Karnataka Politics: ಗೃಹ ಸಚಿವರು ಖಳನಟನ ಪಾತ್ರ ಮಾಡ್ತಿದ್ದಾರಾ?: ಕುಮಾರಸ್ವಾಮಿ
* ಜೆಜೆ ನಗರದ ಯುವಕ ಚಂದ್ರು ಹತ್ಯೆ ಪ್ರಕರಣ
* ಗೃಹ ಸಚಿವ ಆರಗ ಹೇಳಿಕೆಗೆ ಮಾಜಿ ಸಿಎಂ ಕಿಡಿ
* ಗೃಹ ಸಚಿವರು ತಮ್ಮ ಜವಾಬ್ದಾರಿ ಮರೆತು ಸಣ್ಣತನದ ಹೇಳಿಕೆ ನೀಡಿದ್ದಾರೆ
ಮೈಸೂರು(ಏ.07): ಬೆಂಗಳೂರಿನ ಜೆಜೆ ನಗರದ ಯುವಕ ಚಂದ್ರು ಕೊಲೆ(Chandru Murder) ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ತೀವ್ರ ಕಿಡಿಕಾರಿದ್ದಾರೆ. ಗೃಹ ಸಚಿವರು ಹಾಸ್ಯಗಾರನ ಪಾತ್ರ ಮಾಡುತ್ತಿದ್ದಾರಾ? ಅಥವಾ ಖಳನಟನ ಪಾತ್ರ ಮಾಡುತ್ತಿದ್ದಾರಾ?, ಗೃಹ ಸಚಿವರು ತಮ್ಮ ಜವಾಬ್ದಾರಿ ಮರೆತಿದ್ದಾರೆ, ಸಣ್ಣತನದ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉರ್ದು(Urdu) ಮಾತನಾಡಲಿಲ್ಲ ಎಂಬ ಕಾರಣಕ್ಕೆ ಹತ್ಯೆಯಾಗಿದೆ ಎಂದು ಗೃಹ ಸಚಿವರು ಮೊದಲು ಹೇಳಿಕೆ ನೀಡಿದ್ದರು, ನಂತರ ಆ್ಯಕ್ಸಿಂಡೆಂಟ್ ಕಾರಣಕ್ಕೆ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಅವರೇನು ಹುಡುಗಾಟ ಆಡುತ್ತಿದ್ದಾರಾ? ಈ ಕೊಲೆಯನ್ನು ಲಘುವಾಗಿ ಪರಿಗಣಿಸಬೇಡಿ. ಗೃಹ ಸಚಿವರು ತಮ್ಮ ಜವಾಬ್ದಾರಿ ಮರೆತಿದ್ದಾರೆ. ಚುಚ್ಚಿ ಚುಚ್ಚಿ ಕೊಲೆ ಆಗಿದೆ ಅಂತ ಪ್ರಚೋದಾನಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಪದೇ ಪದೆ ಸರ್ಕಾರವನ್ನು ಎಚ್ಚರಿಸುತ್ತಿದ್ದೇನೆ. ಮುಖ್ಯಮಂತ್ರಿ ಮೌನ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
'ಭಾವನಾತ್ಮಕವಾಗಿ ಛಿದ್ರಗೊಳಿಸಿ ಮತ ಗಿಟ್ಟಿಸುವ ಗಿಡುಗಗಳಿವು; ಇವರು ನೈಜ ಹಿಂದುಗಳೇ ಅಲ್ಲ'
ದಲಿತ ಕೊಲೆ ಆಗಿದ್ದಾನೆ ಅಂತ ಸಾಮರಸ್ಯಕ್ಕೆ ಧಕ್ಕೆ ತರುತ್ತಿದ್ದಾರೆ. ಪೋಲಿಸರು ಒಂದು ಹೇಳಿಕೆ ಕೊಟ್ಟರೆ, ಗೃಹ ಸಚಿವರು ಮತ್ತೊಂದು ಹೇಳಿಕೆ ಕೊಡುತ್ತಿದ್ದಾರೆ ಎಂದು ಹೇಳಿದರು.
