ಬೆಂಗಳೂರು, ಸೆ.15): ಜೆಡಿಎಸ್ ನ ಕಟ್ಟಾಳು, ಎಚ್‌.ಡಿ. ಕುಮಾರಸ್ವಾಮಿ ಅವರ ಅಪ್ಪಟ ಅಭಿಮಾನಿ ಮಂಜು ಕಲ್ಪತರ ನಾಡು ನಿಧನರಾಗಿದ್ದು, ಮಾಜಿ ಸಿಎಂ ಎಚ್‌ಡಿಕೆ ಸಂತಾಪ ಸೂಚಿಸಿದ್ದರೆ.

ವಿಶೇಷ ಚೇತನರಾಗಿದ್ದ  'ಮಂಜು ಕಲ್ಪತರ ನಾಡು'  ದೇಹ ವಿಕಲತೆಯನ್ನೂ ಮೆಟ್ಟಿ ಜೆಡಿಎಸ್‌ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಮಡಿದ್ದರು. ಆದ್ರೆ, ಅವರು ಇಂದು (ಮಂಗಳವಾರ) ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. 

ಮುಜುಗರಕ್ಕೀಡಾದ ಆನ್‌ಲೈನ್ ಕ್ಲಾಸ್, ಹೇಗಿದೆ ದರ್ಶನ್ ಫಾರ್ಮ್‌ಹೌಸ್; ಸೆ.15ರ ಟಾಪ್ 10 ಸುದ್ದಿ!

ಮಂಜು ಅವರ ಸಾವಿಗೆ ಮಾಜಿ ಸಿಎಂ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದು, ತನ್ನ ಅಂಗವೈಕಲ್ಯವನ್ನೂ ಮೀರಿ ರಾಜ್ಯದಾದ್ಯಂತ ನನ್ನ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದ ನನ್ನ ಅಭಿಮಾನಿ 'ಮಂಜು ಕಲ್ಪತರ ನಾಡು' ಅವರು ತೀರಿಕೊಂಡ ಸುದ್ದಿ ಕೇಳಿ ತೀವ್ರ ನೋವುಂಟಾಯಿತು. ಮತ್ತೆ ಹುಟ್ಟಿ ಬನ್ನಿ ಬ್ರದರ್ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ತನ್ನ ಅಂಗವೈಕಲ್ಯವನ್ನೂ ಮೀರಿ ರಾಜ್ಯದಾದ್ಯಂತ ನನ್ನ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದ ನನ್ನ ಅಭಿಮಾನಿ 'ಮಂಜು ಕಲ್ಪತರ ನಾಡು' ಅವರು ತೀರಿಕೊಂಡ ಸುದ್ದಿ ಕೇಳಿ ತೀವ್ರ ನೋವುಂಟಾಯಿತು. ಮತ್ತೆ ಹುಟ್ಟಿ ಬನ್ನಿ ಬ್ರದರ್.

Posted by H D Kumaraswamy on Tuesday, September 15, 2020

ಮಂಜು ಅವರಿಗೆ ಕುಮಾರಸ್ವಾಮಿ ಅಂದ್ರೆ ಎಷ್ಟು ಅಭಿಮಾನ ಅಂದ್ರೆ, ಎಚ್‌ಡಿಕೆ ಅವರ ರಾಜ್ಯದಲ್ಲಿ ಎಲ್ಲಿಲ್ಲಿ ಕಾರ್ಯಕ್ರಮಗಳು ಇರುತ್ತವೆಯೋ ಅಲ್ಲಿ ಈ ಮಂಜು ಹಾಜರಿರುತ್ತಿದ್ದರು. ಅಂಗವಿಕಲರಾಗಿದ್ರೂ ಸಹ ಕುಮಾರಸ್ವಾಮಿ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

ಇನ್ನು ಮಂಜು ಅಂತ್ಯಕ್ರಿಯೆಯಲ್ಲಿ ಕುಮಾರಸ್ವಾಮಿ ಅವರು ಭಾಗವಹಿಸಬೇಕೆಂದು ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.