ಬೆಂಗಳೂರು(ಜು.30) ಎಚ್. ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ನಡುವಿನ ವಾರ್ ತಾರಕಕ್ಕೇರಿದೆ. ಮೈತ್ರಿ ನಡುವಿನ ಬಿರುಕಿಗೆ ಎರಡೂ ಪಕ್ಷಗಳು ಪರಸ್ಪರ ದೂರಿಕೊಳ್ಳುತ್ತಿದ್ದಾರೆ. ಈ ವಾಕ್ಸಮರದ ನಡುವೆ ಕುಮಾರಸ್ವಾಮಿ ಪರೋಕ್ಷವಾಗಿ ನಮ್ಮ ಸರ್ಕಾರಕ್ಕೆ ಬೆಂಬಲ ನೀಡ್ತಾ ಇದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ನೀಡಿರುವ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ. 

ಹೌದು ರಾಜ್ಯ ವಿಧಾನ ಪರಿಷತ್ ಸದಸ್ಯ ಸಿಪಿ ಯೋಗಿಶ್ವರ್ ಇಂತಹ ಹೇಳಿಕೆ ನೀಡಿದ್ದು, ಇದು ರಾಜ್ಯ ರಾಜ್ಯಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಕುಮಾರಸ್ವಾಮಿ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿರುವ ಅವರು 'ಡಿಕೆಶಿ ಸಹೋದರರು ಕುಮಾರಸ್ವಾಮಿಗೆ ತೊಂದರೆ ಮಾಡ್ತಾ ಇದ್ದಾರೆ. ರಾಮನಗರದಲ್ಲಿ ಜೆಡಿಎಸ್ ನವರನ್ನು ಕಾಂಗ್ರೆಸ್ ಸೆಳೆಯುತ್ತಿದೆ. ಹೀಗಾಗಿ ಕುಮಾರಸ್ವಾಮಿ ನಮಗೆ ಪರೋಕ್ಷವಾಗಿ ಬೆಂಬಲ ಮಾಡ್ತಾ ಇದ್ದಾರೆ ಹಾಗೂ ನಮ್ಮ ಸರ್ಕಾರದಿಂದ ಸಾಕಷ್ಟು ಪ್ರಯೋಜನವನ್ನೂ ಪಡೆಯುತ್ತಿದ್ದಾರೆ' ಎಂದಿದ್ದಾರೆ.

ಬೇಡವೆಂದರೂ ನೀವೇ ನನ್ನನ್ನು ಸಿಎಂ ಮಾಡಿದಿರಿ: ಎಚ್‌ಡಿಕೆ ಕಿಡಿ!

ಅಲ್ಲದೇ ರಾಜ್ಯ ಸಭೆ ಆಯ್ಕೆ ವಿಚಾರದಲ್ಲಿ ಕುಮಾರಸ್ವಾಮಿ ಸಹಕಾರ ನೀಡಿದ್ರು. ಹೀಗಾಗಿ ಬಿಜೆಪಿ ಜೊತೆ ಕೈಜೋಡಿಸಲು ಜೆಡಿಎಸ್ ಕಾರ್ಯಕರ್ತರಿಗೆ ನಾನು ಮನವಿ ಮಾಡ್ತೇನೆ. ಕುಮಾರಸ್ವಾಮಿ ಏನು ಡಿಕೆಶಿಗೆ ಹೆದರಲ್ಲ. ಈ ಹಿಂದೆ ಡಿಕೆಶಿ ಹೆಚ್ಡಿಕೆ ಒಟ್ಟಿಗೆ ಕೈ ಜೋಡಿಸಿದ್ರು. ಈಗ ಪರಸ್ಪರ ಕಿತ್ತಾಡುತ್ತಿದ್ದಾರೆ ಎಂದಿದ್ದಾರೆ.