ಗೃಹ ಸಚಿವರಾಗಲು ಆರಗ ನಾಲಾಯಕ್: ಸಿದ್ದು ಆಕ್ರೋಶ
ಹುಬ್ಬಳ್ಳಿ/ಬಾಗಲಕೋಟೆ: ಬೆಂಗಳೂರಿನ ಜೆಜೆ ನಗರದ ಯುವಕ ಚಂದ್ರು ಹತ್ಯೆಗೆ ಸಂಬಂಧಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ ಹೇಳಿಕೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಖಂಡಿಸಿದ್ದಾರೆ. ಆರಗ ಜ್ಞಾನೇಂದ್ರ ಗೃಹ ಸಚಿವರಾಗಲು ನಾಲಾಯಕ್ ಎಂದು ಕಿಡಿಕಾರಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉರ್ದು ಬಾರದಕ್ಕೆ ಕೊಲೆ ಆಗಿದೆ ಎಂದು ಗೃಹ ಸಚಿವರು ಹೇಳಿಕೆ ನೀಡುತ್ತಾರೆಂದರೆ ಏನು ಹೇಳಬೇಕು? ಹಿಂದೆ ಮೈಸೂರಲ್ಲಿ ಗ್ಯಾಂಗ್ ರೇಪ್ ಆದಾಗಲೂ ಇದೇ ರೀತಿ ಹೇಳಿಕೆ ನೀಡಿದ್ದರು. ಆರಗ ಅವರಿಗೆ ಅನುಭವವೂ ಇಲ್ಲ. ಇಲಾಖೆಯನ್ನೂ ನಿಭಾಯಿಸಲೂ ಬರಲ್ಲ. ಯಾರದ್ದೇ ಕೊಲೆಯಾದರೂ ಅದನ್ನು ಖಂಡಿಸುತ್ತೇನೆ. ಹಿಂದೂ(Hindu) ಸಮುದಾಯದವರು ಸತ್ತರೂ, ಮುಸ್ಲಿಮರು ಸತ್ತರೂ ಜೀವ ಜೀವವೇ. ಆದರೆ ಇವರಿಗೆಲ್ಲ ಹಾಗಲ್ಲ ಎಂದರು.
ನಮಗೆ ಕೊಟ್ಟ ಕಿರುಕುಳ ಜನತೆ ಅನುಭವಿಸಬೇಕಿದೆ, ಹಿಂದೂ ಯುವಕರಿಗೆ ಕೈ ಮುಗಿದು ಮನವಿ ಮಾಡಿದ HDK
ಇದೇ ವೇಳೆ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ಗೆ ಅಲ್ಖೈದಾ ಮುಖಂಡ ಬೆಂಬಲ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಎಲ್ರೀ ಉಗ್ರ, ಯಾರ್ರೀ ಉಗ್ರ... ಇವುಗಳನ್ನೆಲ್ಲ ಆರೆಸ್ಸೆಸ್ನವರೇ ಕಲಿಸೋದು. ಸಮಾಜದಲ್ಲಿ ಅಶಾಂತಿ ಉಂಟು ಮಾಡಲು, ಸಾಮರಸ್ಯ ಹಾಳುಮಾಡಲು, ಮತಗಿಟ್ಟಿಸಲು ಇಂಥವುಗಳನ್ನು ಹುಟ್ಟು ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.
ಬಿಜೆಪಿ ಸಹಕಾರ ಕೊಡದಿದ್ರೆ ನಿಮ್ಮನ್ನು ಯಾರು ಮೂಸುತ್ತಿರಲಿಲ್ಲ, ಎಚ್‌ಡಿಕೆಗೆ ತಿವಿದ ರೇಣುಕಾಚಾರ್ಯ
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸರಣಿ ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಹಲವು ಪ್ರಶ್ನೆಗಳನ್ನು ಹಾಕಿದ ರೇಣುಕಾಚಾರ್ಯ(MP Renukacharya), ಕುಮಾರಸ್ವಾಮಿ ಕಾಲೆಳಿದಿದ್ದರು.
ಸ್ವಯಂ ಘೋಷಿತ ಕರ್ನಾಟಕದ(Karnataka) ಆರುವರೆ ಕೋಟಿ ಹೃದಯ ಸಾಮ್ರಾಜ್ಯ ಗೆದ್ದ ಹೆಚ್ ಡಿ ಕುಮಾರಸ್ವಾಮಿ ಎಂದು ಸಂಬೋಧಿಸಿದ ರೇಣುಕಾಚಾರ್ಯ, 2006 ರಲ್ಲಿ ಬಿಜೆಪಿ ನಿಮ್ಮನ್ನು ಮುಖ್ಯಮಂತ್ರಿ ಮಾಡದಿದ್ದರೆ ಈ ಜನ್ಮದಲ್ಲಿ ನೀವು ಸಿಎಂ ಆಗುತ್ತಿರಲಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕಾಗಿ ನಮ್ಮ ಜೊತೆ ಓಡಿಬಂದು ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟವರು ನೀವು ಎಂದು ಕಿಡಿಕಾರಿದ್ದರು.