ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ ಸಂಘಟನೆಗಾಗಿ ಮುಂದಿನ ಏ.5ರ ಬಳಿಕ ಸಮಯ ಮೀಸಲಿಟ್ಟಿದ್ದೇನೆ. ಅದರ ಜೊತೆಗೆ ರಾಜ್ಯದ ನೀರಾವರಿ ಸಮಸ್ಯೆ ನಿವಾರಣೆಗೆ ಹಮ್ಮಿಕೊಂಡಿರುವ ಜನತಾ ಜಲಧಾರೆಯ ವಾಹನ ಜಾಥಾವನ್ನು ಏಪ್ರಿಲ್‌ನಿಂದ ಹಮ್ಮಿಕೊಂಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಹಾವೇರಿ/ಹುಬ್ಬಳ್ಳಿ (ಮಾ.26): ಉತ್ತರ ಕರ್ನಾಟಕದಲ್ಲಿ (North Karnataka) ಜೆಡಿಎಸ್‌ (JDS) ಸಂಘಟನೆಗಾಗಿ ಮುಂದಿನ ಏ.5ರ ಬಳಿಕ ಸಮಯ ಮೀಸಲಿಟ್ಟಿದ್ದೇನೆ. ಅದರ ಜೊತೆಗೆ ರಾಜ್ಯದ ನೀರಾವರಿ ಸಮಸ್ಯೆ ನಿವಾರಣೆಗೆ ಹಮ್ಮಿಕೊಂಡಿರುವ ಜನತಾ ಜಲಧಾರೆಯ ವಾಹನ ಜಾಥಾವನ್ನು ಏಪ್ರಿಲ್‌ನಿಂದ ಹಮ್ಮಿಕೊಂಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಜೆಡಿಎಸ್‌ ಕಾರ್ಯಕರ್ತರ ಬೃಹತ್‌ ಸಭೆ ಮತ್ತು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳು ಬದ್ಧತೆ ತೋರುತ್ತಿಲ್ಲ. 

ಆ ದೃಷ್ಟಿಯಿಂದ ನಮ್ಮ ಪಕ್ಷದಿಂದ ರಾಜ್ಯದ ನೀರಾವರಿ ಸಮಸ್ಯೆ ನಿವಾರಣೆಗೆ ದಿಟ್ಟನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಅದಕ್ಕಾಗಿ ನಮ್ಮ ನೀರಿನ ಹಕ್ಕು ಉಳಿಸಿಕೊಳ್ಳುವ ಕುರಿತು ಚಿಂತನೆ ನಡೆದಿದ್ದು ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅಧಿವೇಶನದ ನಂತರ ಈ ಕಾರ್ಯಕ್ರಮ ಆರಂಭ ಮಾಡುತ್ತೇವೆ. ರಾಜ್ಯದಲ್ಲಿ ಸುಮಾರು 51 ಸ್ಥಳದಲ್ಲಿನ ನೀರು ಸಂಗ್ರಹಿಸಿ ಕಳಸದಲ್ಲಿ ಪೂಜೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನರಲ್ಲಿ ತಿಳಿವಳಿಕೆ ಮೂಡಿಸಲು ಏಪ್ರಿಲ್‌ 9 ಅಥವಾ 10ರಿಂದ ಏಕಕಾಲಕ್ಕೆ ಜನತಾ ಜಲಧಾರೆ ವಾಹನಗಳು ರಾಜ್ಯದ 180 ಕ್ಷೇತ್ರದಲ್ಲಿ ಸಂಚರಿಸಲಿವೆ ಎಂದರು.

