Asianet Suvarna News Asianet Suvarna News

ಜೆಡಿಎಸ್‌ಗೆ 20 ಸೀಟು ಬರಲ್ಲ ಅಂತೀರಲ್ಲ; ನೋಡ್ತಾ ಇರಿ, 20ರ ಮುಂದೆ 1 ಸೇರಿಸಿ 120 ಸೀಟು ಗೆಲ್ತೇವೆ: ಎಚ್ಡಿಕೆ

ನಾನು ಬಲವಂತಕ್ಕೆ ಸಿಎಂ ಆಗಿದ್ದು ಮುಗಿದುಹೋಗಿರುವ ಅಧ್ಯಾಯ. ಈಗ ಜೆಡಿಎಸ್ ಗೆ 20 ಸೀಟು ಬರಲ್ಲ ಅಂತ ಹೇಳ್ತಿರಲ್ಲ? ನೋಡ್ತಾ ಇರಿ, 20ರ ಸೀಟು ಮುಂದೆ 1ನಂಬರ್ ಸೇರಿಸಿ 120 ಸ್ಥಾನ ರಾಜ್ಯದ ಜನ ತರುತ್ತಾರೆ.  20ಸೀಟು ಬರುತ್ತೆ ಅಂತ ಹೇಳೋರು ನೀವ್ಯಾರು? ರಾಜ್ಯದ ಜನ ಅದನ್ನು ತೀರ್ಮಾನ ಮಾಡ್ತಾರೆ‌‌  ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

HD Kumaraswamy outraged on Siddaramaiah statement at vijayapur rav
Author
First Published Jan 22, 2023, 12:32 PM IST

ವಿಜಯಪುರ (ಜ.22) : 'ಗೆದ್ದೆತ್ತಿನ ಬಾಲ ಹಿಡಿದು ನಾನು ಹೋಗಿಲ್ಲ. ಬಿಜೆಪಿಯ ಬಿ ಟೀಂ ಅಂತ ಹೇಳಿದ ಕಾಂಗ್ರೆಸ್‌ನವರೇ ಬಿಜೆಪಿಯ ಬಿ ಟೀಂ ಬಳಿ ಬಂದ್ರು' ಸಿದ್ದರಾಮಯ್ಯರ 'ಗೆದ್ದೆತ್ತಿನ ಬಾಲ' ಹೇಳಿಕೆಗೆ ಟಾಂಗ್ ಕೊಟ್ಟ ಎಚ್‌ಡಿಕೆ.

 ಎಚ್‌ಡಿ ಕುಮಾರಸ್ವಾಮಿಯವರು ಬಳವಾಟ್ ಗ್ರಾಮದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದರು.

ನಾವು ಗೆದ್ದೆತ್ತಿನ ಬಾಲ ಹಿಡಿದಿಲ್ಲ:

'ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ 20 ಸೀಟು ಗೆದ್ದರೆ ಅದೇ ಹೆಚ್ಚು. ಗೆದ್ದೆತ್ತಿನ ಬಾಲ ಹಿಡಿಯುತ್ತಾರೆ ಎಂದು ಕಾಂಗ್ರೆಸ್‌ನವರು ಹೇಳ್ತಾರೆ. ನಾವು ಅರ್ಜಿ ಹಿಡ್ಕೊಂಡು ಹೋಗಿದ್ವಾ ಅವರ ಮನೆಗೆ? ನನ್ನನ್ನೇ ಸಿಎಂ ಮಾಡಿ ಅಂತಾ ಅರ್ಜಿ ಹಾಕಿರಲಿಲ್ಲ. ಅಂದು ಅಶೋಕ್ ಹೊಟೇಲ್ ನಲ್ಲಿ ದೇವೇಗೌಡರು ಏನು ಹೇಳಿದ್ರು? ನನ್ನ ಮಗನ ಆರೋಗ್ಯ ಅಷ್ಟು ಸರಿ ಇಲ್ಲ..ನೀವೇ ಯಾರಾದರೂ ಸಿಎಂ ಆಗಿ ಅಂತ ಹೇಳಿರಲಿಲ್ವ? ಗುಲಾಂ ನಬಿ ಆಜಾದ್, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ಬದುಕಿದ್ದಾರೆ ಅಲ್ಲಿ ಏನು ಮಾತುಕತೆ ನಡೆದಿದೆ ಅಂತಾ ಅವರೇ  ಹೇಳಲಿ ಎಂದು ಸಿದ್ದರಾಮಯ್ಯರ ವಿರುದ್ಧ ವಾಗ್ದಾಳಿ ನಡೆಸಿದರು.

 

ಗೆದ್ದೆತ್ತಿನ ಬಾಲ ಹಿಡಿಯುವ ಪಕ್ಷ ಜೆಡಿಎಸ್‌: ಸಿದ್ದರಾಮಯ್ಯ

ಗುಲಾಂ ನಬಿ ಆಜಾದ್, ಗೆಹ್ಲೋಟ್ ಹೈಕಮಾಂಡ್ ತೀರ್ಮಾನ ಮಾಡಿದೆ ನೀವೇ ಆಗಿ ಅಂದ್ರು. ನನಗೆ ಸಿಎಂ ಪಟ್ಟ. ಬಲವಂತವಾಗಿ ಕಟ್ಟಿದ್ದು ನೀವೇ, ಮೈತ್ರಿ ಸರ್ಕಾರ ತೆಗೆದವರು ನೀವೆ. ನಾನು ಇದೆಲ್ಲ ವಿಚಾರವಾಗಿ ನಿಮ್ಮ ಹೈಕಮಾಂಡ್ ಗೆ ದೂಷಣೆ ಕೊಡಲ್ಲ.  ಇದೆಲ್ಲ ಹುಳುಕು ಹೇಳಿಕೊಳ್ಳದೆ ಏನೇನೋ ಹೇಳಿಕೊಳ್ತಾರೆ ಎಂದರು.

ನಾನು ಬಲವಂತಕ್ಕೆ ಸಿಎಂ ಆಗಿದ್ದು ಮುಗಿದುಹೋಗಿರುವ ಅಧ್ಯಾಯ. ಈಗ ಜೆಡಿಎಸ್ ಗೆ 20 ಸೀಟು ಬರಲ್ಲ ಅಂತ ಹೇಳ್ತಿರಲ್ಲ? ನೋಡ್ತಾ ಇರಿ, 20ರ ಸೀಟು ಮುಂದೆ 1ನಂಬರ್ ಸೇರಿಸಿ 120 ಸ್ಥಾನ ರಾಜ್ಯದ ಜನ ತರುತ್ತಾರೆ.  20ಸೀಟು ಬರುತ್ತೆ ಅಂತ ಹೇಳೋರು ನೀವ್ಯಾರು? ರಾಜ್ಯದ ಜನ ಅದನ್ನು ತೀರ್ಮಾನ ಮಾಡ್ತಾರೆ‌‌ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ವಿಜಯಪುರದಲ್ಲಿ ಪಂಚರತ್ನ ರಥಯಾತ್ರೆ: 

ಜಿಲ್ಲೆಯಲ್ಲಿ 6ನೇ ದಿನ ಹಾಗೂ ಕೊನೆಯ ದಿನದ ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದು ಸಾವಿರಾರು ಜನರು ರಥಯಾತ್ರೆಯಲ್ಲಿ ಭಾಗಿಯಾದರು. ನಾಳೆ ಬಾಗಲಕೋಟೆ ಜಿಲ್ಲೆಗೆ ಪ್ರವೇಶಿಸಲಿರುವ ಜೆಡಿಎಸ್ ಪಂಚರತ್ನ ರಥಯಾತ್ರೆ.

ಇಂದಿಗೆ 50ನೇ ದಿನ ಪೂರೈಸಿದ ರಥಯಾತ್ರೆ:

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಗುರಿ ಹೊಂದಿರುವ ಜೆಡಿಎಸ್‌ ಪಕ್ಷವು ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಬೇಕು ಎಂಬ ಉದ್ದೇಶ ಹೊಂದಿದೆ. ಇದಕ್ಕಾಗಿ ಪಂಚರತ್ನ ಯಾತ್ರೆ ಹೆಸರಲ್ಲಿ ಚುನಾವಣಾ ಪ್ರಚಾರವನ್ನ ಕೈಗೊಂಡು ಇಂದಿಗೆ 50ನೇ ದಿನ ಪೂರೈಸಿದೆ.

