ಮಂಡ್ಯದಲ್ಲಿ ಭರ್ಜರಿ ಗೆಲವು: ಪ್ರಮಾಣಪತ್ರ ಸ್ವೀಕರಿಸುವ ಮುನ್ನ ಜ್ಯೋತಿಷ್ಯದ ಮೊರೆ ಹೋದ ಎಚ್‌ಡಿಕೆ!
ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ತೀವ್ರ ಜಿದ್ದಾಜಿದ್ದಿಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ವಿರುದ್ಧ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮಂಡ್ಯ (ಜೂ.04): ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ತೀವ್ರ ಜಿದ್ದಾಜಿದ್ದಿಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ವಿರುದ್ಧ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರಮಾಣಪತ್ರ ಸ್ವೀಕರಿಸಲು ಮಂಡ್ಯಗೆ ಆಗಮಿಸಿದ ಕುಮಾರಸ್ವಾಮಿ ಈ ಮುನ್ನ ಜ್ಯೋತಿಷ್ಯದ ಮೊರೆ ಹೋಗಿದ್ದಾರೆ. 4.30ರವರೆಗೆ ರಾಹುಕಾಲ ಇದ್ದ ಹಿನ್ನೆಲೆಯಲ್ಲಿ ಮಂಡ್ಯಕ್ಕೆ ಬಂದ್ರೂ ಪ್ರಮಾಣಪತ್ರ ಸ್ವೀಕರಿಸಲು ಕುಮಾರಸ್ವಾಮಿ ವಿಳಂಬ ಮಾಡಿದ್ದರು.
4 ಗಂಟೆಗೂ ಮೊದಲೇ ಮಂಡ್ಯಕ್ಕೆ ಆಗಮಿಸಿದ್ದ ಎಚ್‌ಡಿಕೆ ಮಂಡ್ಯದ ಖಾಸಗಿ ಹೋಟೆಲ್ ನಲ್ಲಿ ಕೆಲಕಾಲ ಇದ್ದು ಆ ಬಳಿಕ ಎಣಿಕೆ ಕೇಂದ್ರಕ್ಕೆ ಎಂಟ್ರಿ ಕೊಟ್ಟರು. 5ಗಂಟೆ ನಂತರ ಎಣಿಕೆ ಕೇಂದ್ರಕ್ಕೆ ಆಗಮಿಸಲಿರುವ ಎಚ್ಡಿಕೆ, ಎಣಿಕೆ ಕೇಂದ್ರದಲ್ಲಿ ಚುನಾವಣಾಧಿಕಾರಿಯಿಂದ ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ. ಇನ್ನು ಮಂಡ್ಯ ವಿವಿಯಲ್ಲಿ ನಡೆದ ಮತ ಎಣಿಕೆಯಲ್ಲಿ ಡಿಸಿ ಡಾ.ಕುಮಾರ್‌ರಿಂದ ಪ್ರಮಾಣಪತ್ರವನ್ನು ಎಚ್.ಡಿ.ಕುಮಾರಸ್ವಾಮಿ ಸ್ವೀಕರಿಸಲಿದ್ದಾರೆ.
ಸಿಎಂ, ಡಿಸಿಎಂ ದುರಹಂಕಾರದ ಮಾತಾಡ್ತಿದ್ರು, ಗ್ಯಾರಂಟಿಗಳು ಅವರ ಕೈ ಹಿಡಿದಿಲ್ಲ: ಆರ್.ಅಶೋಕ್
ಇನ್ನು ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರು ಸೋಲಿಸಿದ್ದರು. ಇದಾದ ನಂತರ 2023ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲಿ 5 ಕ್ಷೇತ್ರ ಕಾಂಗ್ರೆಸ್ ಗೆದ್ದರೆ, ಮತ್ತೊಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಸರ್ವೋದಯ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಆದರೆ, ಜೆಡಿಎಸ್ ಭದ್ರಕೋಟೆಯಲ್ಲಿ ಛಿದ್ರ ಮಾಡಿದ ಕಾಂಗ್ರೆಸ್ ವಿರುದ್ಧ ಸೋಲಿನ ಸೇಡನ್ನು ತೀರಿಸಿಕೊಳ್ಳುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2024ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಅಖಾಡ ಪ್ರವೇಶಿಸಿದ್ದರು.
