ಬಿಜೆಪಿಗೆ ಸುಮಲತಾ ಬೆಂಬಲ, ಅದೇನ್ ಅಚ್ಚರಿ ಸುದ್ದಿ ಅಲ್ಲ ಎಂದ್ರು ಹೆಚ್‌ಡಿಕೆ

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಬೆಂಬಲ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ  ಹಾಸನ‌ ಜಿಲ್ಲೆ ಬೇಲೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ಅದೇನ್ ಅಚ್ಚರಿಯಾದ ಸುದ್ದಿ ಏನ್ ಅಲ್ವಲ್ಲಾ ಎಂದಿದ್ದಾರೆ.

HD Kumaraswamy reaction about MP sumalatha ambareesh announcement of support for BJP gow

ಹಾಸನ (ಮಾ.10): ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಬೆಂಬಲ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ  ಹಾಸನ‌ ಜಿಲ್ಲೆ ಬೇಲೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ಅದೇನ್ ಅಚ್ಚರಿಯಾದ ಸುದ್ದಿ ಏನ್ ಅಲ್ವಲ್ಲಾ,  ಈ ವಿಷಯ ಯಾರಿಗೇನು ಅಚ್ಚರಿ ಮೂಡಿಸುವ ಸುದ್ದಿ ಅಲ್ಲ. ಇದಕ್ಕೆ ಪ್ರಾಮುಖ್ಯತೆ ನಾವೇನ್ ಕೊಡಬೇಕಾದ ಅವಶ್ಯಕತೆ ಇಲ್ಲಾ ಅನ್ನೋದು ನನ್ನ ಅಭಿಪ್ರಾಯ. ಅವರು ಬಹಳ ದೊಡ್ಡವರಿದ್ದಾರೆ, ದೊಡ್ಡ ಪಕ್ಷಕ್ಕೆ ಸೇರಿದ್ದಾರೆ. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡಮಟ್ಟಕ್ಕೆ ನಾನು ಬೆಳೆದಿಲ್ಲ. ಅವರು ಏನ್ ಮಾತನಾಡಿದ್ದಾರೆ ಅದಕ್ಕೆ ರಿಯಾಕ್ಷನ್ ಕೊಡೋದು ಸೂಕ್ತ ಅಲ್ಲ ಅನ್ನೋದು ನನ್ನ ಅಭಿಪ್ರಾಯ. ಮಂಡ್ಯ ಜಿಲ್ಲೆಯ ಜನತೆ ಇದನ್ನು ತೀರ್ಮಾನ ಮಾಡುತ್ತಾರೆ. ಇದು ನನಗೇನು ಸಂಬಂಧವಿಲ್ಲ, ಅವರು ದೊಡ್ಡಮಟ್ಟಕ್ಕೆ ಬೆಳೆದಿರುವಂತವರು. ದೊಡ್ಡ ಪಕ್ಷಕ್ಕೆ ಬೇರೆ ಸೇರ್ತಿದ್ದಾರೆ, ನಾನೊಬ್ಬ ಸಣ್ಣವನು, ಅವರ ಬಗ್ಗೆ ಮಾತನಾಡಲು ಸಾಧ್ಯವಾ? ಅದ್ದರಿಂದ ಅದರ ಅವಶ್ಯಕತೆ ನನಗಿಲ್ಲ ಎಂದಿದ್ದಾರೆ.

