Asianet Suvarna News Asianet Suvarna News

ED ದಾಳಿ: ಜಮೀರ್ ಅಹ್ಮದ್ ಡೌಟ್‌ಗೆ ಕುಮಾರಸ್ವಾಮಿ ಪ್ರತಿಕ್ರಿಯೆ

* ಜಮೀರ್ ಅಹ್ಮದ್ ನಿವಾಸದ ಮೇಲೆ ಇಡಿ ದಾಳಿ
* ಎಚ್​.ಡಿ. ಕುಮಾರಸ್ವಾಮಿ ಅವರ ಮೇಲೇ ಡೌಟ್ ಜಮೀರ್
* ಜಮೀರ್ ಆರೋಪಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

HD Kumaraswamy Reacts On Zameer ahmed khan Suspects  In ED raids rbj
Author
Bengaluru, First Published Aug 9, 2021, 7:12 PM IST
  • Facebook
  • Twitter
  • Whatsapp

ರಾಮನಗರ, 09): ಜಾರಿ ನಿರ್ದೇಶನಾಲಯ ದಾಳಿ ಮಾಡಿದ ಹಿನ್ನೆಲೆ ನನಗೆ ಎಚ್​.ಡಿ. ಕುಮಾರಸ್ವಾಮಿ ಅವರ ಮೇಲೇ ಡೌಟ್ ಬರುತ್ತಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್  ಸ್ಫೋಟಕ ಹೇಳಿಕೆ ನೀಡಿದ್ದಾರೆ

ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಅವರಿಗೆ ನನ್ನ ಮೇಲೆ ಪ್ರೀತಿ. ಅದಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

ಜಮೀರ್ ಅಹ್ಮದ್ ಖಾನ್‌ರನ್ನು EDಗೆ ಸಿಲುಕಿಸಿದ್ದು ಕುಮಾರಸ್ವಾಮಿನಾ...?

ನನ್ನ ಮೇಲೆಯೇ ಕಣ್ಣಿದೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ ನನ್ನ ಮೇಲೇ ಕಣ್ಣು. ಯಾರೋ ಮಾತನಾಡುವುದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಅದೆಲ್ಲವೂ ಅನಾವಶ್ಯಕ. ಅದರ ಬಗ್ಗೆ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರ ನನ್ನ ಕೈಯಲ್ಲಿದ್ದೆಯಾ ? ಎಂದು ಪ್ರಶ್ನಿಸಿದರು.

ಪ್ರತಿದಿನ ಕಾರ್ಯಕರ್ತರು ಬರ್ತಾರೆ. ನಾನು ಕೃಷಿಯಲ್ಲಿ ತೊಡಗಿದ್ದೇನೆ. ತೋಟದ ಮನೆಯಲ್ಲಿ ನಾನು ಕೃಷಿಯಲ್ಲಿ ತೊಡಗಿದ್ದೇನೆ. ಇಡಿ, ಇನ್ ಕಮ್ ಟ್ಯಾಕ್ಸ್ ನನ್ನ ಕೈಯಲ್ಲಿ ಇಲ್ಲ. ಅವರಿಗೆ ನನ್ನ ಮೇಲೆ ಪ್ರೀತಿ.. ಅದಕ್ಕೆ ನನ್ನ ಮೇಲೆ ಆರೋಪ ಮಾಡ್ತಾರೆ ಎಂದು ಟಾಂಗ್ ಕೊಟ್ಟರು.
 

Follow Us:
Download App:
  • android
  • ios