ಈಗ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು 2 ಲಕ್ಷಕ್ಕಿಂತ ಅಧಿಕ ಮತಗಳ ಅಂತರದಿಂದ ಸೋಲಿಸುವ ಮೂಲಕ ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎಂಬ ಪಟ್ಟವನ್ನು ಮತ್ತೊಮ್ಮೆ ಉಳಿಸಿಕೊಂಡಿದೆ. ಹಳೆ ಕರ್ನಾಟಕದಲ್ಲಿ ಸ್ವಲ್ಪ ಸಮಸ್ಯೆ ಇತ್ತು. ನಾನು ಪ್ರಾರಂಭಿಕ ಹಂತದಲ್ಲಿ ಹಲವಾರು ನಾಯಕರ ಜೊತೆ ಮೊದಲೇ ಮಾತಾಡಿದ್ದೆ. ಈ ಮೂರೂ ಕ್ಷೇತ್ರ ಗಳನ್ನು ಗೆದ್ದಿದ್ರೆ ನಮ್ಮ ನಿರೀಕ್ಷೆ ಸಂಖ್ಯೆ ಮುಟ್ಟಬಹುದಿತ್ತು. ಚುನಾವಣೆ ನಡೆಯುವ ಸಂಧರ್ಭದಲ್ಲಿ ಸ್ವಲ್ಪ ಹಣದ ಸಮಸ್ಯೆ ಕೂಡಾ ಆಗಿತ್ತು. ಮೋದಿ ಹೆಸರಿನಲ್ಲಿ ಗೆಲ್ತೀವಿ ಅನ್ನೋ ಅತಿಯಾದ ನಂಬಿಕೆ ಯಿಂದ ಸ್ವಲ್ಪ ಮೈಮರೆತಿದ್ದಾರೆ. ಕಾಂಗ್ರೆಸ್ ಇಪ್ಪತ್ತು ಸ್ಥಾನ ಗೆಲ್ತೀವಿ ಅಂತಾ ಇದ್ದರು. ಜೆಡಿಎಸ್ ಅನ್ನು ಮುಗಿಸ್ತೀವಿ ಅಂತಾ ಇದ್ದರು. ಜೆಡಿಎಸ್ ಬಗ್ಗೆ ಕಳೆದ ವಿಧಾನಸಭೆ ಚುನಾವಣೆ ಬಳಿಕ ಏನೆಲ್ಲಾ ಮಾತಾಡಿದ್ರು ಅದನ್ನೂ ಮರೆಯಲ್ಲ ಎಂದು ಕಿಡಿಕಾರಿದರು.
ಡಿ.ಕೆ.ಸುರೇಶ್ ಸೋಲು ಅಘಾತ ತಂದಿದೆ: ಆಪರೇಶನ್ ಹಸ್ತದ ಮುನ್ಸೂಚನೆ ಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ
ನಾನು ನೂರಾ ಮುವತ್ತಾರು ಸ್ಥಾನ ಗೆದ್ದಿದ್ದೀನಿ. ಜೆಡಿಎಸ್ ಕೇವಲ ಹತ್ತೊಂಬತ್ತು ಸ್ಥಾನ ಮಾತ್ರ ಗೆದ್ದಿದೆ ಎಂಬ ದುರಂಹಕಾರದ ಮಾತುಗಳನ್ನು ಆಡಿದ್ದರು. ಅದಕ್ಕೆ ಉತ್ತರ ಈ ಫಲಿತಾಂಶ. ಬೆಂಗಳೂರು ಗ್ರಾಮಾಂತರ , ಮಂಡ್ಯ, ಕೋಲಾರ ಜಿಲ್ಲೆಯ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾಡಿನ ಜನತೆಗೆ ಮನವಿ ಮಾಡ್ತೀನಿ. ನಮಗೆ ಸಿಕ್ಕ ಆಶೀರ್ವಾದ, ನಾಡಿನ ಅಭಿವೃದ್ಧಿ ಗೆ ಮೋದಿ ಜೊತೆ ಮಾತನಾಡಿ ಶ್ರಮಿಸುತ್ತೇವೆ. ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಇಷ್ಟು ಸ್ಥಾನ ಪಡೆಯಲು ನಮ್ಮ ಕೆಲವು ಸಮಸ್ಯೆ ಗಳೇ ಕಾರಣ. ಗ್ಯಾರಂಟಿ ಯೋಜನೆಗಳಿಂದ ಇಷ್ಟು ಸ್ಥಾನ ಪಡೆದಿದೆ ಅಂತಾ ನಾನಂತೂ ಹೇಳಲ್ಲ. ನಮ್ಮ ಮೈತ್ರಿಯನ್ನು ಜನ ಒಪ್ಪಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.