Asianet Suvarna News Asianet Suvarna News

ಬಿಸ್‌ವೈ ಅಂತೆಯೇ ನನ್ನ ಮುಗಿಸಲು ಪ್ರಯತ್ನ ನಡೆದಿದೆ: ಕೇಂದ್ರ ಸಚಿವ ಹೆಚ್‌ಡಿಕೆ ಆರೋಪ

ಕುಮಾರಸ್ವಾಮಿ ಜೈಲಿಗೆ ಹಾಕಬೇಕು ಎಂಬ ಪ್ರಯತ್ನ ನಡೆತಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ನನ್ನ ಮುಗಿಸುವ ಪ್ರಯತ್ನ ಮಾಡ್ತಿದ್ದಾರೆ ಎಂದಿದ್ದಾರೆ.

HD Kumaraswamy slams siddaramaiah government over BS Yediyurappa POCSO case gow
Author
First Published Jun 14, 2024, 6:23 PM IST

ಬೆಂಗಳೂರು (ಜೂ.14):  ಕೇಂದ್ರದಲ್ಲಿ ಸಚಿವ ಸ್ಥಾನ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಮಂಡ್ಯ ಸಂಸದ ಹೆಚ್‌ ಡಿ ಕುಮಾರಸ್ವಾಮಿಗೆ ಅದ್ಧೂರಿ ಸ್ವಾಗತ ದೊರೆತಿದೆ. ಇದಾದ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಸಿಡಿ ಶಿವು ಅವರೇ, ನಾನು ಕೇಂದ್ರ ಸಚಿವನಾಗಿದ್ದೇನೆ
ಕೇಂದ್ರ ಸಚಿವರಾಗಿ ಮೊದಲ ಬಾರಿ ರಾಜ್ಯಕ್ಕೆ ಬಂದ ಹೆಚ್‌ಡಿಕೆ ತಮ್ಮ ಭಾಷಣದಲ್ಲಿ, ನಾಲ್ಕು ತಿಂಗಳ ಹಿಂದಿನ ಕೇಸ್. ಇವತ್ತು ಯಡಿಯೂರಪ್ಪ ಅವರ ಮೇಲೆ ನಾನ್ ಬೇಲಬಲ್ ಅಂತಾ ಕೇಸ್ ಹಾಕಲು ಹೊರಟಿದ್ದೀರಲ್ಲಾ. ನಾವು ಎಂಟು ಸ್ಥಾನ ಗೆದ್ದಿದ್ದೀವಿ ಅಂತ ಬೀಗ್ತಾ ಇದೀರಾ.? ಹಾಸನದಲ್ಲಿ ಚುನಾವಣೆಯಲ್ಲಿ ಗೆಲ್ಲಲು ಪೆನ್ ಡ್ರೈವ್ ಗಳನ್ನು ಹರಿಬಿಟ್ಟು ನೀಚ ರಾಜಕಾರಣ ಮಾಡಿದವರು ನೀವು. ಪೆನ್ ಡ್ರೈವ್ ಪ್ರಕರಣದಲ್ಲಿ ಆಡಿಯೋ ಬಂತಲ್ಲಾ, ಅದರ ಬಗ್ಗೆ ಏನು ಕ್ರಮ ತಗೊಂಡ್ರಿ.? ಸಿಡಿ ಶಿವು ಅವರೇ, ನಾನು ಕೇಂದ್ರ ಸಚಿವನಾಗಿದ್ದೇನೆ. ಈಗ ನಿಮ್ಮ ಮಟ್ಟಕ್ಕೆ ಇಳಿಯಲು ಆಗಲ್ಲ. ನಾನು ಸಚಿವನಾದ ಮೇಲೆ ಕೆಲವರಿಗೆ ನಿದ್ದೆ ಬರ್ತಾ ಇಲ್ಲ, ಊಟ ಸೇರ್ತಾ ಇಲ್ಲ. ನಾನು ಯಾರ ಮೇಲೂ ದ್ವೇಷ ಸಾಧಿಸಲ್ಲ. ನಾನು ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಆಗಿರಬಹುದು. ಬನ್ನಿ ಯಾವುದೇ ಇಲಾಖೆಯ ಏನೇ ಕೆಲಸಗಳು ಇದ್ದರೂ ಮಾಡಿಕೊಡುತ್ತೇನೆ. ನನಗೆ ಅನುಭವ ಇಲ್ಲ, ಸ್ವಲ್ಪ ಸಮಯ ಬೇಕು ಎಂದರು.

