Asianet Suvarna News Asianet Suvarna News

ಬೈಎಲೆಕ್ಷನ್ ಟೈಮಲ್ಲಿ HDKಗೆ ಕಂಟಕ, ಕರೆದಾಗ ಬರಲೇಬೇಕು!

ಎಚ್ಡಿಕೆ ಗೆ ಡಿ-ನೋಟಿಫಿಕೇಷನ್ ಸಂಕಷ್ಟ/ ಹಲಗೆವಡೇರಹಳ್ಳಿ  ಡಿನೋಟಿಫಿಕೇಷನ್ ಪ್ರಕರಣ/ ಎಚ್.ಡಿ. ಕುಮಾರಸ್ವಾಮಿ ವಿರುದ್ಧದ ವಿಚಾರಣೆ ರದ್ದು ಪಡಿಸಲು ಹೈಕೋರ್ಟ್ ನಕಾರ/ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲದಲ್ಲಿ ವಿಚಾರಣೆ / ವಿಚಾರಣೆ ರದ್ದು ಕೋರಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

Halagevaderahalli Denotification Court rejects HDK Application mah
Author
Bengaluru, First Published Oct 15, 2020, 12:13 AM IST

ಬೆಂಗಳೂರು (ಅ. 15)  ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿಗೆ ಡಿ-ನೋಟಿಫಿಕೇಷನ್ ಸಂಕಷ್ಟ  ಮತ್ತೆ ಎದುರಾಗಿದೆ.  ಹಲಗೆವಡೇರಹಳ್ಳಿ  ಡಿನೋಟಿಫಿಕೇಷನ್ ಪ್ರಕರಣವನ್ನು ರದ್ದು ಕೋರಿ  ಕುಮಾರಸ್ವಾಮಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇದನ್ನು ಪುರಸ್ಕರಿಸದ ನ್ಯಾಯಾಲಯ ವಿಚಾರಣೆಗೆ ಹಾಜರಾಗಲು ತಿಳಿಸಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ತಮಗೆ ಜಾರಿಗೊಳಿಸಿದ್ದ ಸಮನ್ಸ್ ಹಾಗೂ ಪ್ರಕರಣದ ವಿಚಾರಣೆ ರದ್ದು ಕೋರಿದ್ದ ಎಚ್.ಡಿ. ಕುಮಾರಸ್ವಾಮಿ  ಅರ್ಜಿ ಸಲ್ಲಿಕೆ ಮಾಡಿದ್ದರು.

ನ್ಯಾ. ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕ ಸದಸ್ಯಪೀಠ ಅರ್ಜಿ ವಜಾಗೊಳಿಸಿದೆ ಹೀಗಾಗಿ ಕುಮಾರಸ್ವಾಮಿ ವಿಚಾರಣೆಗೆ ಹಾಜರಾಗುವುದು ಅನಿವಾರ್ಯವಾಗಿದೆ. ಇದೀಗ ಮತ್ತೆ ಡಿ-ನೋಟಿಫಿಕೇಷನ್ ಸಂಕಷ್ಟ ಎದುರಾದಂತಾಗಿದೆ

ಕುಮಾರಸ್ವಾಮಿ ಜೊತೆಗೆ ಪದ್ಮಾ, ಶ್ರೀದೇವಿ, ಚೇತನ್‌ಕುಮಾರ್‌, ಕೆ.ಬಿ ಶಾಂತಮ್ಮ, ಎಸ್‌. ರೇಖಾ ಚಂದ್ರು, ಯೋಗ ಮೂರ್ತಿ, ಬಿ.ನರಸಿಂಹುಲು ನಾಯ್ಡು, ಆರ್‌. ಬಾಲಕೃಷ್ಣ, ಟಿ. ಮುರುಳಿಧರ್‌, ಜಿ. ಮಲ್ಲಿಕಾರ್ಜುನ, ಇ.ಎ ಯೋಗೇಂದ್ರನಾಥ, ಪಿ.ಜಗದೀಶ, ಡಿ.ಎಸ್‌ ದೀಪಕ್‌, ಎಂ.ಸುಬ್ರಮಣಿ, ಬಾಲಾಜಿ ಇನ್ಫ್ರಾ, ಶುಭೋಧಯ ಬಿಲ್ಡರ್ಸ್‌, ಸನ್‌ರೈಸ್‌ ಬಿಲ್ಡರ್ಸ್‌ ಮತ್ತು ಆರತಿ ಡೆವಲಪರ್ಸ್‌ ಪ್ರಮುಖರು ಆರೋಪಿತರಾಗಿದ್ದಾರೆ. ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದರು.

Follow Us:
Download App:
  • android
  • ios