Asianet Suvarna News Asianet Suvarna News

ಮಂತ್ರಿಗಿರಿಗಾಗಿ ದೆಹಲಿಗೆ ಅಲೆಯಲ್ಲ: ಎಚ್‌.ವಿಶ್ವನಾಥ್‌

ನಾನು ಮಂತ್ರಿಗಿರಿಗಾಗಿ ಅಂಟಿಕೊಂಡವನಲ್ಲ| ಸಚಿವ ಸ್ಥಾನ ಸಿಗುತ್ತದೆ ಎಂದು ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ರಾಜೀನಾಮೆ ನೀಡಿಲ್ಲ| ರಾಕ್ಷಸ ಆಡಳಿತ ಕೊನೆಗಾಣಬೇಕು ಎಂಬ ಕಾರಣಕ್ಕಾಗಿಯೇ ನಾವು ರಾಜೀನಾಮೆ ನೀಡಿ ಹೊರ ಬಂದೆವು| ಬಿಜೆಪಿಯಲ್ಲಿ ಮೂಲ- ವಲಸಿಗ ಎಂಬುದಿಲ್ಲ. ಈ ವಿಚಾರವನ್ನು ಯಾರೂ ಮಾತನಾಡಬಾರದು: ಎಚ್‌.ವಿಶ್ವನಾಥ್‌| 

H Vishwanath Talks Over Minister Post grg
Author
Bengaluru, First Published Nov 29, 2020, 1:20 PM IST

ಬಳ್ಳಾರಿ(ನ.29): ನನಗೆ ನಲವತ್ತು ವರ್ಷಗಳ ರಾಜಕೀಯ ಅನುಭವವಿದೆ. ಮಂತ್ರಿಗಿರಿಗಾಗಿ ದೆಹಲಿಗೆ ಅಲೆಯೋದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದ್ದಾರೆ. 

ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ನನ್ನ ಅನುಭವ ನೋಡಿ ಮಂತ್ರಿ ಮಾಡಬೇಕು. ಸಚಿವ ಸ್ಥಾನ ನೀಡಿದರೆ ಉತ್ತಮ ಕೆಲಸ ಮಾಡುವೆ. ಇಲ್ಲದಿದ್ದರೆ ಇಲ್ಲಿಯೇ ಇರುತ್ತೇನೆ. ಸಚಿವ ಸ್ಥಾನ ಸಿಗುತ್ತೆಂದು ಜೆಡಿಎಸ್‌- ಕಾಂಗ್ರೆಸ್‌ ಸರ್ಕಾರಕ್ಕೆ ರಾಜೀನಾಮೆ ನೀಡಲಿಲ್ಲ. ರಾಕ್ಷಸ ಆಡಳಿತ ಕೊನೆಗಾಣಬೇಕು ಎಂಬ ಕಾರಣಕ್ಕಾಗಿಯೇ ನಾವು ರಾಜೀನಾಮೆ ನೀಡಿ ಹೊರ ಬಂದೆವು ಎಂದರು.

ಜಾರಕಿಹೊಳಿಯಂತಹ ವ್ಯಕ್ತಿ ಎಲ್ಲಾ ಕಡೆ ಇರಲ್ಲ : ಈಶ್ವರಪ್ಪ

ನಾನು ಮಂತ್ರಿಗಿರಿಗಾಗಿ ಅಂಟಿಕೊಂಡವನಲ್ಲ. ಸಚಿವ ಸ್ಥಾನ ಸಿಗುತ್ತದೆ ಎಂದು ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ರಾಜೀನಾಮೆ ನೀಡಿಲ್ಲ. ರಾಕ್ಷಸ ಆಡಳಿತ ಕೊನೆಗಾಣಬೇಕು ಎಂಬ ಕಾರಣಕ್ಕಾಗಿಯೇ ನಾವು ರಾಜೀನಾಮೆ ನೀಡಿ ಹೊರ ಬಂದೆವು. ಬಿಜೆಪಿಯಲ್ಲಿ ಮೂಲ- ವಲಸಿಗ ಎಂಬುದಿಲ್ಲ. ಈ ವಿಚಾರವನ್ನು ಯಾರೂ ಮಾತನಾಡಬಾರದು. ಅದರಿಂದ ಪಕ್ಷಕ್ಕೆ ಮುಜಗರವಾಗುತ್ತದೆ. ನಾವೆಲ್ಲ ಬಿಜೆಪಿ ಟಿಕೆಟ್‌ ಪಡೆದೇ ಗೆದ್ದಿದ್ದೇವೆ. ಹೀಗಾಗಿ ಮೂಲ- ವಲಸಿಗ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ರಮೇಶ್‌ ಜಾರಕಿಹೊಳಿ ಬಗ್ಗೆ ನಮಗ್ಯಾವ ಅಸಮಾಧಾನವಿಲ್ಲ. ಊಟಕ್ಕಾಗಿ ಸೇರಿದ ಕೂಡಲೇ ಏನೇನೋ ಕಲ್ಪನೆ ಮಾಡಿಕೊಳ್ಳುವುದು ಸರಿಯಲ್ಲ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವ ಚರ್ಚೆ ಎಲ್ಲೂ ನಡೆದಿಲ್ಲ ಎಂದರು.
 

Follow Us:
Download App:
  • android
  • ios