ಇರುವ ಕಷ್ಟವನ್ನಒಂದು ಮಾತಲ್ಲಿ ಹೇಳೋಕಾಗಲ್ಲ
Follow Us:
Download App:
  • android
  • ios