ಬಿಜೆಪಿ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಮನಸೋಇಚ್ಛೆ ವಾಗ್ದಾಳಿ!

ಕೊರೋನಾ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮನಸೋಇಚ್ಛೆ ವಾಗ್ದಾಳಿ ನಡೆಸಿದ್ದಾರೆ.

HD Kumaraswamy Hits out at Karnataka BJP Govt Over Covid19 rbj

ಬೀದರ್, (ಏ.14): ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ಗಮನಿಸಿದೆ.18 ರ ನಂತರ ಸರ್ವಪಕ್ಷ ಸಭೆ ಕರೆದು ಸಲಹೆ ಪಡೆಯುವುದಾಗಿ ಹೇಳಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಸಭೆ ಕರೆದು ಸಲಹೆ ಪಡೆಯುತ್ತಾರೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಇಂದು (ಬುಧವಾರ) ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ‌ಮೊದಲ ಹಂತದಲ್ಲಿ ಅನಾಹುತಗಳಾದಾಗ ಸರಕಾರದ ವಿರುದ್ಧ ವಾಗ್ದಾಳಿ ಮಾಡಬಾರದೆಂದು‌ ಸಹಕಾರ ಮಾಡಿದ್ದೇವೆ. ಈಗ ಎರಡನೇ ಹಂತದ ಕೊರೊನಾ ಪ್ರಾರಂಭವಾಗಿದೆ.. ಇದು ಏಕಾಏಕಿ ಬಂದದ್ದಲ್ಲ. ರಾಜ್ಯ ಸರಕಾರಕ್ಕೆ‌ ನಿರಂತರವಾಗಿ ಜನವರಿ ಫೆಬ್ರವರಿಯಲ್ಲಿ ತಜ್ಞರು ಎರಡನೇ ಹಂತದ ಕೊರೋನಾ ವೇಗವಾಗಿ ಹರಡುತ್ತದೆಂದು ವರದಿ ಕೊಟ್ಟಿದ್ದರು. ಆದ್ರೆ, ಸರ್ಕಾರದ ಗೈಡ್ ಲೈನ್​ ಮುಂಜಾನೆಯೊಂದು ಸಂಜೆಯೊಂದು. ಒಬ್ಬ ಮಂತ್ರಿ ಒಂದು ಹೇಳಿದ್ದರೆ ಇನ್ನೊಬ್ಬ ಮತ್ತೊಂದು ಹೇಳುತ್ತಾನೆ ಎಂದು ಕಿಡಿಕಾರಿದರು.

ಕೊರೋನಾ ನಿಯಂತ್ರಣಕ್ಕೆ ಬಿಎಸ್‌ವೈಗೆ 9 ಸಲಹೆ ನೀಡಿದ ಎಚ್‌ಕೆ ಪಾಟೀಲ್

ಒಂದು ಇಂಜೆಕ್ಷನ್ ಕೊಡಬೇಕು ಅಂದ್ರೆ ಮಾರ್ಕೆಟ್ ಆಸ್ಪತ್ರೆಗಳಲ್ಲಿ ಇಂಜೆಕ್ಷನ್ ಸಿಗುತ್ತಿಲ್ಲ. ಇನ್ನೆರಡು ದಿನ ಮಾತ್ರ ಸಿಗಬಹುದು. ಇಂತಹ ಕೀಳುಮಟ್ಟದ ಇಂತಹ ಅಮಾನವೀಯವಾಗಿ ನಡೆದುಕೊಳ್ಳುವ ಸರ್ಕಾರ ಇನ್ನೆಂದೂ ಸಿಗುವುದಿಲ್ಲ. ಮುಖ್ಯಮಂತ್ರಿಗಳ ಸಮೇತ ಎಲ್ಲರೂ‌ ಉಪಚಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಜನರ ಜೀವಕ್ಕಿಂತ ಇವರಿಗೆ ಎಲೆಕ್ಷೆನ್ ಮುಖ್ಯವಾಗಿದೆ ಎಂದು ಹೇಳಿದರು.

ಸತ್ತ ಮೇಲೆ ಬಾಯಿ ಬಡಿದುಕೊಂಡರೆ ಏನಾಗುತ್ತದೆ..? ಕರ್ನಾಟಕದಲ್ಲಿ ಇಂತಹ ಕೆಟ್ಟ ಸರಕಾರ ನೋಡಿರಲಿಲ್ಲ. ಹಿಂದೆಯೂ ಇಂತಹ ಸರ್ಕಾರ ಬಂದಿರಲಿಲ್ಲ. ಮುಂದೆಯೂ ಬರುವುದಿಲ್ಲ. ಕೊರೋನಾದಿಂದ ಜನರನ್ನ ದೇವರೇ ಕಾಪಾಡಬೇಕು ಎಂದರು.

Latest Videos
Follow Us:
Download App:
  • android
  • ios