Asianet Suvarna News Asianet Suvarna News

ಸತ್ಯ ಹೇಳಲು ನನಗೆ ಯಾವ ಹಿಂಜರಿಕೆ, ಭಯ ಇಲ್ಲ: ಎಚ್‌ಡಿಕೆ ಸಮಜಾಯಿಷಿ

* ಆರ್‌ಎಸ್‌ಎಸ್ ವಿರದ್ಧ ಹೇಳಿಕೆಗೆ ಸಮಜಾಯಿಷಿ ಕೊಟ್ಟ ಕುಮಾರಸ್ವಾಮಿ
* ಸತ್ಯ ಹೇಳಲು ನನಗೆ ಯಾವ ಹಿಂಜರಿಕೆ, ಭಯ ಇಲ್ಲ ಎಂದ ಕುಮಾರಣ್ಣ
* ಈ  ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥನೆ
 

hd kumaraswamy reacts On His Statement about RSS rbj
Author
Bengaluru, First Published Oct 6, 2021, 4:56 PM IST
  • Facebook
  • Twitter
  • Whatsapp

ಬೆಂಗಳೂರು, (ಅ. 06): ಆರ್‌ಎಸ್‌ಎಸ್ ವಿರದ್ಧ ಹೇಳಿಕೆ ಬೆನ್ನಲ್ಲೇ ಇದೀಗ ಅದಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸಮಜಾಯಿಷಿ ಕೊಟ್ಟಿದ್ದಾರೆ.

 ನಾನು ಯಾವುದೇ ಸಂಘ, ಸಂಸ್ಥೆ ಅಥವಾ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿಲ್ಲ. ಕೋರೋನ ಲಾಕ್ ಡೌನ್ ವೇಳೆಯಲ್ಲಿ ಹಲವಾರು ಲೇಖಕರು ಬರೆದ ಮಹತ್ವದ ಪುಸ್ತಕಗಳನ್ನು ಓದಿದೆ. ಇತಿಹಾಸದ ಕೆಲ ಅಂಶಗಳ ಬಗ್ಗೆಯೂ ಅಧ್ಯಯನ ಮಾಡಿದೆ. ಆ ಪುಸ್ತಕಗಳಲ್ಲಿ ಬರೆಯಲಾಗಿರುವ ಕೆಲ ಅಂಶಗಳನ್ನಷ್ಟೆ ನಾನು ಹೇಳಿದ್ದೇನೆ ಎಂದು ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಹೇಳಿದರು.

ಅಲ್ಲಿನ ವ್ಯವಹಾರಗಳ ದರ್ಶನ ಆಗಿದೆ: RSS ಶಾಖೆಗೆ ಬನ್ನಿ ಎಂದ ಸಿಟಿ ರವಿಗೆ ಎಚ್‌ಡಿಕೆತಿರುಗೇಟು

ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಪ್ರಸ್ತುತ ದೇಶ ಹೋಗುತ್ತಿರುವ ಹಾದಿ ನೋಡಿದರೆ ಜನರ ಮುಂದೆ ಸತ್ಯ ಇಡುವುದು ಅತ್ಯಂತ ಅಗತ್ಯವೆಂದು ನನಗೆ ಅನಿಸಿತು. ವಾಸ್ತವವಾಗಿ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ಜನರಿಗೆ ಅರ್ಥವಾಗುತ್ತಿಲ್ಲ. ಸತ್ಯ ಮುಚ್ಚಿಟ್ಟರೆ ತಮ್ಮ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ತಂದುಕೊಟ್ಟ ಮಹಾಪುರುಷರಿಗೆ ಅಪಚಾರ ಮಾಡಿದಂತೆ ಆಗುತ್ತದೆ ಎಂದಿದ್ದಾರೆ.

ಯಾವತ್ತಿದ್ದರೂ ಜನರಿಗೆ ಸತ್ಯ ಗೊತ್ತಾಗಲೇಬೇಕು. ಸತ್ಯ ಹೇಳಲು ನನಗೆ ಯಾವ ಹಿಂಜರಿಕೆ, ಭಯ ಇಲ್ಲ. ನನ್ನ ಹೇಳಿಕೆ ಯಾರ ಪರವೂ ಇಲ್ಲ ಅಥವಾ ವಿರೋಧವೂ ಇಲ್ಲ. ಸತ್ಯ ಚರ್ಚೆ ಆಗಬೇಕು ಎಂಬುದು ನನ್ನ ಅಭಿಲಾಷೆ. ನಾನು ಸತ್ಯದ ಪರ ಎಂದು ಹೇಳುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Follow Us:
Download App:
  • android
  • ios