ಬೆಂಗಳೂರು, (ಫೆ.25): ಜೆಡಿಯು ಪಕ್ಷದಿಂದ ಉಚ್ಛಾಟನೆಯಾದ ನಂತರ ಪ್ರಶಾಂತ್​ ಕಿಶೋರ್​ ಕರ್ನಾಟಕದಲ್ಲಿ ಜೆಡಿಎಸ್​ ಪರ ಕೆಲಸ ಮಾಡಲಿದ್ದಾರೆ.

ಕುಮಾರಸ್ವಾಮಿ ಈ ಕುರಿತು ಅವರ ಬಳಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನುವ ಗಾಳಿ ಸುದ್ದಿ ರಾಜ್ಯ ರಾಜಕಾರಣದಲ್ಲಿ ಓಡಾಡುತ್ತಿದೆ. ಆದರೆ, ಈ ಎಲ್ಲಾ ಊಹಾಪೋಹಗಳಿಗೂ ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಜೆಡಿಯು ಬಿಟ್ಟ ಪ್ರಶಾಂತ್ ಕಿಶೋರ್ ಜೆಡಿಎಸ್‌ಗೆ?: ದೊಡ್ಡ ಗೌಡರ ಪ್ಲ್ಯಾನ್ ಏನು?

ದೆಹಲಿಯಲ್ಲಿ ಆಮ್​ ಆದ್ಮಿ ಪಕ್ಷ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯುವಲ್ಲಿ ಚುನಾವಣಾ ತಂತ್ರಗಾರಿಕೆ ರೂಪಿಸಿದ್ದ ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್​ ಕಿಶೋರ್​ 2023ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ ಪರ ರಣತಂತ್ರ ಹೆಣೆಯಲಿದ್ದಾರೆ ಎಂದು ಸ್ವತಃ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಬಗ್ಗೆ ಇಂದು (ಮಂಳವಾರ) ಸುದ್ದಿಗಾರರೊಂದಿಗೆ ಮಾತನಾಡಿರುವ ಎಚ್‌​ಡಿಕೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ ಕಾರ್ಯತಂತ್ರಗಳ ಬಗ್ಗೆ ಕಿಶೋರ್​ ಜೊತೆಗೆ ಪ್ರಾಥಮಿಕ ಹಂತದ ಮಾತುಕತೆ ನಡೆಸಲಾಗಿದೆ ಎಂದರು.

ಈ ಚರ್ಚೆ ಫಲ ನೀಡಿದರೆ, 2023ರ ಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಶಾಂತ್​ ಕಿಶೋರ್​  ಕೆಲಸ ಮಾಡುವುದು ಬಹುತೇಕ ಖಚಿತ ಎಂದು ಹೇಳಿದರು.

'ಐ-ಪ್ಯಾಕ್' ಎಂಬ ಖಾಸಗಿ ಚುನಾವಣಾ ಪ್ರಚಾರ ಸಂಸ್ಥೆಯನ್ನು ನಡೆಸುತ್ತಿರುವ ಪ್ರಶಾಂತ್​ ಕಿಶೋರ್,​ ಈ ಹಿಂದೆ 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದರು.  ಪರಿಣಾಮ ಬಿಜೆಪಿ ಈ ಎರಡೂ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. 

ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ಗೆ ಝಡ್‌ ಭದ್ರತೆ!

ಕಳೆದ ದೆಹಲಿ ಚುನಾವಣೆಯಲ್ಲೂ ಸಹ ಪ್ರಶಾಂತ್​ ಕಿಶೋರ್​ ಅವರ ಐ ಪ್ಯಾಕ್​ ಸಂಸ್ಥೆ ಆಮ್​ ಆದ್ಮಿ ಪಕ್ಷದ ಪರ ಕೆಲಸ ಮಾಡುವ ಮೂಲಕ ಕೇಜ್ರಿವಾಲ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

2023ರ ಚುನಾವಣೆಗೆ ಜೆಡಿಎಸ್ ಸಿದ್ಧತೆ
ಹೌದು...ಮುಂಬರುವ 2023ರ ವಿಧಾಸಭೆ ಚುನಾವಣಗೆ ಈಗಿನಿಂದಲೇ ದಳಪತಿಗಳು ಕಾರ್ಯ ತಂತ್ರಗಳನ್ನ ಶುರು ಮಾಡಿದೆ. ಇದಕ್ಕೆ ಪೂರಕವೆಂಬಂತೆ ಮೊನ್ನೆ ಅಷ್ಟೇ ಜೆಡಿಎಸ್ ಸಾಮಾಜಿಕ ಜಾಲತಾಣ ಕಾರ್ಯಕರ್ತರ ಸಭೆ ನಡೆಸಿದ್ದು, ಸಾಮಾಜಿಕ ಜಾಲತಾಣಗಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆದಿದೆ.