ಬೆಂಗಳೂರು, (ಅ.05): ಸಿದ್ದರಾಮಯ್ಯ ಮೊದಲು ಚಿಲ್ಲರೇ ರಾಜಕಾರಣ ಮಾಡೋದನ್ನು ಬಿಡಲಿ. ಅವರ ಇತಿಹಾಸ ತೆಗೆದ್ರೆ ಅವರ ಸಂಸ್ಕೃತಿ ಏನೆಂದು ಗೊತ್ತಾಗಲಿದೆ ಎಂದು ಕಿಡಿಕಾರಿದ್ದಾರೆ.

ಯಾವ ಪಕ್ಷದಿಂದ ಬೆಳೆದ್ರು ಇವಾಗ ಅದೆ ಪಕ್ಷದ ಸರ್ವನಾಶದ ಬಗ್ಗೆ ಮಾತಾನಾಡ್ತಿದ್ದಾರೆ. ಇವತ್ತು ಕಾಂಗ್ರೆಸ್ ಸಿದ್ದರಾಮಯ್ಯನಿಂದಲೇ ಸರ್ವನಾಶ ವಾಗಲಿದೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಕಳೆದ ಚುನಾವಣೆಯಲ್ಲಿ ಅಡ್ಡಪಲ್ಲಕ್ಕಿ ತಂದುವರು ನೀವು. ನಾವು ಅವತ್ತು ನಿಮ್ಮ ಅಡ್ಡಪಲ್ಲಕ್ಕಿ ಬೇಡ. ನಿಮ್ಮ ಅಡ್ಡಪಲ್ಲಕ್ಕಿ ನಾವೇ ಹೊರ್ತೇವೆ ಎಂದು‌ ಹೇಳಿದ್ವಿ. ಕೊನೆಗೆ ನೀವೇ ಕೂತ್ಕೊಳ್ಳಿ ಅಂತಾ ಅರ್ಧ ದಾರಿಯಲ್ಲಿ ಬೀದಿಗೆ ಬೀಳಿಸಿ ಹೋಗಿದ್ದಾರೆ. ಈ ಪಕ್ಷದ ಬಗ್ಗೆ ನೀವು ಹಗುರವಾಗಿ ಮಾತನಾಡಬೇಡಿ ಎಂದು ಎಚ್ಚರಿಕೆ ಕೊಟ್ಟರು.

'ಕಾಂಗ್ರೆಸ್‌ ಏಕಾಂಗಿ ಹೋರಾಟ, ಡಿಕೆಶಿ ಹೇಳಿದ ಅಚ್ಚರಿ ಅಭ್ಯರ್ಥಿ ನನಗೆ ಗೊತ್ತಿಲ್ಲ '

ರಾಜೇಶ್ ಗೌಡ ಮತ್ತು ನಿಮ್ ಪುತ್ರನಿಗೆ ಸಂಬಂಧ ಏನು?
ಇತ್ತ BJP ಮತ್ತು JDS ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲೂ ಹೇಳಿದ್ರು. ಈಗಲೂ ಹೇಳಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಎಚ್‌ಡಿ ಆರೋಪಿಸಿದರು.

ಆದ್ರೆ, ರಾಜೇಶ್ ಗೌಡ ಮತ್ತು ನಿಮ್ಮ ಪುತ್ರ ಯತೀಂದ್ರ ನಡುವಿನ ಸಂಬಂಧ ಏನು? ಇಬ್ಬರೂ ಬಿಸಿನೆಸ್ ಪಾಲುದಾರರು ಅಲ್ಲವೇ? ಈಗ ಏಕಾಏಕಿ ರಾಜೇಶ್ ಗೌಡ ಬಿಜೆಪಿಗೆ ಹೋಗಿದ್ದು ಯಾಕೆ? ಇಂಥ ರಾಜೇಶ್ ಗೌಡ ಬಿಜೆಪಿಗೆ ಹೋಗಿದ್ದು ಯಾರ ಚಿತಾವಣೆಯಿಂದ? ಬಿಜೆಪಿಗೆ ನೀವೇ ಪರೋಕ್ಷವಾಗಿ ಬೆಂಬಲ ಕೊಡ್ತಾ ಇದ್ದೀರಾ? ಎಂದು ಸಿದ್ದರಾಮಯ್ಯರಿಗೆ ಕುಮಾರಸ್ವಾಮಿ ಪ್ರಶ್ನೆಗಳ ಸುರಿಮಳೆಗೈದರು.