Asianet Suvarna News Asianet Suvarna News

ಹಾರ್ದಿಕ್ ಪಟೇಲ್ ರಾಜಕೀಯಕ್ಕೆ ಎಂಟ್ರಿ: ಯಾವ ಪಕ್ಷದಿಂದ ಸ್ಪರ್ಧೆ? ಇಲ್ಲಿದೆ ವಿವರ

ಹಾರ್ದಿಕ್‌ ಪಟೇಲ್‌ ರಾಜಕೀಯ ಪ್ರವೇಶ ಮಾಡುವುದನ್ನು ಬುಧವಾರ ಖಚಿತಪಡಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಕಣಕ್ಕೆ ಇಳಿಯುವುದಾಗಿ ಅವರು ಪ್ರಕಟಿಸಿದ್ದಾರೆ. ಅಷ್ಟಕ್ಕೂ ಅವರು ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ? ಇಲ್ಲಿದೆ ವಿವರ

Hardik Patel says he will contest upcoming Lok Sabha elections 2019
Author
Lucknow, First Published Feb 7, 2019, 1:15 PM IST

ಲಖನೌ[ಫೆ.07]: ಪಾಟಿದಾರ್‌ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌ ರಾಜಕೀಯ ಪ್ರವೇಶ ಮಾಡುವುದನ್ನು ಬುಧವಾರ ಖಚಿತಪಡಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಕಣಕ್ಕೆ ಇಳಿಯುವುದಾಗಿ ಅವರು ಪ್ರಕಟಿಸಿದ್ದಾರೆ. ಅದರೆ ತಾವು ಯಾವುದೇ ರಾಜಕೀಯ ಪಕ್ಷ ಸೇರುವ ಬಗ್ಗೆ ಅವರು ಸುಳಿವು ಬಿಟ್ಟುಕೊಟ್ಟಿಲ್ಲ. ಜೊತೆಗೆ ಪಕ್ಷೇತರನಾಗಿ ಸ್ಪರ್ಧಿಸುವಿರಾ ಎಂಬ ಪ್ರಶ್ನೆಗೂ ಅವರ ಉತ್ತರ ನೀಡಿಲ್ಲ.

ಲಖನೌದಲ್ಲಿ ಸುದ್ದಿಗಾರರು ರಾಜಕೀಯ ಪ್ರವೇಶದ ಬಗ್ಗೆ ಪ್ರಶ್ನಿಸಿದಾಗ, ಖಂಡಿತವಾಗಿಯೂ ನಾನು 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು. ಆದರೆ ಕಾಂಗ್ರೆಸ್‌ ಸೇರುವಿರಾ ಎಂಬ ಪ್ರಶ್ನೆಗೆ ಈ ಬಗ್ಗೆ ಮುಂದೆ ನಿರ್ಧರಿಸಲಾಗುವುದು ಎಂದಷ್ಟೇ ಹೇಳಿದರು.

ಆದರೆ ಮೂಲಗಳ ಪ್ರಕಾರ ಹಾರ್ದಿಕ್‌ ಪಟೇಲ್‌ ಕಾಂಗ್ರೆಸ್‌ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ. ಜೊತೆಗೆ ಹಾರ್ದಿಕ್‌ ಮೆಹ್ಸಾನಾ ಅಥವಾ ಅಮ್ರೇಲಿ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ.

ಆದರೆ ಪ್ರಕರಣವೊಂದರ ಸಂಬಂಧ ಮೆಹ್ಸಾನಾ ಪ್ರವೇಶ ಮಾಡದಂತೆ ನ್ಯಾಯಾಲಯವೊಂದು ಹಾರ್ದಿಕ್‌ಗೆ ನಿರ್ಬಂಧ ವಿಧಿಸಿದೆ. ಇದನ್ನು ಹಾರ್ದಿಕ್‌ ಪಟೇಲ್‌ ಪ್ರಶ್ನಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ ಬೆಂಬಲದೊಂದಿಗೆ ಹಾರ್ದಿಕ್‌ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆಯನ್ನೂ ಕಾಂಗ್ರೆಸ್‌ ನಾಯಕರು ತಳ್ಳಿಹಾಕಿಲ್ಲ.

Follow Us:
Download App:
  • android
  • ios