ಕುಮಾರಸ್ವಾಮಿಗೆ ವ್ಯವಹಾರ ಚೆನ್ನಾಗಿದ್ದಾಗ ನೈಸ್ ಬೇಕಿತ್ತು: ಡಿ.ಕೆ.ಸುರೇಶ್
ಮಾಧ್ಯಮಗಳಲ್ಲಿ ಪುಕ್ಕಟೆ ಪ್ರಚಾರ ಸಿಗುತ್ತದೆ ಎಂದು ನೈಸ್ ರಸ್ತೆ ಬಗ್ಗೆಯೇ ಮಾತನಾಡುತ್ತಿದ್ದಾರೆ. ಆ ನೈಸ್ ರಸ್ತೆಗೆ ಸಹಿ ಹಾಕಿದವರು ಯಾರು? ಡಿ.ಕೆ.ಶಿವಕುಮಾರ್ ಅಥವಾ ಕಾಂಗ್ರೆಸ್‌ನ ಬೇರೆ ನಾಯಕರು ಯಾರಾದರೂ ಸಹಿ ಹಾಕಿದ್ದಾರಾ? ನಿಮಗೆ ಸಹಿ ಹಾಕಲು ಯಾರು ಹೇಳಿದ್ದರು, ನಿಮ್ಮವರೇ ತಾನೇ? ಎಂದು ಪ್ರಶ್ನಿಸಿದ ಡಿ.ಕೆ. ಸುರೇಶ್
ರಾಮನಗರ(ಆ.18): ನಿಮಗೆ ವ್ಯವಹಾರ ಬೇಕು ಅಂದಾಗ ನೈಸ್ ರಸ್ತೆ ಬೇಕಾಗಿತ್ತು. ಈಗ ವ್ಯವಹಾರ ಇಲ್ಲವಲ್ಲ, ಅದಕ್ಕೆ ನೈಸ್ ರಸ್ತೆ ವಿರೋಧಿಸುತ್ತಿದ್ದೀರಿ. ಅಷ್ಟಕ್ಕೂ ನೀವು ಮುಖ್ಯಮಂತ್ರಿ ಆಗಿದ್ದಾಗ ನೈಸ್ ಯೋಜನೆ ಕುರಿತು ಒಂದೇ ಒಂದು ಸಭೆ ನಡೆಸಲಿಲ್ಲ ಏಕೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದ್ದಾರೆ.
ಮಾಧ್ಯಮಗಳಲ್ಲಿ ಪುಕ್ಕಟೆ ಪ್ರಚಾರ ಸಿಗುತ್ತದೆ ಎಂದು ನೈಸ್ ರಸ್ತೆ ಬಗ್ಗೆಯೇ ಮಾತನಾಡುತ್ತಿದ್ದಾರೆ. ಆ ನೈಸ್ ರಸ್ತೆಗೆ ಸಹಿ ಹಾಕಿದವರು ಯಾರು? ಡಿ.ಕೆ.ಶಿವಕುಮಾರ್ ಅಥವಾ ಕಾಂಗ್ರೆಸ್‌ನ ಬೇರೆ ನಾಯಕರು ಯಾರಾದರೂ ಸಹಿ ಹಾಕಿದ್ದಾರಾ? ನಿಮಗೆ ಸಹಿ ಹಾಕಲು ಯಾರು ಹೇಳಿದ್ದರು, ನಿಮ್ಮವರೇ ತಾನೇ? ನಿಮಗೆ ವ್ಯವಹಾರ ಬೇಕು ಅಂದಾಗ ನೈಸ್ ರಸ್ತೆ ಬೇಕಾಗಿತ್ತು. ಈಗ ವ್ಯವಹಾರ ಇಲ್ಲವಲ್ಲ ಅದಕ್ಕೆ ಮಾತನಾಡುತ್ತಿದ್ದೀರಿ ಎಂದು ಟೀಕಿಸಿದರು. ನೈಸ್ ರಸ್ತೆ ಹೆಸರಲ್ಲಿ ಬೆಂಗಳೂರು-ಮೈಸೂರು ಭಾಗದ ರೈತರಿಗೆ ಅನ್ಯಾಯವಾಗಿದ್ದರೆ ಅದು ನಿಮ್ಮಿಂದ ಅನ್ನುವುದನ್ನು ಮರೆಯಬಾರದು. ತಮಿಳುನಾಡಿನ ಹೊಸೂರು ಉದ್ಧಾರ ಆಗಲು ನೀವು ಕಾರಣ ಎಂದು ಹೇಳಿದರು.
ಪಾಪದ ಹಣದಲ್ಲಿ ವಿದೇಶ ಪ್ರವಾಸ ಅಗತ್ಯವಿಲ್ಲ: ಚಲುವರಾಯಸ್ವಾಮಿಗೆ ಎಚ್‌ಡಿಕೆ ತಿರುಗೇಟು
ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರದ ಕಡೆ ಜನ ಹೋಗುತ್ತಿದ್ದಾರೆ ಅಂದರೆ ಅದಕ್ಕೆ ಕಾರಣ ನೀವೇ. ನೈಸ್ ರಸ್ತೆಯನ್ನು ಪೂರ್ಣಗೊಳಿಸಿದ್ದರೆ ಸುತ್ತಮುತ್ತಲ ರೈತರ ಆಸ್ತಿಮೌಲ್ಯ .5 ರಿಂದ .10 ಕೋಟಿಗೆ ತಲುಪುತ್ತಿತ್ತು. ಮುಖ್ಯಮಂತ್ರಿ ಆಗಿದ್ದಾಗ ನೈಸ್ ಯೋಜನೆ ಕುರಿತು ಒಂದೇ ಒಂದು ಸಭೆ ಕರೆಯಲಿಲ್ಲ. ಮಾಧ್ಯಮಗಳಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದೀರಿ. ನೀವು ರೈತರಿಗೆ ಮಾಡಿರುವ ಅನ್ಯಾಯ ಮರೆಯಬೇಡಿ ಎಂದು ಸುರೇಶ್ ವಾಗ್ದಾಳಿ ನಡೆಸಿದರು.
ನೈಸ್ ರಸ್ತೆ ಬಗ್ಗೆ ಏನಾದರು ಒಂದು ತೀರ್ಮಾನ ತೆಗೆದುಕೊಳ್ಳಲೇ ಬೇಕಿದೆ. ಅದನ್ನು ಬಿಟ್ಟು ಇಲ್ಲದಿರುವ ವ್ಯಾಜ್ಯ ಸೃಷ್ಟಿಸಿದರೆ ಮೊಮ್ಮಕ್ಕಳ ಕಾಲದವರೆಗೂ ಸಮಸ್ಯೆ ಬಗೆಹರಿಯಲ್ಲ ಎಂದರು.
ಬಿಡದಿಯಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತದಿಂದ ಬಿಡದಿ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಮಂಜೂರಾಗಿರುವ ಕೆಸಿಸಿ ಬೆಳೆ ಸಾಲ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.