ಜೆಡಿಎಸ್‌ಗೇ ಮತ ಹಾಕ್ಬೇಕು ಅಂತ ಅಂದ್ಕೊಂಡಿದ್ದೇನೆ, ಕೊನೆ ಕ್ಷಣದಲ್ಲಿ ಏನ್ ಬೇಕಾದ್ರೂ ಆಗಬಹುದು: ಗುಬ್ಬಿ ಶಾಸಕ
* ನನ್ನ ಮನಸಾಕ್ಷಿಗೆ ತಕ್ಕಂತೆ ಮತ ಹಾಕ್ತೇನೆ
* ಸದ್ಯ ಬೇರೆ ಪಕ್ಷದ ಯಾವುದೇ ಅಭ್ಯರ್ಥಿಗಳು, ಮುಖಂಡರು ನನ್ನನ್ನು ಸಂಪರ್ಕಿಸಿಲ್ಲ
* ಜೆಡಿಎಸ್ ಪಕ್ಷದ ಮುಖಂಡರೇ ಈಗ ನನ್ನನ್ನ ಹೊರಗೆ ಹಾಕ್ತಿದ್ದಾರೆ
ವರದಿ: ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್, ತುಮಕೂರು
ತುಮಕೂರು(ಜೂ.09): ರಾಜ್ಯಸಭೆ ಚುನಾವಣೆಯ ಮತದಾನಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದೆ. ಈ ಬೆನ್ನಲ್ಲೇ ಜೆಡಿಎಸ್ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿದೆ. ಜೆಡಿಎಸ್ ಅಸಮಧಾನಿತ ಶಾಸಕರು ಜೆಡಿಎಸ್ ಪಾಲಿಗೆ ಬಿಸಿ ತುಪ್ಪವಾಗಿದ್ದಾರೆ.
ಇಂದು(ಗುರುವಾರ) ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಮಾತನಾಡಿದ ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್, ನನ್ನ ಮನಸಾಕ್ಷಿಗೆ ತಕ್ಕಂತೆ ಮತ ಹಾಕ್ತೇನೆ ಅಂತ ಹೇಳಿದ್ದಾರೆ. ನಮ್ಮ ಪಕ್ಷದ ಮುಖಂಡರು, ವಕ್ತಾರರು ಎಲ್ಲೂ ಬನ್ನಿ ಅಂತ ಹೇಳಿಲ್ಲ, ನನ್ನ ಎಲ್.ಎಚ್ ರೂಮ್ ಗೆ ವಿಪ್ ನೀಡಲಾಗಿದೆ, ನಿನ್ನೆ ವಿಪ್ ನಾ ತೆಗೆದುನೋಡಿದ್ದೇನೆ. ನಾಡಿದ್ದು ಶುಕ್ರವಾರ ಚುನಾವಣೆಯಿದೆ, ಈವರೆಗೂ ಪಕ್ಷದಿಂದ ಯಾವುದೇ ಕರೆ ಬಂದಿಲ್ಲ, ಖುದ್ದು ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ಮನೆಗೆ ಬಂದಿದ್ದರು, ತಿಂಡಿ ತಿಂದು ಮತಯಾಚನೆ ಮಾಡಿದ್ದಾರೆ. ಶಾಸಕ ಅನ್ನದಾನಿ ಕರೆ ಮಾಡಿದ್ರು, ಬೆಂಗಳೂರಿಗೆ ಬಂದರೆ ಮೀಟ್ ಮಾಡಲು ಹೇಳಿದ್ರು. ರೆಸಾರ್ಟ್‌ಗೆ ನನ್ನನ್ನ ಕರೆದಿಲ್ಲ, ನಾನು ಜೆಡಿಎಸ್ ಅಸಮಧಾನಿತಲ್ಲ, ನಮ್ಮ ಪಕ್ಷದ ಮುಖಂಡರು ನನ್ನೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆ. ಈವರೆಗೂ ನಾನು ಫರ್ಮ್ ಮೈಂಡ್ ನಲ್ಲಿದ್ದೇನೆ. ಮತಸಗಟ್ಟೆ ಒಳಗಡೆ ಹೋದಾಗ ಏನಾಗೊತ್ತೋ ಗೊತ್ತಿಲ್ಲ. ನಾನು ಈವರೆಗೂ ಜೆಡಿಎಸ್‌ಗೆ ವೋಟ್ ಹಾಕ್ಬೇಕು ಅಂದು ಕೊಂಡಿದ್ದೇನೆ, ಕೊನೆ ಕ್ಷಣದಲ್ಲಿ ಏನ್ ಬೇಕಾದ್ರೂ ಬದಲಾವಣೆ ಆಗಬಹುದು, ಹಾಗಂತ ನಾನು ಬೇರೆ ಆಮಿಷಗಳಿಗೆ ಒಳಗಾಗಿ ವೋಟ್ ಹಾಕುವ ಪ್ರವೃತ್ತಿ ನನಗಿಲ್ಲ, ನನ್ನ ಮನಸಾಕ್ಷಿ ಹೇಳಿದಂತೆ ವೋಟ್ ಹಾಕ್ತೀನಿ. ಬ್ಯಾಲೇಟ್ ಪೇಪರ್ ಮುಂದೆ ನಿಂತಾಗ ಡಿಸೈಡ್ ಮಾಡ್ತೀನಿ ಎಂದಿದ್ದಾರೆ.
ಪ್ರವಾದಿ ಮಹಮದ್‌ರಿಗೆ ಅಪಮಾನ, ಬಿಜೆಪಿ ಕ್ಷಮೆ ಕೇಳಬೇಕು: ಜಿ.ಪರಮೇಶ್ವರ್
ಸದ್ಯ ಬೇರೆ ಪಕ್ಷದ ಯಾವುದೇ ಅಭ್ಯರ್ಥಿಗಳು, ಮುಖಂಡರು ನನ್ನನ್ನು ಸಂಪರ್ಕಿಸಿಲ್ಲ, ರಾಜ್ಯಸಭೆ ಚುನಾವಣೆ ಪ್ರಕ್ರಿಯೆ ಶುರುವಾದ ಮೇಲೆ ಕುಮಾರಸ್ವಾಮಿ ಕರೆ ಮಾಡಿಲ್ಲ, ನಾನು ರೆಸಾರ್ಟ್‌ಗೆ ಹೋಗಲ್ಲ, ನಾನು ರೆಸಾರ್ಟ್ ರಾಜಕಾರಣ ಮಾಡಿಲ್ಲ, ನನ್ನ ಬಗ್ಗೆ ನನಗೆ ವಿಶ್ವಾಸವಿದೆ. ನನಗೆ ಮುಚ್ಚಿಕೊಳ್ಳುವುದು, ಕದ್ದು ಇಟ್ಟುಕೊಳ್ಳುವ ಪ್ರವೃತ್ತಿಲ್ಲ, ನಾನು ಏಲ್ಲಿದ್ರು, ಏನ್ ಮಾಡ್ಬೇಕೋ ಅದನ್ನೇ ಮಾಡ್ತೀನಿ. ನೇರವಾಗಿ ಹೋಗಿ ನನಗೆ ಯಾರು ಮನಸಿಗೆ ಬರ್ತಾರೋ ಅವರಿಗೆ ವೋಟ್ ಹಾಕ್ತೀನಿ. ನಾನು ಮೂಲತಃ ಕಾಂಗ್ರೆಸಿಗ, ಜಿಲ್ಲಾ ಪಂಚಾಯ್ತಿ ಮೆಂಬರ್ ಆಗಿದ್ದು ಕಾಂಗ್ರೆಸ್ ನಿಂದಲ್ಲೇ, ಈ ಹಿಂದೆ ಕುಮಾರಸ್ವಾಮಿಯವರು ಎಂಎಲ್‌ಎ ಸೀಟ್ ಕೊಡ್ತೀನಿ ಅಂತ ಹೇಳಿದ್ರು. ಆದರೆ ಟಿಕೆಟ್ ಕೊಡಲಿಲ್ಲ, ಆಗ ನಾನು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದೆ, ಆ ಬಳಿಕ ನಾನೇ ಜೆಡಿಎಸ್‌ಗೆ ಹೋಗಿದ್ದೆ, ಈಗ ಪಕ್ಷದ ಮುಖಂಡರೇ ನನ್ನ ಹೊರಗೆ ಹಾಕ್ತಿದ್ದಾರೆ ಎಂದು ಅಸಮಧಾನ ಹೊರಹಾಕಿದ್ದಾರೆ.