'ನಮ್ಮ ಕೆಲಸಗಳು ಮಾತಾಡ್ಬೇಕು, ಮಾತಾಡುತ್ತಿವೆ': ಕುಮಾರಸ್ವಾಮಿ ಫುಲ್ ಹ್ಯಾಪಿ..!
ಕೊರೋನಾ ಲಾಕ್‌ಡೌನ್ ಮಧ್ಯೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಾವು ಮಾಡಿದ ಕೆಸಲವನ್ನು ನೆನೆದ ಫುಲ್ ಹ್ಯಾಪಿ ಆಗಿದ್ದಾರೆ.ಕಾರಣ ಇಲ್ಲಿದೆ ನೋಡಿ.
ಬೆಂಗಳೂರು, (ಮೇ.15): ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಮದೆ ಹಾಗೂ ಜಂಬೂರಿನಲ್ಲಿ 463 ಮನೆಗಳು ಪೂರ್ಣವಾಗಿದ್ದು ಸಂತ್ರಸ್ತರಿಗೆ ಸೂರು ಸಿಗುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಮದೆ ಹಾಗೂ ಜಂಬೂರಿನಲ್ಲಿ ಮನೆಗಳ ನಿರ್ಮಾಣಕ್ಕೆ ನಾನು CM ಆಗಿದ್ದಾಗ ಚಾಲನೆ ನೀಡಿ, ಹಣ ಒದಗಿಸಿದ್ದೆ. ಇಂದು 463 ಮನೆಗಳು ಪೂರ್ಣವಾಗಿದ್ದು ಸಂತ್ರಸ್ತರಿಗೆ ಸೂರು ಸಿಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಕೊಡಗು ಮಹಾಮಳೆ ಸಂತ್ರಸ್ತರಿಗೆ ಮನೆ ರೆಡಿ..! ಇಲ್ಲಿವೆ ಫೋಟೋಸ್
ಅಂದು ಸಂತ್ರಸ್ತರ ನೋವನ್ನು ಸ್ವತಃ ನಾನೂ ಉಂಡಿದ್ದೆ. ಇಂದಿನ ಅವರ ಖುಷಿ ನನ್ನದೂ ಕೂಡ. ನಮ್ಮ ಕೆಲಸಗಳು ಮಾತಾಡಬೇಕು. ಮಾತಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಟ್ವಟಿರ್‌ನಲ್ಲಿ ಬರೆದುಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಅಂದರೆ 2018ರಲ್ಲಿ ಕೊಡಗಿನಲ್ಲಿ ಉಂಟಾದ ಪ್ರವಾಹದಿಂದಾಗಿ ಸಾವಿರಾರು ಜನರು ಮನೆ, ಜಮೀನನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದರು.
ಹಲವಾರು ಜನರು ಪ್ರವಾಹಕ್ಕೆ ಸಿಲುಕಿ, ಮಣ್ಣಲ್ಲಿ ಮಣ್ಣಾಗಿ ಹೋಗಿದ್ದರು. ಕೊಡಗಿನಲ್ಲಿ ಹಿಂದೆಂದೂ ಕಂಡಿರದ ಆ ಭೀಕರ ಪ್ರವಾಹಕ್ಕೆ ಜಗತ್ತಿನಾದ್ಯಂತ ಸಾವಿರಾರು ಜನರು ತಮ್ಮ ಕೈಲಾದ ಸಹಾಯಹಸ್ತ ಚಾಚಿದ್ದರು. ಆ ದುರಂತದಲ್ಲಿ ಮನೆ, ಜಮೀನು ಕಳೆದುಕೊಂಡವರಿಗಾಗಿ ಮನೆಯನ್ನು ಕಟ್ಟಿಸಿಕೊಡುವುದಾಗಿ ನೀಡಿದ್ದ ಭರವಸೆ ಇದೀಗ ಈಡೇರಿದೆ.