Asianet Suvarna News Asianet Suvarna News

ಸಾರ್ವಜನಿಕರ ಭೇಟಿಗೆ ಸಮಯ ನಿಗದಿ ಮಾಡಿದ ಎಚ್‌ಡಿಕೆ : ಇನ್ಮುಂದೆ ಇಲ್ಲೇ ರಾಜಕೀಯ

  • ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಾರ್ವಜನಿಕರಿಗೆ ತಮ್ಮ ಭೇಟಿ ಸಮಯ ನಿಗದಿ ಮಾಡಿದ್ದಾರೆ. 
  •  ಇನ್ನು ಮುಂದೆ ಪ್ರತಿದಿನ ಸಾರ್ವಜನಿಕರಿಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಬೆಳಿಗ್ಗೆ 8.30 ರಿಂದ 10.30 ರವರೆಗೆ  ಅವಕಾಶ ಕಲ್ಪಿಸಿದ್ದಾರೆ.  
HD Kumaraswamy inaugurates new Office At bidadi snr
Author
Bengaluru, First Published Jul 5, 2021, 2:17 PM IST

ಬೆಂಗಳೂರು (ಜು.05): ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಾರ್ವಜನಿಕರಿಗೆ ತಮ್ಮ ಭೇಟಿ ಸಮಯ ನಿಗದಿ ಮಾಡಿದ್ದಾರೆ. 

 ಇನ್ನು ಮುಂದೆ ಪ್ರತಿದಿನ ಸಾರ್ವಜನಿಕರಿಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಬೆಳಿಗ್ಗೆ 8.30 ರಿಂದ 10.30 ರವರೆಗೆ  ಅವಕಾಶ ಕಲ್ಪಿಸಿದ್ದಾರೆ.  

ಕಳೆದ ಆರು ತಿಂಗಳಿನಿಂದ ಬಿಡದಿ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿರುವ ಕುಮಾರಸ್ವಾಮಿ. ಇಸ್ರೇಲ್ ಮಾದರಿಯಲ್ಲಿ ತೋಟವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. 
ಬೆಂಗಳೂರಿನ ಮನೆಯಲ್ಲಿ ಸಾರ್ವಜನಿಕರಿಗೆ ಭೇಟಿ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಬಿಡದಿ ತೋಟದ ಮನೆಯಲ್ಲಿ ಕಛೇರಿ ಉದ್ಘಾಟನೆ ಮಾಡಿ ಇಲ್ಲಿಯೇ ಸಾರ್ವಜನಿಕರನ್ನು ಭೇಟಿ ಮಾಡಲಾಗುತ್ತದೆ.  ಬಿಡದಿ ತೋಟದ ಮನೆಯಿಂದಲೇ ಇನ್ನು ಮುಂದೆ ರಾಜಕೀಯ ಚಟುವಟಿಕೆಗಳು ನಡೆಯಲಿದೆ. 

ಮೈಷುಗರ್ ಸಕ್ಕರೆ ಕಾರ್ಖಾನೆ ಖಾಸಗಿಗೆ ಕೊಡಬೇಡಿ; ಸಿಎಂಗೆ ಎಚ್‌ಡಿಕೆ ಮನವಿ ..  
ಮೇಕೆದಾಟು ವಿಚಾರದ ಬಗ್ಗೆ ಪ್ರತಿಕ್ರಿಯೆ:  ತಮಿಳುನಾಡಿನ ಮುಖ್ಯಮಂತ್ರಿ ಹೇಳಿಕೆ ಗಮನಿಸಿದ್ದೇನೆ. ನಾವು ಮೇಕೆದಾಟಿನಲ್ಲಿ ಸಂಗ್ರಹ ಮಾಡುವುದು 67 ಟಿಎಂಸಿ ನೀರು. ಶಿಂಷಾ, ಕೆ ಆರ್ ಎಸ್ ಭಾಗದಿಂದ ಬರುವ ನೀರಿನ ಭಾಗವನ್ನು ಅವರಿಗೂ ಕೊಡಬೇಕಿದೆ.  ಆ ನೀರಿನ ಪ್ರಮಾಣ ಕಡಿಮೆ ಆಗುತ್ತೆ ಎಂಬ ಆತಂಕ ಅವರದ್ದು.  

ಮೇಕೆದಾಟಿನಲ್ಲಿ ವಿದ್ಯುತ್ ಶಕ್ತಿ ವಿಚಾರವೇ ಬೇರೆ, ಜಲಾಶಯ ವಿಚಾರವೇ ಬೇರೆ ಎಂದು ಹೇಳಿದ್ದಾರೆ.  ತಮಿಳುನಾಡಿನ ಸಿಎಂ ಗೆ ನಾನೇ ಸ್ವತಃ ಮನವಿ ಮಾಡುತ್ತೇನೆ. 
ನ್ಯಾಯಾಧೀಕರಣ ತೀರ್ಪು ನೀಡಿದೆ. ನಾವು ತಮಿಳುನಾಡಿಗೆ ಕೊಡಬೇಕಾದ ನೀರು ಕೊಡುವುದು ನಮ್ಮ ಜವಾಬ್ದಾರಿ. ನಾವಿಬ್ಬರು ಅಣ್ಣ ತಮ್ಮಂದಿರ ರೀತಿಯಲ್ಲಿ. 
ತಮಿಳುನಾಡಿನ ರೈತರು ನಮ್ಮ ಅಣ್ಣ ತಮ್ಮಂದಿರೆ, ನಮ್ಮ ರೈತರು ಅಣ್ಣ ತಮ್ಮಂದಿರೆ ಎಂದರು.

ಜಲಾಶಯ ನಿರ್ಮಾಣಕ್ಕಾಗಿ ನಮ್ಮ ಜನರ ಬೇಡಿಕೆ ಇದೆ.  ಹೆಚ್ಚಿನ ನೀರು ಸಮುದ್ರಕ್ಕೆ ಹೋಗುತ್ತಿದೆ.  ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಭಾಗಕ್ಕೆ ಕುಡಿಯುವ ನೀರಿಗೆ ಇದನ್ನು ಬಳಕೆ ಮಾಡಿಕೊಳ್ಳುವುದು.  ತಮಿಳುನಾಡಿಗೆ ಎಷ್ಟು ನೀರು ನೀಡಬೇಕೊ ಅದನ್ನು ನೀಡುತ್ತೇವೆ. ಅವರಿಗೆ ಈ ಬಗ್ಗೆ ಅನುಮಾನ ಬೇಡ. 

ಅವರು ಹೊಗೆನಕಲ್ ನಲ್ಲಿ ಯಾರ ಅಪ್ಪಣೆ ತೆಗೆದುಕೊಂಡು ಅಣೆಕಟ್ಟು ಕಟ್ಟಿದರು. ಆ ನೀರು ಯಾವುದಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.  ಕುಡಿಯುವುದಕ್ಕ ಅಥವಾ ರೈತರಿಗಾ ?
ಎರಡು ರಾಜ್ಯದ ಜನರ ಸಂಬಂಧ ಸೌಹಾರ್ಧವಾಗಿ ಇರಬೇಕಾಗುತ್ತದೆ. ಇದನ್ನು ಸೌಹಾರ್ಧಯುತವಾಗಿಯೇ ಬಗೆಹರಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದರು. 

Follow Us:
Download App:
  • android
  • ios