ರಾಮನಗರ, (ಮಾ.20): ಉಪಚುನಾವಣೆಗೆ ಕಠಿಣ ನಿಯಮಗಳು​ ಅಪ್ಲೈ ಆಗೋದಿಲ್ಲ ಎಂದು ಹೇಳಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮಾಜಿ ಸಿಎಂ ಎಚ್‌ಡಿಕೆ ಜಬರ್ದಸ್ತ್ ತಿರುಗೇಟು ಕೊಟ್ಟಿದ್ದಾರೆ.

ಉಪಚುನಾವಣೆಗೆ ಕೊರೋನಾ ಕಠಿಣ ನಿಯಮಗಳು ಅನ್ವಯವಾಗುವುದಿಲ್ಲ. 4 ಗೋಡೆಗಳ ಮಧ್ಯೆ ನಡೆಯುವ ಸಭೆ-ಸಮಾರಂಭಗಳಿಗೆ ಮಾತ್ರ ಕಠಿಣ ನಿಯಮ ಹಾಕಿದ್ದೇವೆ ಎಂದು ಸಿಎಂ  ಬಿಎಸ್ ಯಡಿಯೂರಪ್ಪ ಅವರು ತುಮಕೂರಿನಲ್ಲಿ ಹೇಳಿಕೆ ಕೊಟ್ಟಿದ್ದಾರೆ.

ಬೈ ಎಲೆಕ್ಷನ್‌ಗೆ ಕೊರೋನಾ ಟಫ್ ರೂಲ್ಸ್ ಅನ್ವಯ ಆಗಲ್ವಂತೆ: ಸಿಎಂ ಸಾಹೇಬ್ರು ಹೇಳಿದ್ದು

ಇನ್ನು ಈ ಬಗ್ಗೆ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸರ್ಕಾರವೇ ಕೊರೋನಾ ನಿಯಂತ್ರಣಕ್ಕೆ ನಿಯಮಗಳನ್ನು ಮಾಡಿ ಮತ್ತೆ ಚುನಾವಣೆಗೆ ಅನ್ವಯ ಇಲ್ಲಾ ಅಂದ್ರೆ ಹೇಗೆ..? ಏನ್ ಚುನಾವಣೆಗೆ ಕೊರೋನಾಗೆ ಹೆದರಿಕೊಂಡು ಓಡಿ ಹೋಗುತ್ತಾ..? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಉಪಚುನಾವಣೆಗೆ ಕೊರೋನಾ ನಿಯಮ ಅನ್ವಯವಾಗುವುದಿಲ್ಲ ಎಂಬ ಸಿಎಂ ಹೇಳಿಕೆಗೆ ಟಾಂಗ್​ ಕೊಟ್ಟರು.

 ಚುನಾವಣೆಯಿಂದ ಕೊರೋನಾ ಬರಲ್ವಾ..? ನಮಗೆ ಬೇಕಾದಂತೆ ನಿಯಮಗಳನ್ನು ಮಾರ್ಪಾಡು ಮಾಡಿಕೊಂಡು ಅನಾಹುತಗಳಿಗೆ ದಾರಿ ಮಾಡಿಕೊಡಬಾರದು ಎಂದರು.