ಜೆಡಿಎಸ್ ಪಕ್ಷದ ನಿಷ್ಠರಾಗಿ, ಪಕ್ಷ ಸಂಘಟನೆಗೆ ದುಡಿದು ಸಭ್ಯ ಹಾಗೂ ಸರಳ ರಾಜಕಾರಣಿ ಎನಿಸಿಕೊಂಡ ವೈ.ಎಸ್.ವಿ. ದತ್ತಾ ಅವರಿಗೆ ದೊಡ್ಡಗೌಡ್ರ ಕಡೆಯಿಂದ ಜಾಕ್ ಪಾಟ್ ಹೊಡೆದಿದೆ. ಏನದು?
ಬೆಂಗಳೂರು, [ಜ.03]: ಜೆಡಿಎಸ್ ವರಿಷ್ಟ ಎಚ್.ಡಿ. ದೇವೇಗೌಡರ ಮಾನಸಪುತ್ರ ಎಂದೇ ಗುರುತಿಸಲ್ಪಡುವ ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಹೆಗಲಿಗೆ ಹೊಸ ಜವಾಬ್ದಾರಿ ಹಾಕಿದ್ದಾರೆ.
ಇಂದು ನಡೆದ ಜೆಡಿಎಸ್ ನಾಯಕರ ಸಭೆಯಲ್ಲಿ ದೇವೇಗೌಡ ಅವರು ವೈ.ಎಸ್.ವಿ ದತ್ತಾ ಅವರನ್ನು ಜೆಡಿಎಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಮಾಡಿ ಆದೇಶ ಮಾಡಿದ್ದಾರೆ.
ಶೆಟ್ಟರ್ ಗೆ ಬಹಿರಂಗ ಸವಾಲು ಹಾಕಿದ ದತ್ತಾ
ಇನ್ನು ಈ ಬಗ್ಗೆ ಮಾತನಾಡಿದ ದೊಡ್ಡಗೌಡ್ರು, ವೈ.ಎಸ್.ವಿ ದತ್ತಾ ಅವರನ್ನು ಜೆಡಿಎಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಮಾಡುತ್ತೇವೆ. ಮೂವತ್ತೂ ಜಿಲ್ಲೆಗಳಲ್ಲಿ ಪ್ರಚಾರದ ಜವಾಬ್ದಾರಿ ಅವರದ್ದು ಎಂದು ಹೇಳಿದರು.
ಜೆಡಿಎಸ್'ನಿಂದ ಸೋತ ಮೂವರಿಗೆ ಜಾಕ್'ಪಾಟ್ ಹುದ್ದೆ
ಜೆಡಿಎಸ್ ಪಕ್ಷದ ನಿಷ್ಠರಾಗಿ, ಪಕ್ಷ ಸಂಘಟನೆಗೆ ದುಡಿದು ಸಭ್ಯ ಹಾಗೂ ಸರಳ ರಾಜಕಾರಣಿ ಎನಿಸಿಕೊಂಡ ವೈ.ಎಸ್.ವಿ. ದತ್ತ, ಶಾಸಕರಾಗಿ ನಿಭಾಯಿಸಿದ ಕಾರ್ಯ ರಾಜ್ಯದ ಜನರ ಗಮನ ಸೆಳೆದಿತ್ತು.
ಆದ್ರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಸೋಲನ್ನು ಕಂಡಿದ್ದ ಇವರು ವಿಧಾನಪರಿಷತ್ ಮೂಲಕ ಶಾಸಕರಾಗುವ ಆಸೆ ಹೊತ್ತಿದ್ದರು.
ಆದರೆ ಧರ್ಮೇಗೌಡರಿಗೆ ವಿಧಾನಪರಿಷತ್ ಗೆ ಜೆಡಿಎಸ್ ಮಣೆ ಹಾಕಿದ್ದರಿಂದ ಬೇಸರಗೊಂಡಿರುವ ದತ್ತಾ ಅವರಿಗೆ ಇಂದು ದೇವೇಗೌಡ ಅವರೇ ಜೆಡಿಎಸ್ ಪ್ರಚಾರ ಸಮಿತಿಯ ಅಧ್ಯಕ್ಷ ಹೊಣೆ ಹೋರಿಸಿದ್ದಾರೆ.
