ಕುಟುಂಬದೊಂದಿಗೆ ಸಿಂಗಾಪುರಕ್ಕೆ ತೆರಳಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ರಾಜ್ಯ ಬಿಜೆಪಿ 'ಗ್ರ್ಯಾಂಡ್' ವೆಲ್ ಕಮ್ ಮಾಡಿದೆ.
ಬೆಂಗಳೂರು, [ಜ.03]: ವರ್ಷಾಂತ್ಯದಲ್ಲಿ ಕುಟುಂಬ ಸಮೇತ ಐದು ದಿನಗಳ ಕಾಲ ವಿದೇಶಿ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು [ಗುರುವಾರ] ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಸಿಂಗಾಪುರಕ್ಕೆ ತೆರಳಿದ್ದ ಕುಮಾರಸ್ವಾಮಿ ಅವರನ್ನು ರಾಜ್ಯ ಬಿಜೆಪಿ ವೆಲ್ ಕಮ್ ಮಾಡುವ ಮೂಲಕ ಕಾಲೆಳೆದಿದೆ.
ಹೊಸ ವರ್ಷದ ಪಾರ್ಟಿ ಮುಗಿಸಿಕೊಂಡು ತವರಿಗೆ ಮರಳಿದ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸ್ವಾಗತ. ನಿಮ್ಮ ಹೊಸ ವರ್ಷಾಚರಣೆ ಚೆನ್ನಾಗಿತ್ತು ಎನಿಸುತ್ತದೆ ಎಂದು ಟ್ವೀಟ್ ಮಾಡುವ ಮೂಲಕ ಎಚ್ಡಿಕೆ ಅವರನ್ನು ಬಿಜೆಪಿ ಸ್ವಾಗತಿಸಿದೆ.
ತಮ್ಮ ಟ್ವೀಟ್ನಲ್ಲಿ ನಿಮ್ಮ ಪ್ರವಾಸಗಳೆಲ್ಲವೂ ಮುಗಿದಿದ್ದರೆ, ನೀವು ಇನ್ನು ಮುಂದೆ ಮಾಡಬೇಕಾದ ಕೆಲಸಗಳು ಹೀಗಿವೆ ಎಂದು ಸಾಲ ಮನ್ನಾ, ಸ್ಟೀಲ್ ಬ್ರಿಡ್ಜ್ ವಿವಾದ ಸೇರಿದಂತೆ ಹಲವು ಪಟ್ಟಿ ಮಾಡಿ ಸಿಎಂ ಕರ್ತವ್ಯವನ್ನು ನೆನಪಿಸಿದ್ದಾರೆ.
