Asianet Suvarna News Asianet Suvarna News

ರೈತ ವಿರೋಧಿ ಸರ್ಕಾರ ಕರ್ನಾಟಕದಲ್ಲಿದೆ: ಬಸವರಾಜ ಬೊಮ್ಮಾಯಿ ವಾಗ್ದಾಳಿ

ನಮ್ಮಲ್ಲಿ ರಾಹುಲ್ ಗಾಂಧಿ ಅಂತಾ ಒಬ್ಬರಿದ್ದಾರೆ. ರಾತ್ರಿ ಕನಸಿನಲ್ಲಿ ಬೀಳುವ ವಿಷಯವನ್ನ ಬೆಳಗ್ಗೆ ಹೇಳ್ತಾರೆ. ಸ್ವತ್ತನ್ನ ಬಡವರಿಗೆ ಹಂಚುತ್ತೇವೆ ಅಂತಾ ಹೇಳಿದ್ರು. ಚರ್ಚೆಯಾಗ್ತಿದ್ದಂತೆ ಸರ್ವೆ ಮಾಡ್ತೇವೆ ಹಂಚಲ್ಲ ಅಂದ್ರು. ಕಾಂತರಾಜು ವರದಿಯಾಕೆ ಜಾರಿ ಮಾಡಿಲ್ಲ. ಅಂಬೇಡ್ಕರ್ ಅವರನ್ನ ಕೆಟ್ಟದಾಗಿ ಕಂಡ ಕಾಂಗ್ರೆಸ್ ಈಗ ಮಾತ್ನಾಡುತ್ತೆ. ಬಿಜೆಪಿ ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಟ್ಟಿತು ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಬಸವರಾಜ ಬೊಮ್ಮಾಯಿ 

Haveri BJP Candidate Basavaraj Bommai slams Karnataka Congress Government grg
Author
First Published May 2, 2024, 8:45 PM IST

ಗದಗ(ಮೇ.02): ಕಾಂಗ್ರೆಸ್ ಶಾಸಕ ರಾಜು ಕಾಗೆ ಸತ್ಯವನ್ನೇ ಹೇಳಿದ್ದಾರೆ. ಕಾಂಗ್ರೆಸ್‌ಗೆ ಮತ ಹಾಕದಿದ್ದರೆ ಶಾಶ್ವತವಾಗಿ ವಿದ್ಯುತ್ ಕಡಿತ ಮಾಡ್ತೇನೆ ಅಂತಾರೆ‌‌, ಅಲ್ದೆ ಪ್ರಧಾನಿ ನರೇಂದ್ರ ಮೋದಿ ಅವರ ಸಾವಿನ ಬಗ್ಗೆ ಮಾತ್ನಾಡಿದ್ದಾರೆ. ನೀವು ಇಲ್ಲಿ ಶಾಶ್ವತವಾಗಿ ಇರೋದಕ್ಕೆ ಬಂದಿದ್ದೀರಾ?. ನೀವು ಹೀಯಾಳಿಸಿದಷ್ಟು ಮೋದಿ ಬೆಳೆಯುತ್ತಾರೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ. 

ಇಂದು(ಗುರುವಾರ) ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ನಮ್ಮಲ್ಲಿ ರಾಹುಲ್ ಗಾಂಧಿ ಅಂತಾ ಒಬ್ಬರಿದ್ದಾರೆ. ರಾತ್ರಿ ಕನಸಿನಲ್ಲಿ ಬೀಳುವ ವಿಷಯವನ್ನ ಬೆಳಗ್ಗೆ ಹೇಳ್ತಾರೆ. ಸ್ವತ್ತನ್ನ ಬಡವರಿಗೆ ಹಂಚುತ್ತೇವೆ ಅಂತಾ ಹೇಳಿದ್ರು. ಚರ್ಚೆಯಾಗ್ತಿದ್ದಂತೆ ಸರ್ವೆ ಮಾಡ್ತೇವೆ ಹಂಚಲ್ಲ ಅಂದ್ರು. ಕಾಂತರಾಜು ವರದಿಯಾಕೆ ಜಾರಿ ಮಾಡಿಲ್ಲ. ಅಂಬೇಡ್ಕರ್ ಅವರನ್ನ ಕೆಟ್ಟದಾಗಿ ಕಂಡ ಕಾಂಗ್ರೆಸ್ ಈಗ ಮಾತ್ನಾಡುತ್ತೆ. ಬಿಜೆಪಿ ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಟ್ಟಿತು ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. 

ಲೋಕಸಭಾ ಚುನಾವಣೆ 2024: ಮತ್ತೆ ಸಿಎಂ ಆಗ್ತಿದ್ದೆ, ಆದ್ರೂ ದಿಲ್ಲಿಗೆ ಹೊರಟಿರುವೆ, ಬಸವರಾಜ ಬೊಮ್ಮಾಯಿ

ಎಸ್.ಸಿ, ಎಸ್ ಟಿ ಮೀಸಲಾತಿಯನ್ನ ಹೆಚ್ಚಿಗೆ ಮಾಡಿದ್ದೆ, ಪರಿಣಾಮ ಎಸ್ ಸಿ, ಎಸ್ ಟಿ ಸಮುದಾಯದ ಯುವಕರಿಗೆ ಮೆಡಿಕಲ್ ಸೀಟ್ ಸಿಗುವಂತಾಯಿತು. ಮೀಸಲಾತಿ ಹೆಚ್ಚಳ ಜೇನು ಗೂಡು ಮುಟ್ಟಬೇಡಿ ಅಂದ್ರು. ಜೇನು ಕಡೆದರು, ಜನರಿಗೆ ಜೇನು ಕೊಡುತ್ತೇನೆ ಅಂತಾ ಮೀಸಲಾತಿ ಹೆಚ್ಚಿಸಿದೆ ಎಂದು ಹೇಳಿದ್ದಾರೆ. 

10 ಎಚ್ ಪಿ ವರೆಗೂ ರೈತ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ಕೊಟ್ಟಿದ್ದು ಯಡಿಯೂರಪ್ಪ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಕೊಟ್ಟಿದ್ದು ಬಿಜೆಪಿ. ಅಧಿಕಾರಕ್ಕೆ ಬಂದಾಗ ಗೊಬ್ಬರ ಬಗ್ಗೆ ದೊಡ್ಡ ಗದ್ದಲವಾಯ್ತು. ಕಾಂಗ್ರೆಸ್ ಅವಧಿಯಲ್ಲಿ ಖಾಸಗಿಯವರ ಕೈಯಲ್ಲಿ ಗೊಬ್ಬರ ವ್ಯವಸ್ಥೆ ಇತ್ತು. ಗೊಬ್ಬರ ಸರ್ಕಾರಿ ವ್ಯವಸ್ಥೆಯಲ್ಲಿ ಬರುವಂತೆ ಮಾಡಿದ್ರು. ಬರ, ಕುಡಿಯುವ ನೀರಿಗೆ ಒಂದು ಪೈಸೆ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಮೂರು ಸಾವಿರ ಕೊಟ್ಟಿದೆ..  ರೈತರಿಗೆ ಮನೆ ಕೊಡುವುದು, ರೈತ ಸನ್ಮಾನ್ ನಿಧಿ ನಿಲ್ಲಿಸಿದೆ. ರೈತ ವಿರೋಧಿ ಸರ್ಕಾರ ರಾಜ್ಯದಲ್ಲಿದೆ ಎಂದು ಬೊಮ್ಮಾಯಿ ಕಿಡಿ ಕಾರಿದ್ದಾರೆ.

Follow Us:
Download App:
  • android
  • ios