ಬೆಂಗಳೂರು, (ನ.28): ನಾನು ಮುಖ್ಯಮಂತ್ರಿಯಾಗಿದ್ದಾಗ ನಿಖಿಲ್ ವಿಧಾನಸೌಧಕ್ಕೆ ಬಂದಿದ್ನಾ? ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇಂದು (ಶನಿವಾರ) ಜೆಡಿಎಸ್ ಪಕ್ಷದ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ನಿಖಿಲ್ ವಿಧಾನಸೌಧಕ್ಕೆ ಬಂದಿದ್ನಾ? ನಿಖಿಲ್ ವರ್ಗಾವಣೆ ಹೆಸರಲ್ಲಿ ಲೂಟಿ ಮಾಡಿದ್ನಾ? ಆದರೆ ಇಂದು ರಾಜ್ಯದಲ್ಲಿ ವರ್ಗಾವಣೆ ಹೆಸರಲ್ಲಿ ಹಣ ಲೂಟಿ ನಡೆಯುತ್ತಿದೆ ಎಂದು ಪರೋಕ್ಷವಾಗಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ಬಾ ಗುರೂ ಮಾತನಾಡೋಣ: ಮುನಿಸು ಮರೆತು ಒಂದಾದ ಅಣ್ತಮ್ಮಾಸ್

ಯಾವ ಪಕ್ಷವು ಕೌಟುಂಬಿಕ ರಾಜಕಾರಣದಿಂದ ಹೊರತಾಗಿಲ್ಲ. ಟೀಕೆ-ಟಿಪ್ಪಣಿಗಳಿಗೆ ಕಿವಿಗೊಡಬೇಡಿ. ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. 

 ಸಾಲ ಮನ್ನಾ ಮಾಡಿದ್ದಕ್ಕೆ ರೈತರಿಗೆ ಅನುಕೂಲವಾಯಿತು. ಆದರೆ ರೈತರು ನಮ್ಮನ್ನು ನೆನೆಯಲಿಲ್ಲ. ರೈತರ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವ ಬದಲು, ಸ್ತ್ರೀ ಶಕ್ತಿ ಸಂಘಗಳದ್ದು ಕೇವಲ 1 ಸಾವಿರ ಕೋಟಿ ರೂ. ಮಾತ್ರ ಇತ್ತು. ಇದನ್ನು ಮನ್ನಾ ಮಾಡಿದ್ದರೆ ಬಹುಷಃ ಎಲ್ಲ ಮಹಿಳೆಯರು ನನ್ನ ಜೊತೆ ನಿಲ್ಲುತ್ತಿದ್ದರೆನೋ ಎಂದು ಹೇಳಿದರು.