ಇಂಡಿ, ಸಿಂದಗಿ, ದೇವರಹಿಪ್ಪರಗಿ, ನಾಗಠಾಣ ಮತಕ್ಷೇತ್ರಗಳಲ್ಲಿ ಸಂಚರಿಸಿದ ನಂತರ ನಿನ್ನೆ ಮುದ್ದೇಬಿಹಾಳ ಯಾತ್ರೆ ನಡೆಯಿತು. ಸಿಂದಗಿ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಸೋಮಜಾಳ ಹೃದಯಾಘಾತದಿಂದ ಅಕಾಲಿಕ ನಿಧನರಾದ ಹಿನ್ನೆಲೆ ಸೋಮಜಾಳದಲ್ಲಿ ಅಂತಿಮ ದರ್ಶನ ಪಡೆದ ಕುಮಾರಸ್ವಾಮಿಯವರು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. 

ಅಂತ್ಯಕ್ರಿಯೆ ಆಗುವವರೆಗೂ ಮುದ್ದೇಬಿಹಾಳದ ಪಂಚರತ್ನ ಯಾತ್ರೆ ಮೊಟಕುಗೊಳಿಸಿಲಾಗಿತ್ತು ನಂತರ ಮುದ್ದೇಬಿಹಾಳದಲ್ಲಿ ಮುಂದುವರೆದಿದ್ದ ರಥಯಾತ್ರೆ. ತಡರಾತ್ರಿ ಮತಕ್ಷೇತ್ರದ ಬಳವಾಟ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದರು. 

ಇಂದು ಬಳವಾಟ ಗ್ರಾಮದಿಂದ ಬಸವನ ಬಾಗೇವಾಡಿಯ ಇಂಗಳೇಶ್ವರಕ್ಕೆ ರಥಯಾತ್ರೆ ಮುಂದುವರಿಯಲಿದ್ದು. ಬಳಿಕ ಬಸವನ ಬಾಗೇವಾಡಿ ಹಾಗೂ ಬಬಲೇಶ್ವರ ಕ್ಷೇತ್ರದಲ್ಲಿ ಸಂಚರಿಸಲಿರುವ ಪಂಚರತ್ನ ಯಾತ್ರೆ.

Prajadwani Bus Yatra: ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಕಾಂಗ್ರೆಸ್‌ ಶಕ್ತಿ ಪ್ರದರ್ಶನ

ಬಸವನ ಬಾಗೇವಾಡಿಯಲ್ಲಿ ರೋಡ್ ಶೋ :

ಬಸವನ ಬಾಗೇವಾಡಿ, ಟಕ್ಕಳಕಿ ಗ್ರಾಮ, ಮುತ್ತಗಿ ಕ್ರಾಸ್, ಮಟ್ಟಿಹಾಳ ಕ್ರಾಸ್ ರೋಡ್ ಶೋ ನಡೆಸಲಿರುವ ಕುಮಾರಸ್ವಾಮಿಯವರು, ಬಳಿಕ ಹಿರೇಆಸಂಗಿ, ಕೊಲ್ಹಾರ ನಂತರ ಕಾರಜೋಳ ಮಾರ್ಗವಾಗಿ ಬಬಲೇಶ್ವರ ಮತಕ್ಷೇತ್ರ ಪ್ರವೇಶಿಸಲಿರುವ ರಥಯಾತ್ರೆ. ಸಂಜೆ 4 ಗಂಟೆಗೆ ಬಬಲೇಶ್ವರದಲ್ಲಿ ಬಹಿರಂಗ ಸಭೆ. ಬಬಲೇಶ್ವರ ಮತಕ್ಷೇತ್ರದ ನಿಡೋಣಿ ಗ್ರಾಮದಲ್ಲಿ ವಾಸ್ತವ್ಯ. ನಾಳೆ ಬಾಗಲಕೋಟೆ ಜಿಲ್ಲೆ ಪ್ರವೇಶಿಸಲಿರುವ ಜೆಡಿಎಸ್ ಪಂಚರತ್ನ ರಥಯಾತ್ರೆ.

Follow Us:
Download App:
  • android
  • ios