Asianet Suvarna News Asianet Suvarna News

ಸಿಂದಗಿ ಉಳಿಸಿಕೊಳ್ಳಲು ಶಕ್ತಿಮೀರಿ ದೇವೇಗೌಡರ ಯತ್ನ : ಹೊಸ ಪ್ಲಾನ್

  • ಸಿಂದಗಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು 
  • ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿಕೆ
HD Devegowda Plan To win JDS in Sindagi snr
Author
Bengaluru, First Published Oct 14, 2021, 7:58 AM IST
  • Facebook
  • Twitter
  • Whatsapp

 ವಿಜಯಪುರ (ಅ.14):  ಸಿಂದಗಿ (Sindagi) ಕ್ಷೇತ್ರವನ್ನು ಉಳಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ಜೆಡಿಎಸ್‌ (JDS) ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (HD Devegowda) ಹೇಳಿದರು.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಸಹಪಾಠಿಯಾಗಿದ್ದ ದಿವಂಗತ ಎಂ.ಸಿ.ಮನಗೂಳಿ (MC Managuli) ಅವರು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕ್ಷೇತ್ರಕ್ಕೆ ನಾನೂ ಸೇವೆ ಸಲ್ಲಿಸಿದ್ದೇನೆ. ಸಿಂದಗಿ ಕ್ಷೇತ್ರ ಉಳಿಸಿಕೊಳ್ಳಲು 9 ದಿನ ಇಲ್ಲಿಯೇ ಇದ್ದು ಗೆಲ್ಲಲು ಶ್ರಮಿಸಲಾಗುವುದು. ನನ್ನ ರಾಜಕೀಯ (Politics) ಜೀವನದಲ್ಲಿ ಜೀವನದ ಕೊನೆಯ ಘಟ್ಟದಲ್ಲಿ ಈ ಚುನಾವಣೆಯನ್ನು (Election) ಗೆಲ್ಲಲು ದೃಢವಾದ ಹೆಜ್ಜೆ ಇಡಲಾಗುವುದು. ಎಲ್ಲರ ಸಹಕಾರದಿಂದ ಜೆಡಿಎಸ್‌ (JDS) ಅಭ್ಯರ್ಥಿ ಗೆಲ್ಲಿಸಲು ಶ್ರಮ ಪಡಲಾಗುವುದು ಎಂದು ಹೇಳಿದರು.

ನಿಮ್ಮ ತಂದೆ ಕೂಡ ವಿಪಕ್ಷ ನಾಯಕರಾಗಿದ್ರು, ಅದು ಪುಟಗೋಸಿನಾ? ಎಚ್‌ಡಿಕೆಗೆ ಸಿದ್ದು ಗುದ್ದು

ಒಮ್ಮತದ ಅಭ್ಯರ್ಥಿ ಕಣಕ್ಕೆ:  ಎರಡು ದಿನ ಚರ್ಚೆ ನಡೆಸಿ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲಾಗಿದೆ. ಸಾರ್ವಜನಿಕ ಭಾಷಣಕ್ಕಷ್ಟೇ ಸೀಮಿತವಾಗದೆ ಗ್ರಾಮಗಳಿಗೆ ತೆರಳಿ ರೈತರು (Farmers), ಮಹಿಳೆಯರು, ಯುವ ಜನತೆಗೆ (Youths) ಮನವರಿಕೆ ಮಾಡುವ ಮೂಲಕ ಜೆಡಿಎಸ್‌ (JDS) ಗೆಲ್ಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ನನ್ನ ಜೀವನದ ಕೊನೆಯ ಘಟ್ಟದಲ್ಲಿ ನಿಮ್ಮ ಮುಂದೆ ಬಂದಿದ್ದೇನೆ. ನಮ್ಮ ಅಭ್ಯರ್ಥಿ ಗೆಲ್ಲಿಸಿ ಎಂದು ಮತದಾರರಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದೂ ಹೇಳಿದರು.

ಜೆಡಿಎಸ್‌ (JDS) ಮುಗಿಸಲು ಹುನ್ನಾರ:  ಕುಮಾರಸ್ವಾಮಿ (HD Kumaraswamy) ಅವರು ಎರಡೂ ಕ್ಷೇತ್ರಗಳಲ್ಲಿ ಚುನಾವಣೆ (Election) ಪ್ರಚಾರ ಮಾಡಲಿದ್ದಾರೆ. ಸಿಂದಗಿ ಕ್ಷೇತ್ರ ಗೆಲ್ಲಲು ಹೆಚ್ಚಿನ ಗಮನ ಹರಿಸಲಾಗಿದೆ. ಶಕ್ತಿಮೀರಿ ಪ್ರಯತ್ನಿಸಲಾಗುವುದು. ಅಂತಿಮವಾಗಿ ಮತದಾರರು ನಿರ್ಧಾರ ಕೈಗೊಳ್ಳಲಿದ್ದಾರೆ. ಜೆಡಿಎಸ್‌ (JDS) ಪಕ್ಷ ಮುಗಿಸಲು ಕಾಂಗ್ರೆಸ್‌ (Congress), ಬಿಜೆಪಿಗಳು (BJP) ಹುನ್ನಾರ ನಡೆಸಿವೆ. ಅದು ಸಾಧ್ಯವಾಗಲ್ಲ. ಕಾಶ್ಮೀರದಲ್ಲಿ 7 ವರ್ಷಗಳ ಹಿಂದೆ ಏನಿತ್ತು? ಇಂದು ಏನು ನಡೆದಿದೆ ಎಂದು ಎಲ್ಲವನ್ನು ವಿಶ್ಲೇಷಣೆ ಮಾಡಲ್ಲ. ಇಂದಿನ ಪರಿಸ್ಥಿತಿ ನಾಳೆ ಏನಾಗಲಿದೆ ಎಂದು ಈಗಲೇ ಏನನ್ನೂ ಹೇಳಲು ಆಗುವುದಿಲ್ಲ ಎಂದರು.

ಏಕಾಂಗಿಯಾಗಿ ಹೋರಾಟ:  ನಮಗೆ ಯಾವುದೇ ಪಕ್ಷದೊಂದಿಗೆ ಚುನಾವಣೆ ಸಂಬಂಧ ಇಲ್ಲ. ಏಕಾಂಗಿಯಾಗಿ ಹೋರಾಡುತ್ತೇವೆ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ (2023 Assembly Election) ರಾಜ್ಯಾದ್ಯಂತ ಸಂಚರಿಸುತ್ತೇನೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗಿನಿಂದ ಸರ್ಕಾರ ಹೋಗುವ ತನಕ ಏನಾಯಿತು ಎಂದು ಹೇಳಬೇಕು ಎಂದ ಅವರು, ನನ್ನನ್ನು ಏಕ ವಚನದಲ್ಲಿ ಮಾತನಾಡಿದ್ದಾರೆ ಎಂದು ತಿಳಿಸಿದರು.

Follow Us:
Download App:
  • android
  • ios