ಪ್ರಾಮಾಣಿಕ ವಾಗಿ ಆರೋಗ್ಯ ಲೆಕ್ಕಿಸದೆ ಕೆಲಸ ಮಾಡಿದ್ದೇನೆ. ಪಂಚರತ್ನ ಮಾಡುವಾಗ ಜನ ಸೇರುತ್ತಾ ಇದ್ದರು. ಆಗ ವಿವಿಧ ರೀತಿಯ ದಾಖಲೆಗಳನ್ನು ಮಾಡುವ ರೀತಿ ಹಾರಗಳನ್ನು ಹಾಕಿದ್ರಿ. ಆದ್ರೂ ಹತ್ತೊಂಬತ್ತು ಸ್ಥಾನ ಗಳಿಗೆ ಇಳಿದೆವು. ಇನ್ನು ಜನತಾದಳ ಮುಗಿದೇ ಹೋಯ್ತು ಅಂತಾ ಮಾತಾಡಿಕೊಂಡ್ರು, ನಮ್ಮ ಶಾಸಕರು ಕೆಲಸಗಳಿಗೆ ಅಂತಾ ಕಾಂಗ್ರೆಸ್‌ ನ ನಾಯಕರ ಬಳಿ ಹೋದಾಗಾ ನಿಮ್ಮ ಹನ್ನೆರಡು ಜನ ಶಾಸಕರು ನಮ್ಮ ಬಳಿ ಬಂದಿದ್ದಾರೆ . ನೀವು ಹದಿಮೂರನೆಯವರು, ಬನ್ನಿ ಅಂತಾ ಕರೆಯುತ್ತಿದ್ದರು ಅದೆಲ್ಲಾ ಗೊತ್ತಿದೆ ಎಂದರು.

ಬಳಿಕ ಮಾಧ್ಯಮದವರ ಜೊತೆ   ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಫೋಕ್ಸೋ ಕೇಸ್ ನಲ್ಲಿ ಬಿಗ್ ರಿಲೀಫ್ ಸಿಕ್ಕಿದ ವಿಚಾರವಾಗಿ ಮಾತನಾಡಿ, ಸರ್ಕಾರದಲ್ಲಿ ಕಾನೂನು ಅನುಭವ ಇರುವವರು ಸಾಕಷ್ಟು ಜನ ಇದ್ದಾರೆ. ಅಂತಹ ಸಿಎಂ ಸಿದ್ದರಾಮಯ್ಯ ಈಗ ನಾಲ್ಕು ತಿಂಗಳ ನಂತರ ಈ ಕೇಸ್ ಕೆದಕಿದ್ದಾರೆ.

ಹೆಚ್‌ಡಿ ಕುಮಾರಸ್ವಾಮಿ ಮುಂದೆ ದೇಶದ ಪ್ರಧಾನಿ ಆಗಬಹುದು: ಜಿಟಿ ದೇವೇಗೌಡ

ನನ್ನ ವಿಚಾರದಲ್ಲೂ ನನ್ನ ಮುಗಿಸಲು ಪ್ರಯತ್ನ ಮಾಡ್ತಿದ್ದಾರೆ. ಕೆಲವು ನಾಯಕರು ನನ್ನ ಮುಗಿಸುವ ಪ್ರಯತ್ನ ಮಾಡ್ತಿದ್ದಾರೆ ಮಾಡ್ಲಿ ಪಾಪ, ನನ್ನ ಮೇಲೆ ಯಾವುದಾದರೂ ಕೇಸ್ ಇದೆಯಾ ಅಂತ ಚೆಕ್ ಮಾಡ್ತಿದ್ದಾರೆ ಎಂದರು.

ಕುಮಾರಸ್ವಾಮಿ ಜೈಲಿಗೆ ಹಾಕಬೇಕು ಎಂಬ ಪ್ರಯತ್ನ ನಡೆತಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿ,  ಹೌದು, ಯಾವುದೋ ಹಳೇ ಕೇಸ್ ಹುಡುಕುತ್ತಿದ್ದಾರೆ. ಅವರಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಕುಮಾರಸ್ವಾಮಿನ ಹೇಗೆ ಮುಗಿಸಿಬೇಕು ಎಂಬುದು ಪ್ಲಾನ್ ಮಾಡ್ತಿದ್ದಾರೆ ಎಂದರು.

ಮಂಡ್ಯ: ಮಂಡಿಸೇವೆ ಮೂಲಕ ಹರಕೆ ತೀರಿಸಿದ ಕುಮಾರಸ್ವಾಮಿ ಅಭಿಮಾನಿ..!

ದರ್ಶನ್ ಕೇಸ್ ನಲ್ಲಿ ಸ್ಟೇಷನ್ ಗೆ  ಶಾಮಿಯಾನ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಹೇಳಿಕೆ ನೀಡಿ, ಇತಿಹಾಸದಲ್ಲಿ ಈ ರೀತಿಯ ಘಟನೆ ಎಂದೂ ನೋಡಿಲ್ಲ. ಈ ಸರ್ಕಾರಕ್ಕೆ ಗೌರವ ಇದ್ದರೆ ಸರಿಪಡಿಸಿಕೊಳ್ಳಲಿ ಎಂದರು.

Latest Videos
Follow Us:
Download App:
  • android
  • ios