Asianet Suvarna News Asianet Suvarna News

ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿಕೊಂಡ ದೇವೇಗೌಡ, ಸಿದ್ದು ಮೇಲೆ ಗೌಡ್ರ ಸಾಫ್ಟ್ ಕಾರ್ನ್

* ಸಿದ್ದರಾಮಯ್ಯನವರ ಹೇಳಿಕೆ ಸಮರ್ಥಿಸಿಕೊಂಡ ದೇವೇಗೌಡ
* ಬೊಮ್ಮಾಯಿ ಯಡಿಯೂರಪ್ಪನವರ ರಬ್ಬರ್ ಸ್ಟಾಂಪ್ ಎಂದು ಸಿದ್ದರಾಮಯ್ಯ ನೀಡಿದ್ದ ಹೇಳಿಕೆ
* ಸಿದ್ದರಾಮಯ್ಯ ಮೇಲೆ ಸಾಫ್ಟ್ ಕಾರ್ನರ್ ತೋರಿದ ಎಚ್‌ಡಿಡಿ

HD Devegowda soft corner On Congress Leader siddaramaiah rbj
Author
Bengaluru, First Published Aug 1, 2021, 10:45 PM IST
  • Facebook
  • Twitter
  • Whatsapp

ಬೆಂಗಳೂರು, (ಆ.01): ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು (ಭಾನುವಾರ) ಮಾಜಿ ಪ್ರಧಾನಿ ಎಚ್‌ಡಿ ದೇವೇಗವಡ ಅವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.

ಭೇಟಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನೀಡಿದ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ,  ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಸಾಫ್ಟ್ ಕಾರ್ನರ್ ತೋರಿದ್ದಾರೆ.

ಚಿತ್ರಗಳು: ಗುರು ಶಿಷ್ಯ ಭೇಟಿ ಮಧ್ಯೆ ಸೋಮಣ್ಣ-ರೇವಣ್ಣ

ಬಸವರಾಜ ಬೊಮ್ಮಾಯಿಯವರು ಬಿ.ಎಸ್. ಯಡಿಯೂರಪ್ಪನವರ ರಬ್ಬರ್ ಸ್ಟಾಂಪ್ ಎಂದು ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇವೇಗೌಡ್ರು, ಪಕ್ಷ ಬೆಳೆಯುತ್ತೆ ಅನ್ನೋ ಭಾವನೆಯಿಂದ ರಬ್ಬರ್ ಸ್ಟಾಂಪ್ ಅಂತಾ ಹೇಳುತ್ತಾರೆ. ಅದು ಅವರ ಪಕ್ಷದ ಹೇಳಿಕೆ. ಇಲ್ಲದಿದ್ದರೆ ವಿರೋಧ ಪಕ್ಷದ ನಾಯಕರಾಗಿ ಏನು ಹೇಳಿಲ್ಲ ಎನ್ನುತ್ತಾರೆ.  ಹೀಗಾಗಿ ಹೇಳಿರಬಹುದು ಎಂದು  ಸಿದ್ದರಾಮಯ್ಯನವರ ಮಾತನ್ನು ಸಮರ್ಥಿಸಿಕೊಂಡರು.

 ಸಿದ್ದರಾಮಯ್ಯ ನನ್ನ ಶಿಷ್ಯ ಎಂದು ಹೇಳಲ್ಲ. ಅವರು ದೊಡ್ಡ ನಾಯಕರಾಗಿ ಬೆಳೆದಿದ್ದಾರೆ ಎಂದು ಸಿದ್ದರಾಮಯ್ಯನವರ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನು ಯಡಿಯೂರಪ್ಪರನ್ನ ದೂರ ಇಟ್ಟು ಏನೂ ಮಾಡಲು ಸಾಧ್ಯವಿಲ್ಲ. ಬಸವರಾಜ್ ಬೊಮ್ಮಾಯಿ ಅವರಿಗೆ ಯಡಿಯೂರಪ್ಪರ ಬೆಂಬಲವೂ ಇದೆ. ಹೈಕಮಾಂಡ್ ಬೊಮ್ಮಾಯಿಗೆ ಆಶೀರ್ವಾದ ಮಾಡಿದ್ದಾರೆ.  ಹಾಗಾಗಿ ಸರ್ಕಾರಕ್ಕೆ ಯಾವುದೇ ಸಮಸ್ಯೆ ಆಗೋದಿಲ್ಲ ಎಂದರು.

ಮಧ್ಯಂತರ ಚುನಾವಣೆಗೆ ಹೋಗಬೇಕೆಂಬ ಹಠ ಯಾರಿಗೂ ಇದ್ದಂತಿಲ್ಲ. ನಮಗೂ ಚುನಾವಣೆಗೆ ಹೋಗಬೇಕೆಂಬ ಆತುರ ಇಲ್ಲ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios