ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವವೇ ಇಲ್ಲ: ಬಸವರಾಜ ಬೊಮ್ಮಾಯಿ
ಮಹಾರಾಷ್ಟ್ರ ಎಲೆಕ್ಷನ್ ಗೂ ಇಲ್ಲಿಗೂ ಸಂಬಂಧ ಇಲ್ಲ. ಮಿನಿಸ್ಟರ್ ಆದೇಶದ ಪ್ರಕಾರ ಮಾಡಿರೋದಾಗಿ ಡಿಸಿನೇ ಹೇಳಿದ್ದಾರ. ಇಷ್ಟೊಂದು ಸಚಿವರು ಶಾಸಕರನ್ನು ಹಾಕಿ ಶಿಗ್ಗಾವಿಯಲ್ಲಿ ಎಲೆಕ್ಷನ್ ಮಾಡ್ತಿದ್ದಾರೆಂದರೆ ಕಾಂಗ್ರೆಸ್ ಅಸ್ತಿತ್ವ ಇಲ್ಲ ಅಂತ ಅರ್ಥ. ಕಾಂಗ್ರೆಸ್ ಈಸ್ ವೆರಿ ವೀಕ್ ಎಂದ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ
ಹಾವೇರಿ(ಅ.30): ಖಾದ್ರಿ ನಾಮಪತ್ರ ವಾಪಾಸ್ ಅವರ ಪಕ್ಷದ ಆಂತರಿಕವಾದ ನಿರ್ಣಯವಾಗಿದೆ. ಅದು ಅವರ ಓಟ್ ಬ್ಯಾಂಕ್‌ಗಾಗಿ ತೆಗೆದುಕೊಂಡ ನಿರ್ಣಯವಾಗಿದೆ. ಇದು ನಮಗೆ ಪ್ಲಸ್ ಇಲ್ಲ, ಮೈನಸ್ ಇಲ್ಲ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಯಾಸೀರ್ ಖಾನ್ ಪಠಾಣ್ ರೌಡಿ ಶೀಟರ್ ಅಂತ ಹೇಳಿದ್ದು ನನಗೇ ಟಿಕೆಟ್ ಸಿಗಬೇಕು ಎಂಬ ಉದ್ದೇಶದಿಂದ ಎಂಬ ಖಾದ್ರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಬುಧವಾರ) ಜಿಲ್ಲೆಯ ಶಿಗ್ಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಮ ಅವರು, ಅದಕ್ಕೆ ಉತ್ತರ ಖಾದ್ರಿ ಕೊಡಬೇಕು. ಈಗ ಅವರ ಜೊತೆನೇ ಸೇರಿದಾರೆ. ಯಾವ ಮಾತು ಎಷ್ಟರ ಮಟ್ಟಿಗೆ ಗಂಭೀರವಾಗಿ ತಗೊಬೇಕು ಅಂತ ನಿಮಗೆ ಗೊತ್ತಾಗಿದೆ. ಜಮೀರ್ ಕಳೆದ ಚುನಾವಣೆಗಳಲ್ಲಿ ಏನೇನು ಮಾಡಿದಾರೆ ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಅವರ ಗುರಿ ನನ್ನ ಮಗನನ್ನ ಸೋಲಿಸೋದು. ಆದರೆ ಜನತೆ ಗುರಿ ನನ್ನ ಮಗನನ್ನು ಗೆಲ್ಲಿಸೋದು. ದಯವಿಟ್ಟು ಒಂದ್ ಸಲ ಕ್ಷೇತ್ರದಲ್ಲಿ ಓಡಾಡೋಕೆ ಹೇಳಿ. ಅವರು ಓಡಾಡೋ ರಸ್ತೆ, ನೀರು ಲೈಟು ಯಾರ ಕಾಲದಲ್ಲಿ ಆಗಿದೆ?. ಸುಮ್ಮನೇ ಬೀದಿಲಿ ನಿಂತು ಎಲೆಕ್ಷನ್ ಗೋಸ್ಕರ ಹೇಳಿದರೆ ಪ್ರಯೋಜನ ಇಲ್ಲ ಎಂದು ತಿಳಿಸಿದ್ದಾರೆ.
ದೇಶಕ್ಕೆ ಕತ್ತಲ ರಾತ್ರಿಯ ರಾಜಕಾರಣ ಪರಿಚಯಿಸಿದ್ದೇ ಕಾಂಗ್ರೆಸ್: ಸಂಸದ ಬೊಮ್ಮಾಯಿ
ಮಹಾರಾಷ್ಟ್ರ ಎಲೆಕ್ಷನ್ ಇರೋ ಹಿನ್ನಲೆಯಲ್ಲಿ ವಕ್ಫ್ ಆಸ್ತಿ ವಿಚಾರದಲ್ಲಿ ರಾಜಕಾರಣ ಮಾಡ್ತಿದ್ದಾರೆ ಎಂಬ ಜಮೀರ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಮಹಾರಾಷ್ಟ್ರ ಎಲೆಕ್ಷನ್ ಗೂ ಇಲ್ಲಿಗೂ ಸಂಬಂಧ ಇಲ್ಲ. ಮಿನಿಸ್ಟರ್ ಆದೇಶದ ಪ್ರಕಾರ ಮಾಡಿರೋದಾಗಿ ಡಿಸಿನೇ ಹೇಳಿದ್ದಾರ. ಇಷ್ಟೊಂದು ಸಚಿವರು ಶಾಸಕರನ್ನು ಹಾಕಿ ಶಿಗ್ಗಾವಿಯಲ್ಲಿ ಎಲೆಕ್ಷನ್ ಮಾಡ್ತಿದ್ದಾರೆಂದರೆ ಕಾಂಗ್ರೆಸ್ ಅಸ್ತಿತ್ವ ಇಲ್ಲ ಅಂತ ಅರ್ಥ. ಕಾಂಗ್ರೆಸ್ ಈಸ್ ವೆರಿ ವೀಕ್ ಎಂದಿದ್ದಾರೆ.