ಮಂಡ್ಯ ಸಂಸದೆ ರಾಜಕೀಯ ನಡೆ ನಿಗೂಢ, ಜೆಡಿಎಸ್ ವಿರುದ್ಧ ಕೆಂಡ:
ಮಂಡ್ಯ ಸಂಸದೆ ಸುಮಲತಾ ಅವರ ರಾಜಕೀಯ ನಡೆ ಇನ್ನೂ ನಿಗೂಢವಾಗಿಯೇ ಉಳಿದುಕೊಂಡಿದೆ. ಬಿಜೆಪಿ ಸೇರ್ತಾರೆ ಅನ್ನೋ ವಿಚಾರದಲ್ಲಿ ಕುತೂಹಲವನ್ನು ಉಳಿಸಿಕೊಂಡಿರುವ ಸುಮಲತಾ ಶುಕ್ರವಾರ, ಮಂಡ್ಯದ ಚಾಮುಂಡೇಶ್ವರಿಯಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಹಲವು ವಿವರಗಳನ್ನು ನೀಡಿದರು. 'ಈ ಮಾರ್ಚ್‌ ವೇಳೆಗೆ ನಾನು ರಾಜಕೀಯಕ್ಕೆ ಬಂದು ನಾಲ್ಕು ವರ್ಷಗಳು. ಸರಿಯಾಗಿ ಹೇಳಬೇಕು ಎಂದರೆ 3 ವರ್ಷ 8 ತಿಂಗಳಾಗಿದೆ. ನನಗೆ ರಾಜಕೀಯ ಅನಿವಾರ್ಯವಾಗಿರಲಿಲ್ಲ. ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದೆ. ಜನರಿಗಿದ್ದ ಅಭಿಮಾನ, ಅಂಬರೀಶ್‌ ಮೇಲಿನ ಪ್ರೀತಿಯಿಂದಾಗಿ ನಾನು ರಾಜಕೀಯ ಪ್ರವೇಶಿಸಿದೆ.

 ನನಗೆ ಸ್ವಾರ್ಥ ಇದ್ದಿದ್ದರೆ, ನನ್ನ ದಾರಿ ಬೇರೆಯೇ ಆಗಿರುತ್ತಿತ್ತು. ಮಂಡ್ಯ ಜನರ ಮಾತಿಗೆ ಕಟ್ಟುಬಿದ್ದು ರಾಜಕೀಯಕ್ಕೆ ಬಂದೆ. ಅಂಬರೀಶ್‌ ಅವರಿಗಿದ್ದ ಪ್ರಭಾವಿಗಳ ಒಡನಾಟ ನನ್ನ ಜೊತೆಗೂ ಇದೆ. ನನ್ನ ಸ್ವಾರ್ಥಕ್ಕಾಗಿ ಮುಮಖ್ಯಂತ್ರಿಯನ್ನು ಎದುರಿಸುವ ತೀರ್ಮಾನ ಮಾಡಿರಲಿಲ್ಲ. ಅಂದು ನನ್ನ ಬೆಂಬಲಕ್ಕೆ ನಿಂತಿದ್ದು ಅಂಬಿ ಆಪ್ತರು. ಸರ್ಕಾರಕ್ಕೆ ಟಾರ್ಗೆಟ್‌ ಆಗುತ್ತೇನಾ? ನನ್ನ ಭವಿಷ್ಯ ಏನಾಗುತ್ತೆ? ನನ್ನ ನಂಬಿದ ಜನರಿಗೆ ಏನಾಗುತ್ತೆ ಎಂದು ಯೋಚನೆ ಮಾಡಿರಲಿಲ್ಲ. ಎಲ್ಲವನ್ನೂ ಪಣಕ್ಕಿಟ್ಟು ನಾನು ಇಂದು ಮುಂದೆ ಬಂದಿದ್ದೇನೆ' ಎಂದು ಸುದ್ದಿಗೋಷ್ಠಿಯ ಆರಂಭದಲ್ಲಿ ಮಾತನಾಡಿದರು.

ಸುಮಲತಾ ಚದುರಂಗ, ಜೆಡಿಎಸ್ ಶಾಸಕ ಬಿಟ್ಟಿಟ್ಟ ರಹಸ್ಯ!

