MLC Election: ಪರಿಷತ್ ಹೊಂದಾಣಿಕೆ, ಎರಡೂ ಪಕ್ಷಗಳ ಮೇಲೆ ಕೈ ಇಟ್ಟ ಕುಮಾರಸ್ವಾಮಿ
* ದಿನದಿಂದ ದಿನಕ್ಕೆ ರಂಗೇರಿದ ವಿಧಾನಪರಿಷತ್ ಚುನಾವಣೆ
* ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳ ಮೇಲೆ ಕೈ ಇಟ್ಟ ಕುಮಾರಸ್ವಾಮಿ
* ಜೆಡಿಎಸ್ ಬೆಂಬಲ ಕೋರಿದ್ದ ಬಿಎಸ್ ಯಡಿಯೂರಪ್ಪಗೆ ಬಿಗ್ ಶಾಕ್
ಬೆಂಗಳೂರು, (ಡಿ.07): ವಿಧಾನಪರಿಷತ್ ಚುನಾವಣೆಯಲ್ಲಿ (MLC Election) ಜೆಡಿಎಸ್(JDS) ಬೆಂಬಲ ಕೋರಿದ್ದ ಬಿಜೆಪಿ(BJP) ಭಾರೀ ಮುಖಭಂಗವಾಗಿದೆ. ಅದರಲ್ಲೂ ಬಹಿರಂಗವಾಗಿಯೇ ಬೆಂಬಲಕೋರಿ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಬಿಎಸ್ ಯಡಿಯೂರಪ್ಪಗೆ (BS Yediyurappa) ತೀವ್ರ ಹಿನ್ನಡೆಯಾಗಿದೆ.ಹೌದು....ಪರಿಷತ್ ಚುನಾವಣೆಯಲ್ಲಿ ಸ್ಥಳೀಯವಾಗಿ ಜೆಡಿಎಸ್‌ಗೆ ಅನುಕೂಲವಾಗು ಪಕ್ಷಕ್ಕೆ ಬೆಂಬಲ ಕೊಡಿ ಎಂದು ಎಚ್‌ಡಿ ಕುಮಾರಸ್ವಾಮಿ ತಮ್ಮ ಮುಖಂಡರುಗಳಿಗೆ ಫಾರ್ಮಾನು ಹೊರಡಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆ ಮತ್ತು ಮುಂದಿನ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ತಳೆದಿರುವ ನಿಲುವನ್ನು ಬಹಿರಂಗಪಡಿಸುವ ಸಲುವಾಗಿ ಕುಮಾರಸ್ವಾಮಿ ಇಂದು(ಡಿ.07) ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸಷ್ಟನೆ ನೀಡಿದ್ದಾರೆ.
ವಿಧಾನ ಪರಿಷತ್ ಚುನಾವಣಾ ಪ್ರಚಾರದ ಅಂತಿಮ ಹಂತಕ್ಕೆ ಬಂದಿದ್ದೇವೆ. ಪರಿಷತ್ ಚುನಾವಣೆಯ ಜೆಡಿಎಸ್ ನಿಲುವಿನ ಬಗ್ಗೆ ಸಾಕಷ್ಟು ಕುತೂಹಲ ಇದೆ. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೆ ಎಂದು ಊಹಾಪೋಹದ ಸುದ್ದಿಗಳು ಬಂದಿವೆ. ಚುನಾವಣೆ ಘೋಷಣೆ ಬಳಿಕ ಕಾಂಗ್ರೆಸ್ ಪಕ್ಷವು ನಮ್ಮ ಜೆಡಿಎಸ್ ಪಕಗಷವನಗನು ಬಿಜೆಪಿ ಬಿ ಟೀಮ್ ಎಂದು ಹೇಳುತ್ತಿದೆ. ಜೆಡಿಎಸ್ ಆರು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸಿ ಬೇರೆ ಕಡೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದೂ ಹೇಳುತ್ತಿದ್ದಾರೆ. ಆದರೆ ಬಿಜೆಪಿ ಪಕ್ಷವು ನಮ್ಮಿಂದ ಯಾವುದೇ ಬೆಂಬಲ ಕೋರಿಲ್ಲ. ಅದರೆ ಯಡಿಯೂರಪ್ಪ ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ನಮಗೆ ಬೆಂಬಲ ನೀಡಿ ಎಂದು ಹೇಳಿದ್ದಾರೆ. ಅಷ್ಟಕ್ಕೆ ಅದು ಸೀಮಿತವಾಗಿದೆ. ಹಾಗಂತ ಇದು ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲ. ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ಬೆಂಬಲ ನೀಡಿ ಎಂದು ಹೇಳಿದರು.
MLC Election: 'ಬಿಜೆಪಿ ವೀಕ್ ಆಗಿದೆ ಎಂದು ಯಡಿಯೂರಪ್ಪರಿಂದ ಒಂದು ದೊಡ್ಡ ಸಂದೇಶ'
ನಾವು ಅಭ್ಯರ್ಥಿ ಹಾಕಿರುವ ಜಾಗದಲ್ಲಿ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ನಾವು ಹೋರಾಟ ಮಾಡುತ್ತಿದ್ದೇವೆ. ಸ್ಥಳೀಯ ಮುಖಂಡರ ಜತೆ ಸಮಾಲೋಚನೆ ಮಾಡಿದ್ದೇನೆ. ಮುಖಂಡರ ಅಭಿಪ್ರಾಯಗಳನ್ನೂ ನಾವು ಸಂಗ್ರಹಿಸಿದ್ದೇವೆ. ನಮ್ಮ ಗುರಿ 2023ರ ಸಾರ್ವತ್ರಿಕ ಚುನಾವಣೆ. 2023ರ ಚುನಾವಣೆಯಲ್ಲಿ 123 ಟಾರ್ಗೆಟ್ ಇದೆ ಎಂದರು.
