ಹಾನಗಲ್ ಬೈ ಎಲೆಕ್ಷನ್: ಗೆಲುವಿನ ನಿರೀಕ್ಷೆಯಲ್ಲಿರುವ ಬಿಜೆಪಿಗೆ ಬಿಗ್ ಶಾಕ್

* ರಂಗೇರಿದ ಹಾನಗಲ್ ಉಪಚುನಾವಣೆ
* ಗೆಲುವಿನ ನಿರೀಕ್ಷೆಯಲ್ಲಿರುವ ಬಿಜೆಪಿಗೆ ಬಿಗ್ ಶಾಕ್
* ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ಹಾನಗಲ್​​ನಲ್ಲಿ ಬಂಡಾಯದ ಭೀತಿ

Hangal By Poll BJP rebel candidate Channappa Bellary files nomination rbj

ಹಾವೇರಿ, (ಅ.09): ರಾಜ್ಯದಲ್ಲಿ ಸಿಂದಗಿ ಹಾಗೂ ಹಾನಗಲ್ (Hangal) ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ (By Election) ಘೋಷಣೆಯಾಗಿದ್ದು, ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಶುರುವಾಗಿದೆ.

 ಹಾನಗಲ್​​, ಸಿಂದಗಿ ಕ್ಷೇತ್ರಗಳಲ್ಲಿ ಗೆಲುವು ಪಡೆಯುವುದು ಬಿಜೆಪಿ (BJP) ಸರ್ಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.  ಅದರಲ್ಲೂ ಹಾವೇರಿ (Haveri) ಜಿಲ್ಲೆಯ  ಹಾನಗಲ್‌ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದ ಬಿಜೆಪಿಗೆ ಆತಂಕ ಶುರುವಾಗಿದೆ.

ಸಿಂದಗಿ, ಹಾನಗಲ್‌ 'ಕೈ' ಅಭ್ಯರ್ಥಿ ಘೋಷಣೆ: ಪ್ಲಸ್, ಮೈನಸ್ ಲೆಕ್ಕಾಚಾರ ಹೀಗಿದೆ

ಹೌದು....ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ಹಾನಗಲ್​​ನಲ್ಲಿ ಬಂಡಾಯ ಎದುರಾಗಿದ್ದು,​ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಚನ್ನಪ್ಪ ಬಳ್ಳಾರಿ (Channappa Bellary) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಕೇಸರಿ ಭದ್ರಕೋಟೆ ಹಾನಗಲ್​​​ ಕ್ಷೇತ್ರದಲ್ಲಿ ಬಿಜೆಪಿ ಶಿವರಾಜ್ ಸಜ್ಜನರ್ (Shivaraj Sajjan) ಅವರಿಗೆ ಟಿಕೆಟ್​​ ನೀಡಿದೆ. ಇದೇ ಕ್ಷೇತ್ರದಿಂದ ಚನ್ನಪ್ಪ ಬಳ್ಳಾರಿ ಹಾಗೂ ರೇವತಿ ಅವರು ಪ್ರಬಲ ಟಿಕೆಟ್​ ಆಕಾಂಕ್ಷಿಗಳಾಗಿದ್ದರು. ಬಿಜೆಪಿ ಟಿಕೆಟ್ ಮೇಲೆ ಭರವಸೆ ಇಟ್ಟಿದ್ದ ಚನ್ನಪ್ಪ ಬಳ್ಳಾರಿ ಅವರು ಟಿಕೆಟ್ ಕೈತಪ್ಪಿದಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಬಂಡಾಯ ಅಭ್ಯರ್ಥಿ ಸ್ಫರ್ಧೆಯಿಂದ ಬಿಜೆಪಿ ಕಂಗಾಲಾಗಿದ್ದು, ಬಂಡಾಯ ಅಭ್ಯರ್ಥಿ ಸ್ಪರ್ಧೆಯಿಂದ ಬಿಜೆಪಿ ಹಿನ್ನಡೆ ಆತಂಕ ಎದುರಾಗಿದೆ. ಯಾಕಂದ್ರೆ ಕ್ಷೇತ್ರದಲ್ಲಿ ಸುಮಾರು 60 ಸಾವಿರ ಮತಗಳು ಇದ್ದು,  ಚನ್ನಪ್ಪ ಬಳ್ಳಾರಿ ಸಹ  ಪಂಚಮಸಾಲಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ  ಪಂಚಮಸಾಲಿ ಮತಗಳನ್ನು  ಚನ್ನಪ್ಪ ಬಳ್ಳಾರಿ ಸೆಳೆದುಕೊಂಡರೆ ಬಿಜೆಪಿಗೆ ಹಿನ್ನಡೆಯಾಗಲಿದೆ ಎನ್ನುವ ಭೀತಿ ಶುರುವಾಗಿದೆ.

ಇನ್ನು ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಚನ್ನಪ್ಪ ಬಳ್ಳಾರಿ, ಬಿಜೆಪಿಯವರು ಯಾಕೋ ನನ್ನ ಹೆಸರನನ್ನ ತೆಗೆದುಕೊಳ್ಳಲಿಲ್ಲ. ಕಳೆದ ಮೂರು ವರ್ಷಗಳಿಂದ ನಾನು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಹಾನಗಲ್​ನಲ್ಲಿ ನಮ್ಮದೇ ಆದ ದೊಡ್ಡ ಸಮಾಜ ಇದ್ದು, ಆ ದೃಷ್ಟಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

 ನಾಯಕರೊಂದಿಗೆ ಚರ್ಚೆ ಮಾಡಿದ ಬಳಿಕವೂ ಬಿಜೆಪಿ ಹೈಕಮಾಂಡ್ ಟಿಕೆಟ್ ಕೊಟ್ಟಿಲ್ಲ. ಪಂಚಾಮಸಾಲಿ ಶ್ರೀಗಳು ಕೂಡ ನನಗೆ ಬೆಂಬಲ ಸೂಚಿಸಿದ್ದಾರೆ. ಅವರು ಇರೋ ಸ್ಥಳದಿಂದಲೇ ನನ್ನ ಪರ ಪ್ರಚಾರ ಮಾಡುತ್ತಾರೆ. ನನ್ನ ಸ್ಫರ್ಧೆಗೂ ಮೀಸಲಾತಿ ಹೋರಾಟಕ್ಕೂ ಸಂಬಂಧವಿಲ್ಲ. ಬಿಜೆಪಿ ನಾಯಕರು ಮನವೊಲಿಸಲು ನಾಮಪತ್ರ ವಾಪಸ್​ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಕಡ್ಡಿ ಉದ್ಭವ ಆಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು. 

Latest Videos
Follow Us:
Download App:
  • android
  • ios