ಕಲಬುರಗಿ ಪಾಲಿಕೆ: ಜೆಡಿಎಸ್ ದೋಸ್ತಿ ಯಾರ ಜತೆ? ದೇವೇಗೌಡ್ರು ಹೇಳಿದ್ದಿಷ್ಟು
* ಕಲಬುರಗಿ ಮಹಾನಗರ ಪಾಲಿಕೆ ಎಲೆಕ್ಷನ್ ರಿಸಲ್ಟ್
* ಕಲಬುರಗಿಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲ
* ಜೆಡಿಎಸ್‌ನೊಂದಿಗೆ ಅಧಿಕಾರಕ್ಕೇರಲು ಕಾಂಗ್ರೆಸ್, ಬಿಜೆಪಿ ನಡುವೆ ಪೈಪೋಟಿ
* ಸ್ಥಳೀಯ ನಾಯಕರ ಹೆಗಲ ಮೇಲೆ ಹಾಕಿದ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ
ಬೆಂಗಳೂರು, (ಸೆ.07): ಕಲಬುರಗಿ ಮಹಾನಗರ ಪಾಲಿಕೆ ಚನಾವಣೆ ಫಲಿತಾಂಶ ಪ್ರಕಟವಾಗಿದ್ದು, ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ.
ಪಾಲಿಕೆ ಚುನಾವಣೆಯ ಅಂತಿಮ ಫಲಿತಾಂಶ ಹೊರಬಿದ್ದಿದ್ದು ಒಟ್ಟು 55 ವಾರ್ಡ್ ಗಳ ಪೈಕಿ 27 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ 23 ವಾರ್ಡ್ ಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಕಠಿಣ ಪೈಪೋಟಿ ನೀಡಿದೆ. ಇನ್ನು 4 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಜೆಡಿಎಸ್ ಕಿಂಗ್ ಮೇಕರ್ ಆಗಿದ್ದು. ಇನ್ನು ಓರ್ವ ಪಕ್ಷೇತ್ತರ ಅಭ್ಯರ್ಥಿ ಕಲಬುರಗಿಯಲ್ಲಿ ಗೆಲುವು ಸಾಧಿಸಿದ್ದಾರೆ. ತೆನೆ ಯಾವ ಪಕ್ಷದ ಕೈಯಿಡಿಯುತ್ತದೆಯೋ ಆ ಪಕ್ಷಕ್ಕೆ ಮೇಯರ್ ಪಟ್ಟ ಸಿಗಲಿದೆ.
4 ಸ್ಥಾನ ಗೆದ್ದ ಕಿಂಗ್ ಮೇಕರ್ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ : ಸಿಎಂ ಮಾಹಿತಿ
ಈ ಹಿನ್ನೆಲೆಯಲ್ಲಿ ಜೆಡಿಎಸ್‌ನೊಂದಿಗೆ ದೋಸ್ತಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಲು ಒಂದು ಕಡೆ ಕಾಂಗ್ರೆಸ್ ಮತ್ತೊಂದೆಡೆ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಿಎಂ ಬೊಮ್ಮಾಯಿ ನಡುವೆ ಮಾತುಕತೆಗಳು ಆಗಿವೆ.
ಇನ್ನು ಈ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡ ಪ್ರತಿಕ್ರಿಯಿಸಿದ್ದು, ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ನಾಲ್ಕು ಸ್ಥಾನ ಗಳಿಸಿದೆ. ಬಿಜೆಪಿಗೆ ಸಹಕಾರ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುಮಾರಸ್ವಾಮಿ ಜತೆ ಮಾತನಾಡಿರುವ ಸಾಧ್ಯತೆ ಇದೆ. ಸ್ಥಳೀಯ ಮುಖಂಡರ ಅಭಿಪ್ರಾಯ ಕೇಳದೆ ನಿರ್ಧಾರ ಕೈಗೊಳ್ಳದಂತೆ ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಲಾಗಿದೆ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸಹಕಾರ ನೀಡುವಂತೆ ರಾಜ್ಯಸಭೆಯ ವಿರೋದ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಳಿದ್ದಾರೆ. ಖರ್ಗೆ ಅವರು ಅವರ ಪಕ್ಷದವರನ್ನು ಸಂಪರ್ಕಿಸಿ ಮಾತನಾಡಿದ್ದಾರೆ ಅನಿಸುತ್ತದೆ. ಖರ್ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕುಳಿತು ಮಾತನಾಡಲಿ ಆಮೇಲೆ ನೋಡೋಣ' ಎಂದರು.
"