ಈಶ್ವರಪ್ಪರನ್ನ ಪೆದ್ದ ಎಂದು ಕರೆಯುವುದರಲ್ಲಿ ಆಶ್ಚರ್ಯವಿಲ್ಲ: ಎಚ್.ಸಿ. ಮಹದೇವಪ್ಪ
ಆರ್‌ಎಸ್‌ಎಸ್‌ನಿಂದ ಸಚಿವ ಸ್ಥಾನ ಪಡೆಯಲು ದಲಿತರ ಸಂವಿಧಾನಿಕ ಅವಕಾಶಗಳ ಮೇಲೆ ಅಸಹನೆ ತೋರಬಾರದು: ಮಹದೇವಪ್ಪ
ಮೈಸೂರು(ಸೆ.18): ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಪೆದ್ದ ಎಂದು ಕರೆಯುವುದರಲ್ಲಿ ಆಶ್ಚರ್ಯವಿಲ್ಲ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವ್ಯಂಗ್ಯವಾಡಿದ್ದಾರೆ.
ಶೇ. 40 ಈಶ್ವರಪ್ಪನವರೇ ಎಂದು ಮೊದಲಿಸಿರುವ ಅವರು, ಮೀಸಲಾತಿ ಎಂಬುದು ಆರ್ಥಿಕ ಕಾರಣಕ್ಕಾಗಿ ನೀಡುವಂತದ್ದಲ್ಲ. ಅದು ಪ.ವರ್ಗದ ಸಮುದಾಯಗಳು ಐತಿಹಾಸಿಕವಾಗಿ ಅನುಭವಿಸಿದ ಅವಮಾನ, ಅಸಮಾನತೆ ಮತ್ತು ಅಸ್ಪೃಶ್ಯತೆಯ ಕಾರಣಕ್ಕಾಗಿ ನೀಡುವಂತದ್ದು. ಬಾಯಿಗೆ ಬಂದ ಹಾಗೆ ಮಾತನಾಡುವ ಬದಲು ಸಂವಿಧಾನ ಓದಿದರೆ ಯಾರಿಗೂ ಈ ಸಮಸ್ಯೆ ಇರುವುದಿಲ್ಲ ಎಂದಿದ್ದಾರೆ.
ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟ: ಸರ್ಕಾರದ ವಿರುದ್ಧ ಈಶ್ವರಪ್ಪ ಕಿಡಿ
ಅಲ್ಲದೆ ಮೀಸಲಾತಿಗೆ ಸಾಮಾಜಿಕ ಅಸಮಾನತೆ ಮಾನದಂಡವೇ ಹೊರತು ಆರ್ಥಿಕತೆ ಅಲ್ಲ. ಆರ್‌ಎಸ್‌ಎಸ್‌ನಿಂದ ಸಚಿವ ಸ್ಥಾನ ಪಡೆಯಲು ದಲಿತರ ಸಂವಿಧಾನಿಕ ಅವಕಾಶಗಳ ಮೇಲೆ ಅಸಹನೆ ತೋರಬಾರದು ಎಂದು ಅವರು ಹೇಳಿದ್ದಾರೆ.