Asianet Suvarna News

ಸಿದ್ದರಾಮಯ್ಯ ವಿರುದ್ಧ ಹೊಸ ಬಾಂಬ್ ಸಿಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ

* ಸಿದ್ದರಾಮಯ್ಯ ವಿರುದ್ಧ ಹೊಸ ಬಾಂಬ್ ಸಿಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ
* 400-500 ಕೋಟಿ ರೂ. ಭ್ರಷ್ಟಾಚಾರದ ಬಗ್ಗೆ ಗಂಭೀರ ಮಾಡಿದ ಎಚ್‌ಡಿಕೆ
* ನನ್ನ ಬಗ್ಗೆ ಲಘುವಾಗಿ ಮಾತಾಡಿದ್ರೆ ಹುಷಾರ್ ಎಂದ ಮಾಜಿ ಸಿಎಂ

HD Kumaraswamy Hits out at Siddaramaiah rbj
Author
Bengaluru, First Published Jun 18, 2021, 2:32 PM IST
  • Facebook
  • Twitter
  • Whatsapp

ಕೋಲಾರ, (ಜೂನ್.18): ಒಂದೆಡೆ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟವಾಗಿದ್ರೆ, ಮತ್ತೊಂದೆಡೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವಿನ ವಾಕ್ಸಮರ ಮತ್ತೆ ಮುಂದುವರೆದಿದೆ. 

ಹೌದು...ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ 400-500 ಕೋಟಿ ರೂ. ಭ್ರಷ್ಟಾಚಾರದ ಬಗ್ಗೆ ಗಂಭೀರ ಆರೋಪ ಮಾಡದ್ದಾರೆ.

ಈ ಬಗ್ಗೆ ಇಂದು (ಶುಕ್ರವಾರ) ಕೋಲಾರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಏನ್ ಮಹಾನ್ ಹರಿಶ್ಚಂದ್ರರಾ  ಬೆಂಗಳೂರು‌ ನಗರದಲ್ಲಿ 400 ಎಕರೆ ರೀಡೋ ಮಾಡಿದ್ರಲ್ಲಾ, ಕೆಂಪಣ್ಣ ಅಯೋಗ ವರದಿ ಮಾಡಿದ್ರಲ್ಲ, ಏನಾಯ್ತು ಅದು? ಲೂಟಿ ಹೊಡೆದ್ರಲ್ಲಾ 400-500 ಕೋಟಿ ರೂಪಾಯಿನಾ, ಅವರೇನ್ ಸಾಚಾನ? ಸಿದ್ದರಾಮಯ್ಯ ಅವರಿಂದ ರಾಜಕೀಯ ಮಾಡೋದನ್ನ ನಾನು ಕಲಿಯಬೇಕಿಲ್ಲ ಎಂದು ಕಿಡಿಕಾರಿದರು.

'2023ಕ್ಕೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ'

2008ರ ಚುನಾವಣೆಯಲ್ಲಿ ನೀವೆ ಯಡಿಯೂರಪ್ಪ ಅವರ ಬಳಿ ಹಣ ಪಡೆದಿದ್ದೀರಾ? ಇತಿಹಾಸ ಇದೆ, ನಿಮ್ಮ ಜಾಯಮಾನ ಅದು. 2008ರಲ್ಲಿ ಸಿದ್ದರಾಮಯ್ಯ ಆಪ್ತರೊಬ್ಬರು ಹಣ ಪಡೆದಿದ್ದಾರೆ. ನಿಮ್ಮ ಆಪ್ತರು ಎಷ್ಟು ಹಣ ಪಡೆದಿದ್ದರು. ಆಪರೇಷನ್ ಕಮಲದಲ್ಲಿ ಹಣವನ್ನು ಪಡೆದಿದ್ದರು. ಯಾವ ಯಾವ ಸಂಧರ್ಭದಲ್ಲಿ ಯಾರ ಕುತ್ತಿಗೆ ಕೊಯ್ದಿರಿ ಅಂತಾ ಗೊತ್ತು ಎಂದು ಹೊಸ ಬಾಂಬ್ ಸಿಡಿಸಿದರು.

ಚುನಾವಣೆಯಲ್ಲಿ ಎಷ್ಟು ಜೇಬಿಗೆ ಬಿಟ್ಟರೆ, ಎಷ್ಟು ಖರ್ಚು ಮಾಡಿದ್ರಿ? ನನ್ನ ಪಕ್ಷವನ್ನ ದುಡ್ಡಿಗಾಗಿ ಅಡಮಾನ ಇಟ್ಟಿಲ್ಲ ನಾನು. ಜೆಡಿಎಸ್ ಪಕ್ಷವನ್ನ ಹಣಕ್ಕಾಗಿ ಎಲ್ಲೂ ಅಡ ಇಟ್ಟಿಲ್ಲ, ಜನರ ಒಳಿತಿಗಾಗಿ ಇರುವ ಪಕ್ಷ ನಮ್ಮದು. ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ನನ್ನ ಪಕ್ಷದ ಬಗ್ಗೆಯಾಗಲಿ. ನನ್ನ ಬಗ್ಗೆ ಲಘುವಾಗಿ ಮಾತಾಡಿದ್ರೆ ಹುಷಾರ್ ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

Follow Us:
Download App:
  • android
  • ios