Asianet Suvarna News Asianet Suvarna News

ಗೂಢಾಚಾರಿಗಳನ್ನಿಟ್ಟಿದ್ದಾರೆ ಕುಮಾರಸ್ವಾಮಿ, ಗುಪ್ತದಳ ಏನ್ಮಾಡಲಿದೆ?

*ಮುಂದಿನ ಚುನಾವಣೆಗೆ ಜೆಡಿಎಸ್ ರಣತಂತ್ರ
* ಅಭ್ಯರ್ಥಿಗಳೆಂದು ಆಯ್ಕೆಯಾದವರ ಹಿಂದೆ ಗೂಢಚಾರಿಗಳು
* ಪ್ರತಿಯೊಂದೂ ಕಾರ್ಯತಂತ್ರವನ್ನು  ಗೌಪ್ಯ ವಾಗಿ ವರದಿ ಮಾಡಲಿದೆ ಸೀಕ್ರೆಟ್ ಟೀಂ.

HD Kumaraswamy and JDS Strategy for upcoming elections mah
Author
Bengaluru, First Published Oct 3, 2021, 11:52 PM IST
  • Facebook
  • Twitter
  • Whatsapp

ಬೆಂಗಳೂರು(ಅ. 03)  ಉಪಚುನಾವಣೆ ಮತ್ತು ಮುಂದಿನ ಚುನಾವಣೆಗೆ (Elections) ಜೆಡಿಎಸ್(JDS) ಈಗಲೇ ಸಿದ್ಧತೆ ಆರಂಭಿಸಿದೆ. ಈಗಾಗಲೇ ಎಲ್ಲರನ್ನು ಕರೆದು ಸಭೆ ಮಾಡಿ ರಣತಂತ್ರ ರೂಪಿಸಲಾಗಿದೆ. ಈ ನಡುವೆ ಮತ್ತೊಂದು ಸ್ಫೋಟಕ ಅಂಶವೂ ಹೊರಗೆ ಬಂದಿದೆ.  ಗೂಢಾಚಾರಿಗಳನ್ನಿಟ್ಟಿದ್ದಾರೆ ಎಚ್ ಡಿ ಕುಮಾರಸ್ವಾಮಿ(HD Kumaraswamy)!

ಜೆಡಿಎಸ್ ಕಾರ್ಯಾಗಾರದಲ್ಲಿ ಅಭ್ಯರ್ಥಿ ಗಳು ಎಂದು ವರಿಷ್ಠರು ತೀರ್ಮಾನ ಮಾಡಿದವರ ಹಿಂದೆ ಬೇಹುಗಾರಿಕೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಸುಮಾರು 130 ಜನರನ್ನು ಸಂಭಾವ್ಯ ಅಭ್ಯರ್ಥಿ ಗಳಾಗಿ ಗುರುತಿಸಿರುವ ದಳಪತಿ ಗಳು ಅವರ ಚಲಬವಲನಗಳ ಮೇಲೆ ನಿಗಾ ಇರಿಸಿದ್ದಾರೆ.

ಪ್ರತಿಯೊಂದೂ ಕಾರ್ಯತಂತ್ರವನ್ನು  ಗೌಪ್ಯ ವಾಗಿ ವರದಿ ಮಾಡಲಿದೆ ಸೀಕ್ರೆಟ್ ಟೀಂ. ಇಷ್ಟಕ್ಕೂ ತಮ್ಮನ್ನು ಯಾರು ವಾಚ್ ಮಾಡ್ತಿದಾರೆ ಎಂಬುದನ್ನು ಕಂಡು ಹಿಡಿಯಲು ಸಾದ್ಯವೇ ಇಲ್ಲ. ಒಂದು ಕ್ಷೇತ್ರದ ಅಭ್ಯರ್ಥಿ ಮೇಲೆ ಕಣ್ಣಿಡಲು ರಾಜ್ಯದ ಇನ್ಯಾವುದೋ ಭಾಗದ ಕಾರ್ಯಕರ್ತನಿಗೆ ಜವಾಬ್ದಾರಿ ನೀಡಲಾಗಿದೆ.

ಸಿಂಧಗಿಯಲ್ಲಿ ವಸಲೆ, ಬಿಜೆಪಿಗೆ ಹೊರಟ ಜೆಡಿಎಸ್ ನಾಯಕ

ಸಂಭಾವ್ಯ ಅಭ್ಯರ್ಥಿ ಮಾಡುತ್ತಿರುವ ಕಾರ್ಯಕ್ರಮ ಗಳು, ಕ್ಷೇತ್ರದಲ್ಲಿ ಆತನ ಜನಪ್ರಿಯತೆ, ಎದುರಾಳಿ ಪಕ್ಷಗಳ ನಡೆಗೆ ಕಾರ್ಯತಂತ್ರ , ಪ್ರತಿ ಪಕ್ಷಗಳ ಅಭ್ಯರ್ಥಿ ಗಳ, ಕಾರ್ಯಕರ್ತರನ್ನು ಸೆಳೆಯುವುದು ಮೊದಲ ಸಾಲಿನ ನಾಯಕರು ಇಲ್ಲದಿದ್ದರೂ ಜನರನ್ನು ಸೇರಿಸುವ ಕೆಲಸ ಮಾಡುವುದು ಹೀಗೆ ಹಲವು ಆಯಾಮಗಳಲ್ಲಿ ವರದಿ ನೀಡಲಿದೆ.  ವರಿಷ್ಠಗೆ ಆಗಿಂದಾಗ್ಗೆ ವರದಿ ನೀಡಲಿರುವ ಸೀಕ್ರೆಟ್ ಏಜೆಂಟ್  ಆಧಾರದಲ್ಲಿ ಒಂದು ವೇಳೆ ಸಂಭಾವ್ಯ ಅಭ್ಯರ್ಥಿ ಯ ಪ್ರಗತಿ ತೃಪ್ತಿದಾಯಕ ಆಗಿಲ್ಲ ಎಂದರೆ ಪಕ್ಷ ಬೇರೆ ಹೆಜ್ಜೆ ಇಡಲಿದೆ. 

ಜೆಡಿಎಸ್‌ ನಿಂದ ಹಲವು ನಾಯಕರು ವಲಸೆಗೆ ಸಿದ್ಧವಾಗಿದ್ದಾರೆ ಎನ್ನುವ ಮಾತು ಇದೆ. ಈಗಾಗಲೇ ಮಧು ಬಂಗಾರಪ್ಪ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಜಿಟಿ ದೇವೇಗೌಡ ಸಹ ಒಂದ ಹೆಜ್ಜೆ ಹೊರಗೆ ಇಟ್ಟಿದ್ದಾರೆ ಎನ್ನುವ ಮಾತುಗಳು ಮೇಲಿಂದ ಮೇಲೆ ಕೇಳಿಬರುತ್ತಿವೆ. ಎಲ್ಲ ಸವಾಲುಗಳನ್ನು ನಿವಾರಿಸಿಕೊಂಡು ಜೆಡಿಎಸ್ ನಾಯಕರು ತಂತ್ರ ರೂಪಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಂಇ ಮತ್ತು ಪ್ರಜ್ವಲ್ ರೇವಣ್ಣಗೆ ಸಂಘಟನೆಯ ಹೆಚ್ಚಿನ ಜವಾಬ್ದಾರಿ ನೀಡಲು ಪಕ್ಷ ಮುಂದಾಗಿದೆ.

 

Follow Us:
Download App:
  • android
  • ios