ಮೋದಿ ಆಡಳಿತದಲ್ಲಿ ಜನ ಸಂಪತ್ಭರಿತರಾಗಿದ್ದಾರೆಂದು HDK ವ್ಯಂಗ್ಯ

ಬಿಜೆಪಿ, ಕಾಂಗ್ರೆಸ್‌ ನಾಡಿನ ನೀರಾವರಿ ಕುರಿತು ನಿಧಾನಗತಿಯ ತೀರ್ಮಾನ ತೆಗೆದುಕೊಳ್ಳುತ್ತಿವೆ. ಹೀಗಾಗಿ ಅಕ್ಕಪಕ್ಕದ ರಾಜ್ಯಗಳು ನಮಗಿಂತ ಹೆಚ್ಚಿನದಾಗಿ ನೀರನ್ನು ಬಳಸಿಕೊಳ್ಳುತ್ತಿವೆ ಎಂದರು. ಇನ್ನು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದ ನವಲಗುಂದದ ಯಮನೂರು ರೈತರ ಮೇಲೆ ಪೊಲೀಸರಿಂದ ಹಲ್ಲೆ ನಡೆಸಲಾಯಿತು. ಅವರನ್ನು ಬಳ್ಳಾರಿ, ಚಿತ್ರದುರ್ಗ ಸೇರಿ ವಿವಿಧ ಜೈಲುಗಳಿಗೆ ಅಟ್ಟಲಾಯಿತು. ಅಂತ ಕಾಂಗ್ರೆಸ್‌ ನಾಯಕರು ಯಾವ ನೈತಿಕತೆ ಇಟ್ಟುಕೊಂಡು ಮಹದಾಯಿ ವಿಚಾರವಾಗಿ ಹೋರಾಟ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದರು. ಬೇರೆ ಪಕ್ಷಗಳಂತೆ ಜಾತಿ- ಧರ್ಮದ ನಡುವೆ ವಿಷಬೀಜ ಬಿತ್ತಿ ಮತಪೆಟ್ಟಿಗೆ ತುಂಬಿಸುವ ಪಕ್ಷ ನಮ್ಮದಲ್ಲ. ಸಮಾಜ ಒಡೆದು ಅಧಿಕಾರ ನಡೆಸುವುದು ಆ ಪಕ್ಷಗಳ ಕೆಲಸ ಎಂದು ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷದ ನೀತಿಯನ್ನು ಟೀಕಿಸಿದರು.

ಹಿರೇಕೆರೂರಲ್ಲಿ ಜ್ಯಾವಣ್ಣನವರ ಜೆಡಿಎಸ್‌ ಆಭ್ಯರ್ಥಿ: ಹಿರೇಕೆರೂರ ಮತಕ್ಷೇತ್ರದ ಮುಂದಿನ ಜೆಡಿಎಸ್‌ ಅಭ್ಯರ್ಥಿ ಜಯಾನಂದ ಜ್ಯಾವಣ್ಣನವರ ಎಂದು ಘೋಷಿಸಲಾಗಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮ ಅಭ್ಯರ್ಥಿಯನ್ನು ಜಯಗಳಿಸಿ ನೀವು ಹೇಳಿದಂತೆ ನಾನು ನಡೆದುಕೊಳ್ಳುತ್ತೇನೆ ಎಂದರು. ಒಂದು ಬಾರಿ ಸಂಪೂರ್ಣ ಬಹುಮತದೊಂದಿಗೆ ಯಾರ ಹಂಗಿಲ್ಲದೆ ಅಧಿಕಾರ ನಡೆಸಲು ಅವಕಾಶ ಕೊಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು. ಶಾಸಕ ಬಂಡೆಪ್ಪ ಕಾಶೆಂಪುರ ಮಾತನಾಡಿ, ಹಿರೇಕೆರೂರ ಮತಕ್ಷೇತ್ರದ ಮುಂದಿನ ಜೆ.ಡಿ.ಎಸ್‌. ಅಭ್ಯರ್ಥಿ ಜಯಾನಂದ ಜ್ಯಾವಣ್ಣನವರ ಆಗಿದ್ದು, ಅವರನ್ನು ಬಹುಮತದೊಂದಿಗೆ ಗೆಲ್ಲಿಸಿ ಎಂದು ಮನವಿ ಮಾಡಿದರು.

Mekedatu project ತಮಿಳುನಾಡು ವಿಧಾನಸಭೆ ನಿರ್ಣಯಕ್ಕೂ ರಾಜ್ಯಕ್ಕೂ ಸಂಬಂಧವಿಲ್ಲ ಎಂದ HDK

ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಎಚ್‌ಡಿಕೆ: ಕರ್ನಾಟಕದಲ್ಲಿ ಶುರುವಾಗಿರುವ ಹಿಂದೂ-ಮುಸ್ಲಿಂ ಮುಸುಕಿನ ಗುದ್ದಾಟಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ. ವಿಧಾನಸಭೆಯಲ್ಲಿ ಬುಧವಾರ ನಿಯಮ 69 ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಕುಮಾರಸ್ವಾಮಿ, ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ ಸಮವಸ್ತ್ರದ ಭಾಗವಾಗಿರುವ ವೇಲ್‌ ಅನ್ನೇ ಶಿರವಸ್ತ್ರವಾಗಿ ಬಳಸಲು ಅವಕಾಶ ನೀಡುವ ಮೂಲಕ ಶಿಕ್ಷಣ ಮುಂದುವರಿಸಲು ಅವಕಾಶ ನೀಡಬೇಕು. ಕೆಲವು ಹೆಣ್ಣು ಮಕ್ಕಳನ್ನು ರಿಮೋಟ್‌ ಕಂಟ್ರೋಲ್‌ನಂತೆ ಬಳಸುತ್ತಿರುವ ಸಂಘಟನೆಗಳನ್ನು ಮಟ್ಟ ಹಾಕಬೇಕು ಮತ್ತು ಪ್ರಕ್ಷುಬ್ಧ ವಾತಾವರಣವನ್ನು ಸೌಹಾರ್ದವಾಗಿ ತಿಳಿಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.