ಬೆಂಗಳೂರು, (ಫೆ.02): ಬಿಜೆಪಿ ಜೊತೆ ಜೆಡಿಎಸ್ ಹೋಗುತ್ತಿರುವುದಕ್ಕೆ ಎನ್ನುವುದರ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ.

ವಿಧಾನಪರಿಷತ್ ಸಭಾಪತಿ ಹಾಗೂ ಉಪಸಭಾತಿಗಾಗಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಅಲ್ಲದೇ ಇನ್ನೂ ಕೆಲ ವಿಷಯಗಳಲ್ಲಿ ಜೆಡಿಎಸ್ ಬಿಜೆಪಿ ಪರ ಬ್ಯಾಟಿಂಗ್ ಮಾಡಿದೆ. ಇನ್ನೂ ಕೆಲ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಅನ್ನು ದೂರ ಇಡಲು ದಳಪತಿಗಳು ಬಿಜೆಪಿಗೆ ಜೈ ಎಂದಿದ್ದಾರೆ.

'ಬಿಜೆಪಿ-ಜೆಡಿಎಸ್ ಮೈತ್ರಿ: ದೇವೇಗೌಡ್ರು ನನ್ನ ಸಲುವಾಗಿ ಈ ತೀರ್ಮಾನ‌ ಮಾಡಿದ್ರು' 

ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಇಂದು (ಮಂಗಳವಾರ) ಮತನಾಡಿದ ಕುಮಾರಸ್ವಾಮಿ, ವಿಷಯಾಧಾರಿತವಾಗಿ ಬಿಜೆಪಿಗೆ ಬೆಂಬಲ ನೀಡಲಾಗುವುದು ಎಂದು ಸ್ಪಷ್ಟಡಿಸಿದರು.

 ಬಿಜೆಪಿ ಜೊತೆ ಹೋಗುತ್ತಿರುವುದಕ್ಕೆ ಕಾರಣ ಇದೆ. ನಾಡಿನ ಜನತೆಗೆ ಒಳಿತಾಗುವ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲ ಇದೆ. ಜನರಿಗೆ ಅನಾಹುತವಾಗುವ ಕಾರ್ಯಕ್ರಮಗಳಿಗೆ ನನ್ನ ಬೆಂಬಲ ಇಲ್ಲ. ಜನರ ರಕ್ಷಣೆಯ ಜವಾಬ್ದಾರಿ ಬಹಳ ಮುಖ್ಯ ಎಂದರು.