ಎಂಎಲ್‌ಸಿಯಾಗುವಂತೆ ನನಗೆ ಬಹಿರಂಗ ಆಹ್ವಾನವೂ ಬಂದಿತ್ತು. ಅಂಬರೀಶ್‌ ಅವರ ಪತ್ನಿ ಎನ್ನುವುದನ್ನೂ ಮರೆತು ನನ್ನ ತೇಜೋವಧೆ ಮಾಡಿದರು. ಪ್ರತಿದಿನವೂ ನನ್ನ ಹೆಸರನ್ನು ಪ್ರಸ್ತಾಪಿಸಿ ಟಾರ್ಗೆಟ್‌ ಮಾಡಿದರು. ಆದರೆ, ಕಾಂಗ್ರೆಸ್‌ನ ಸ್ಥಳೀಯ ನಾಯಕರು, ಕಾರ್ಯಕರ್ತರು ಬೆಂಬಲಿಸಿದರು. ಚುನಾವಣೆ ವೇಳೆ ಬಿಜೆಪಿ ಬಹಿರಂಗವಾಗಿ ಬೆಂಬಲ ನೀಡಿತ್ತು. ರೈತ ಸಂಘ, ಬೇರೆ ಸಂಘಟನೆಗಳು ನನಗೆ ಬಹಿರಂಗವಾಗಿ ಬೆಂಬಲ ನೀಡಿದರು. ಕೊರೋನಾ ಟೈಮ್‌ನಲ್ಲಿ ಸಂಸದರ ನಿಧಿ ಬರದೇ ಇದ್ದರೂ, ನಾನು ಜನರ ಸಹಾಯಕ್ಕೆ ಬಂದೆ. ಆದರೆ, ಪ್ರತಿ ಹಂತದಲಲ್ಲೂ ನನಗೆ ಅವಮಾನ ಮಾಡಿದರು ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್‌ ನಾಯಕರ ವಿರುದ್ಧ ಹರಿಹಾಯ್ದರು.

Breaking News: ಕಮಲ ಹಿಡಿದ ಸುಮಲತಾ ಅಂಬರೀಶ್‌, ಆಪ್ತರ ಸಮ್ಮುಖದಲ್ಲಿ ಬೆಂಬಲವಷ್ಟೇ ಘೋಷಣೆ!

ಬಿಜೆಪಿ ಸೇರಲು ತಾಂತ್ರಿಕ ತೊಡಕು: ಸುಮಲತಾ 2019ರ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಗೆದ್ದಿದ್ದರು. ಗೆದ್ದ ಬಳಿಕ ಆರು ತಿಂಗಳಲ್ಲಿ ಬಿಜೆಪಿ ಸೇರಿದ್ದರೆ ಯಾವುದೇ ರೀತಿಯ ತೊಡಕು ಎದುರಾಗುತ್ತಿರಲಿಲ್ಲ. ಆದರೆ, ಸಂಸದರ ಅವಧಿ ಮುಕ್ತಾಯವಾಗಲು ಇನ್ನೂ ಒಂದು ವರ್ಷ ಬಾಕಿ ಇದೆ. ಈ ಹಂತದಲ್ಲಿ ಬಿಜೆಪಿಯಾಗಲಿ ಬೇರೆ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಅವರು ಅಧಿಕೃತವಾಗಿ ಸೇರಿದರೆ ಅವರ ಸಂಸದ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಕಾನೂನು ಹೋರಾಟ ನಡೆಸಿದರೆ, ಅವರ ಸಂಸದ ಸ್ಥಾನವನ್ನು ಸುಪ್ರೀಂ ಕೋರ್ಟ್‌ ಅಮಾನ್ಯ ಕೂಡ ಮಾಡಬಹುದು. ಲೋಕಸಭೆ ಚುನಾವಣೆಗೆ ಇನ್ನು 6 ತಿಂಗಳಿದ್ದಾಗ ಬೇಕಾದರೆ ಸುಮಲತಾ ಈ ನಿರ್ಧಾರವನ್ನು ಮಾಡಬಹುದು. ಆ ನಿಟ್ಟಿನಲ್ಲಿ ಯೋಚನೆ ಮಾಡಿರುವ ಸುಮಲತಾ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios