ಇನ್ನೂ ಮೂರು ವರ್ಷ ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಲ್ಲ: ಸಚಿವ ಈಶ್ವರ ಖಂಡ್ರೆ
ಬೀದರ್ ಜಿಲ್ಲೆಯ ಜನತೆ ನಮ್ಮ ತಂದೆಯಿಂದ ಹಿಡಿದು ನಾನು ಮತ್ತು ನನ್ನ ಪುತ್ರ ಸಾಗರ ಖಂಡ್ರೆಯವರಿಗೆ ಆಶಿರ್ವಾದ ಮಾಡಿದ್ದೀರಿ. ಹೀಗಾಗಿ ಬೀದರ್ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ನಾವಾಗಲಿ ನಿಮ್ಮ ಕಿರಿಯ ವಯಸ್ಸಿನ ಸಂಸದರಾದ ಸಾಗರ ಖಂಡ್ರೆ ಅವರು 24 ಗಂಟೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದ ಸಚಿವ ಈಶ್ವರ ಖಂಡ್ರೆ
ಕಮಲನಗರ(ನ.20): ಕಾಂಗ್ರೆಸ್ ಸರ್ಕಾರ ಯಾವುದೇ ಕಾರಣಕ್ಕೂ ನೀಡಿರುವ 5 ಗ್ಯಾರಂಟಿಗಳು ನಿಲ್ಲಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮದ ಮಡಿವಾಳೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆದ ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿ, ಬೀದರ್ ಜಿಲ್ಲೆಯ ಜನತೆ ನಮ್ಮ ತಂದೆಯಿಂದ ಹಿಡಿದು ನಾನು ಮತ್ತು ನನ್ನ ಪುತ್ರ ಸಾಗರ ಖಂಡ್ರೆಯವರಿಗೆ ಆಶಿರ್ವಾದ ಮಾಡಿದ್ದೀರಿ. ಹೀಗಾಗಿ ಬೀದರ್ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ನಾವಾಗಲಿ ನಿಮ್ಮ ಕಿರಿಯ ವಯಸ್ಸಿನ ಸಂಸದರಾದ ಸಾಗರ ಖಂಡ್ರೆ ಅವರು 24 ಗಂಟೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದರು.
ನಾನು ಲಂಬಾಣಿಯಾದ ಕಾರಣ ದೇವಸ್ಥಾನ ಕೆಲಸಕ್ಕೆ ಅಡ್ಡಿ, ಬಿಜೆಪಿ ನಾಯಕನಿಂದ ಅನ್ಯಾಯ: ಪ್ರಭು ಚವ್ಹಾಣ್
2019ರಲ್ಲಿ ನಾನು ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ 300 ಕೋಟಿ ರು. ಅನುದಾನ ತಂದು ಬಸವೇಶ್ವರರ ಅನುಭವ ಮಂಟಪವು ಪ್ರಾರಂಭಿಸಿದ್ದೇವೆ. ಮುಂದೆ ಒಂದು ವರ್ಷದಲ್ಲಿ ಇನ್ನು 600 ಕೋಟಿ ರು ತಂದು ಮುಂದಿನ ವರ್ಷದಲ್ಲಿ ಉದ್ಘಾಟಿಸಲಿದ್ದೇವೆ ಎಂದರು.
ಖಂಡ್ರೆ ದಂಪತಿಗೆ ಬಸ್ ನಿಲ್ದಾಣದಿಂದ ಮಡಿವಾಳೇಶ್ವರ ಮಂದಿರದವರೆಗೆ ಸಾರೋಟಿನಲ್ಲಿ ಭಜಂತ್ರಿಯೊಂದಿಗೆ ಮೇರವಣಿಗೆ ಬಾಜಾ ಮಾಡಲಾಯಿತು. ಈ ಸಂದರ್ಭದಲ್ಲಿ ಖಂಡ್ರೆ ಡಾ.ಭೀಮಸೇನರಾವ ಶಿಂಧೆ, ಪ್ರಕಾಶಟೊಣ್ಣೆ, ಪ್ರವೀಣ ಪಾಟೀಲ್, ಭೀಮರಾವ ಪಾಟೀಲ್, ಲಿಂಗಾನಂದ ಮಹಾಜನ, ಶಿವಾನಂದ ವಡ್ಡೆ, ಸುಭಾಷ ಮಿರ್ಚೆ, ದೇವಿಂದ್ರಪಾಟೀಲ್, ಹಣಮಂತಚವ್ಹಾಣ,ಬಾಬುರಾವ ಸಿರಗಿರೆ, ಎಸ್.ಎನ್.ಶಿವಣಕರ, ಆನಂದ ಚವ್ಹಾಣ, ರೇಣುಕಾ ಪ್ರವೀಣ ಪಾಟೀಲ್, ಬಾಬುರಾವ ಪಾಟೀಲ್ ಹೊರಂಡಿ ಇದ್ದರು. ಸಂತೋಷ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.