ಯಾರಿಗೆ ಬೇಕಾದರೂ ಮತ ಹಾಕಬಹುದು
ನಾವು ಸ್ಪರ್ಧಿಸದ ಸ್ಥಳದಲ್ಲಿ ಯಾರಾದರೂ ಗೆಲ್ಲಬಹುದು. ಕಾಂಗ್ರೆಸ್, ಬಿಜೆಪಿ ಯಾರು ಬೇಕಾದರೂ ಗೆಲ್ಲಬಹುದು. ಆದರೆ ನಮ್ಮ ಮತದಾರರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಅವರು ಯಾರಿಗೆ ಬೇಕಾದರೂ ಮತ ಹಾಕಬಹುದು. ಸ್ಥಳೀಯ ಮಟ್ಟದಲ್ಲಿ ಅಲ್ಲಿನ ನಾಯಕರೇ ನಿರ್ಧರಿಸಬಹುದು. ಮುಂದಿನ ಚುನಾವಣೆ ದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲಿ ಎಂದು ಕುಮಾರಸ್ವಾಮಿ ತಮ್ಮ ಮುಖಡರುಗಳಿಗೆ ಕಿವಿಮಾತು ಹೇಳಿದರು.
ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದಾರೆ. ಇನ್ನೂ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ. ನಮ್ಮ ನಾಯಕರು ಏನು ಬೇಕಾದರೂ ನಿರ್ಧಾರ ಮಾಡಲಿ. ಆದರೆ ನಾವು ಸ್ಪರ್ಧಿಸಿರುವ ಸ್ಥಳದಲ್ಲಿ ನಮಗೆ ಕಾಂಗ್ರೆಸ್ ಅಥವಾ ಬಿಜೆಪಿಯವರು ಯಾರೂ ಬೆಂಬಲ ನೀಡಿಲ್ಲ ಎಂದರು.
6ಕ್ಕೆ 6 ಕಡೆಯೂ ಗೆಲ್ಲುತ್ತೇವೆ
ಪರಿಷತ್ ಚುನಾವಣೆಯಲ್ಲಿ 6ಕ್ಕೆ 6 ಕಡೆಯೂ ಗೆಲ್ಲುತ್ತೇವೆ. ನಾವು ಈ ಚುನಾವಣೆಯ ನಂತರ ರೀಬೌನ್ಸ್ ಆಗುತ್ತೇವೆ. ಜೆಡಿಎಸ್ ಸ್ಪರ್ಧಿಸುವ 6 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇದೆ. ಮೂರೂ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಇರುತ್ತೆ. ಈ ಆರೂ ಕ್ಷೇತ್ರಗಳಲ್ಲಿ ಯಾರದೇ ಬೆಂಬಲ ಪಡೆದು ಹೋರಾಟ ಮಾಡ್ತಿಲ್ಲ. ನಾವು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರವಹಿಸುತ್ತೆ. ಆರ್ಥಿಕವಾಗಿ ದೊಡ್ಡ ಹೊರೆ ಹಿನ್ನೆಲೆ ಎಲ್ಲ ಕಡೆ ಸ್ಪರ್ಧಿಸಿಲ್ಲ. ರಾಯಚೂರಿನಲ್ಲಿ 650 ಸದಸ್ಯರು ನಮ್ಮ ಬೆಂಬಲಿತರಿದ್ದಾರೆ. ಕೊಪ್ಪಳದಲ್ಲಿ ಜೆಡಿಎಸ್ ಪಕ್ಷಕ್ಕೆ ಶಕ್ತಿ ಕಡಿಮೆ ಇದೆ. ಚಿತ್ರದುರ್ಗ, ಶಿವಮೊಗ್ಗದಲ್ಲೂ 400 ಸದಸ್ಯರು ಇದ್ದಾರೆ. ಬೆಂಗಳೂರು ನಗರದಲ್ಲೂ 150 ಮತದಾರರು ಇದ್ದಾರೆ ಎಂದು ವಿವರಿಸಿದರು.
MLC Election: ಬೆಂಬಲಿಗರ ಸಭೆಯಲ್ಲೇ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಜೆಡಿಎಸ್ ಶಾಸಕ
ಎಲ್ಲಾರಿಗೆ ಕುತೂಹಲ ಇರೋದು ಜೆಡಿಎಸ್ 19 ಕ್ಷೇತ್ರದಲ್ಲಿ ಏನು ಮಾಡುತ್ತದೆ ಎಂದು. ನಾನು ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡಿದ್ದೇನೆ. ನಮ್ಮ ಗುರಿ ಮುಂದಿನ ಚುನಾವಣೆಯಲ್ಲಿ123 ಗಳಿಸುವುದು. ಆ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲ. ಮೈತ್ರಿಯ ಬಗ್ಗೆ ಪ್ರಶ್ನೆಯೇ ಇಲ್ಲ. ರಾಷ್ಟ್ರೀಯ ಪಕ್ಷದ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.