Asianet Suvarna News Asianet Suvarna News

ವಿದೇಶದಿಂದ ಬಂದ ಪ್ರಜ್ವಲ್‌ ರೇವಣ್ಣ, ಕುಟುಂಬದೊಂದಿಗೆ ವಿಹಾರಕ್ಕೋದ ಕುಮಾರಣ್ಣ

ಹಾಸನದ ಮಹಿಳೆಯರ ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಬೆನ್ನಲ್ಲಿಯೇ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕುಟುಂಬದೊಂದಿಗೆ ವಿಹಾರಕ್ಕೆಂದು ತೆರಳಿದ್ದು, ಅಂತರ ಕಾಯ್ದುಕೊಂಡಿದ್ದಾರೆ.

Hassan Prajwal Revanna Came to Bengaluru but HD Kumaraswamy gone to family trip sat
Author
First Published May 31, 2024, 12:25 AM IST

ಮೈಸೂರು (ಮೇ 31): ಹಾಸನದ ಮಹಿಳೆಯರ ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಬೆನ್ನಲ್ಲಿಯೇ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕುಟುಂಬದೊಂದಿಗೆ ವಿಹಾರಕ್ಕೆಂದು ತೆರಳಿದ್ದು, ಅಂತರ ಕಾಯ್ದುಕೊಂಡಿದ್ದಾರೆ.

ಹಾಸನದ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿಂದ ತಲೆ ಮರೆಸಿಕೊಂಡಿದ್ದ ಸಂಸದ ಪ್ರಜ್ವಲ್ ರೇವಣ್ಣನನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಜ್ವಲ್ ದೇಶಕ್ಕೆ ಮರಳುತ್ತಿದ್ದಂತೆಯೇ ಅಂತರ ಕಾಯ್ದುಕೊಂಡಿದ್ದಾರೆ. ಪ್ರಜ್ವಲ್ ಬೆಂಗಳೂರಿನತ್ತ ಆಗಮಿಸಿದರೆ ಕುಮಾರಸ್ವಾಮಿ ಅವರು ಹೆಂಡತಿ ಅನಿತಾ ಕುಮಾರಸ್ಬಾಮಿ, ಮಗ ನಿಖಿಲ್, ಸೊಸೆ ರೇವತಿ ಹಾಗೂ ಮೊಮ್ಮಗ ಚಿ.ಅವ್ಯಾನ್ ದೇವ್‌ನೊಂನೊಂದಿಗೆ ಕಬಿನಿ ಜಲಾಶಯದ ಹಿನ್ನೀರಿನ ಬಳಿಯ ಹೋಟೆಲೊಂದರಲ್ಲಿ ಸಮಯ ಕಳೆಯುತ್ತಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಯ ಮತದಾನದ ದಿನ ಮತ ಚಲಾವಣೆ ಮಾಡಿ ಸಂಜೆ ವಿದೇಶಕ್ಕೆ ತೆರಳಿದ್ದರು. ಇದಾದ ನಂತರ ಪ್ರಜ್ವಲ್ ರೇವಣ್ಣ ಅವರದ್ದೆನ್ನಲ್ಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆಯಾಗಿದ್ದವು. ಜೊತೆಗೆ, ಸಾಮಾಜಿಕ ಜಾಲತಾಣಗಳ ಮೂಲಕವೂ ವಿಡಿಯೋಗಳು ಹಂಚಿಕೆಯಾಗಿ ವೈರಲ್ ಆಗುತ್ತಿದ್ದವು. ಇನ್ನು ನೂರಾರು ಮಹಿಳೆಯರ ಮಾನ ಮರ್ಯಾದೆ ಹರಾಜಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ವಿಚಾರಣೆಗೆ ಹಾಜರಾಗಲು ಪ್ರಜ್ವಲ್‌ಗೆ ನೋಟೀಸ್ ಜಾರಿ ಮಾಡಿದರೆ ಒಂದು ವಾರ ವಿಳಂಬವಾಗಲಿದೆ ಎಂದು ಕಾಲಾವಕಾಶ ಕೇಳಿದ್ದರು. ನಂತರ ಈ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ಬಳಕೆ ಆಗುತ್ತಿದ್ದುದನ್ನು ಕಂಡು ವಿದೇಶದಲ್ಲಿಯೇ ಉಳಿದುಕೊಂಡಿದ್ದರು.

ಮಧ್ಯರಾತ್ರಿ ನಿದ್ದೆಗೆಟ್ಟು ಪ್ರಜ್ವಲ್ ರೇವಣ್ಣನ ಮೇಲೆ ಕಣ್ಣಿಟ್ಟ 2,000 ಜನ

ಈ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾತರಸ್ವಾಮಿ ತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ದೇಶಕ್ಕೆ ವಾಪಸ್ ಬಂದು ವಿಚಾರಣೆ ಎದುರಿಸುವಂತೆ ಎಚ್ಚರಿಕೆ ಕೊಟ್ಟಿದ್ದರು. ಜೊತೆಗೆ. ಕುಟುಂಬದಿಂದ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ಕೊಟ್ಟಿದ್ದರು. ಇನ್ನು ಕೇಂದ್ರ ಸರ್ಕಾರದಿಂದ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದತಿಗೂ ಕ್ರಮ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪ್ರಜ್ವಲ್ ರೇವಣ್ಣ ಮೇ 30ರ ಮಧ್ಯರಾತ್ರಿ 12.30ಕ್ಕೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಆದರೆ, ಇದಕ್ಕೂ ಮೊದಲೇ ಪ್ರಜ್ವಲ್ ಕೇಸ್‌ನಿಂದ ಅಂತರ ಕಾಯ್ದುಕೊಂಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ.

Latest Videos
Follow Us:
Download App:
  • android
  • ios