Asianet Suvarna News Asianet Suvarna News

ಘೋಷಣೆ ಮಾಡಿದ ಯೋಜನೆ ಜಾರಿಗೆ ಸರ್ಕಾರ ನಿರಂತರ ಪ್ರಯತ್ನ: ಸಚಿವ ಶಿವಾನಂದ ಪಾಟೀಲ್

ರಾಜ್ಯ ಸರ್ಕಾರ ಏನೇನೂ ಘೋಷಣೆ ಮಾಡಿದೆ ನಿರಂತರ ಪ್ರಯತ್ನ ಮಾಡಿ ಜಾರಿ ಮಾಡುತ್ತದೆ, 50 ವರ್ಷಗಳಲ್ಲಿ ಇಲ್ಲದ ಯೋಜನೆಗಳನ್ನು ಸರ್ಕಾರ ಮೊದಲ ಬಾರಿ ಘೋಷಣೆ ಮಾಡಿದೆ. ಅದರಲ್ಲಿ ಹಂತ ಹಂತವಾಗಿ ಕೆಲವೊಂದು ಈಡೇರುತ್ತಿವೆ.

Government is making continuous efforts to implement the announced scheme Says Minister Shivanand Patil gvd
Author
First Published Jun 22, 2023, 12:56 PM IST

ಬೆಳಗಾವಿ (ಜೂ.22): ರಾಜ್ಯ ಸರ್ಕಾರ ಏನೇನೂ ಘೋಷಣೆ ಮಾಡಿದೆ ನಿರಂತರ ಪ್ರಯತ್ನ ಮಾಡಿ ಜಾರಿ ಮಾಡುತ್ತದೆ, 50 ವರ್ಷಗಳಲ್ಲಿ ಇಲ್ಲದ ಯೋಜನೆಗಳನ್ನು ಸರ್ಕಾರ ಮೊದಲ ಬಾರಿ ಘೋಷಣೆ ಮಾಡಿದೆ. ಅದರಲ್ಲಿ ಹಂತ ಹಂತವಾಗಿ ಕೆಲವೊಂದು ಈಡೇರುತ್ತಿವೆ, ಕೆಲವು ಸಮಸ್ಯೆ ಇರುವುದರಿಂದ ಶೀಘ್ರ ಜಾರಿ ವ್ಯವಸ್ಥೆಯ ಸಮೀಪ ಹೋಗುವ ಪ್ರಯತ್ನ ಮಾಡೋಣ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಸರ್ವರ್‌ ಹ್ಯಾಕ್‌ ಮಾಡಿದೆ ಎಂಬ ಸತೀಶ್‌ ಜಾರಕಿಹೊಳಿ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದನ್ನು ನಿನ್ನೆಯೇ ಹೇಳಿದ್ದಾರಲ್ಲ, ನೀವು ಕೇಳಿದೀರಿ, ಅವರು ಹೇಳಿದ್ದಾರೆ. ಹ್ಯಾಕ್‌ ಬಗ್ಗೆ ನಾನು ಹೇಳುವುದರಲ್ಲಿ ಅರ್ಥ ಇಲ್ಲ ಎಂದರು. ರಾಜ್ಯದಲ್ಲಿ ಬಸ್‌ಗಳ ಕೊರತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಇದ್ದಿದ್ದರಲ್ಲೇ ಓಡಾಡಬೇಕು, ಇಲ್ಲದಿರುವುದನ್ನು ಸೃಷ್ಟಿಮಾಡಬೇಕು. ಸರ್ಕಾರ ಹೊಸ ಬಸ್‌ಗಳನ್ನು ಪಡೆಯುವ ಪ್ರಯತ್ನ ಮಾಡುತ್ತಿದೆ

ರಾತ್ರಿ ಗಸ್ತು ನಡೆಸಿ: ಎಸ್ಪಿ, ಡಿಸಿಪಿಗಳಿಗೆ ಡಿಜಿಪಿ ಅಲೋಕ್‌ ಮೋಹನ್‌ ಸೂಚನೆ

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಹಾಕಲಾಗಿದೆ ಎಂದು ತಿಳಿಸಿದರು. ಬೆಳಗಾವಿಯಲ್ಲಿ ಗುಜರಿ ಬಸ್‌ಗಳು ಓಡಾಡುತ್ತಿರುವ ವಿಚಾರ ಕುರಿತು ಮಾತನಾಡಿದ ಅವರು, ದಕ್ಷಿಣ ಕರ್ನಾಟಕದಲ್ಲಿ ಉತ್ತರ ಕರ್ನಾಟಕದಲ್ಲಿ ಇರುವಷ್ಟುಬಸ್‌ ಇಲ್ಲ, ಅಲ್ಲಿ ಖಾಸಗಿ ಬಸ್‌ಗಳನ್ನು ಓಡಾಡಿಸುತ್ತಾರೆ. ಗುಜರಿ ಬಸ್‌ಗಳು ಓಡಾಡುವ ಬಗ್ಗೆ ಗಮನಕ್ಕೆ ಇಲ್ಲ, ಈ ಕುರಿತು ಸಂಬಂಧಿಸಿದ ಇಲಾಖೆ ಮಂತ್ರಿಗಳು ಮಾತನಾಡುತ್ತಾರೆ ಎಂದರು. ಬಳಕೆ ಆಗುವಂತಿದ್ದರೆ ತಗೆದುಕೊಳ್ಳಲಿ ಬಿಡಿ ತಪ್ಪಿಲ್ಲ, ಕಂಡೀಷನ್‌ ಸರಿ ಇದ್ದ ಬಸ್‌ಗಳು ಇಲ್ಲಿ ಉಪಯೋಗ ಆದರೆ ಸರಿ ಅಲ್ಲವೇ, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಗೆದುಕೊಂಡು ಬನ್ನಿ ನಾನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.

ಸಕ್ಕರೆ ಇಲಾಖೆ ಕೊಟ್ಟಿದ್ದು ಸಮಾಧಾನ ತಂದಿದೆಯಾ ಎಂದು ಸುದ್ದಿಗಾರರ ಪ್ರಶ್ನೆ ಉತ್ತರಿಸಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು, ಎಂಟೆಂಟು ಬಾರಿ ಗೆದ್ದವರನ್ನು ಬಿಟ್ಟಿದ್ದಾರೆ, ಆರು ಬಾರಿ ಗೆದ್ದವನನ್ನು ಸಚಿವರನ್ನಾಗಿ ಮಾಡಿದ್ದಾರೆ. ನಾನು ಅವರಿಗೆ ಕೃತಜ್ಞ ಇರಬೇಕೋ ಬೇಡವೋ ಎಂದು ಸಚಿವ ಪಾಟೀಲ ಪ್ರಶ್ನೆ ಮಾಡಿದರು. ಆರೋಗ್ಯ ಇಲಾಖೆಯಲ್ಲಿ ನಾನೂ ಚೆನ್ನಾಗಿ ಕೆಲಸ ಮಾಡಿದ್ದೆ, ನನಗೆ ಅದನ್ನೇ ಕೊಟ್ಟಿದ್ದರೆ ಇಲಾಖೆ ಸುಧಾರಿಸಬಹುದಿತ್ತು. ಆದರೆ ಹಿಂದೆ ಶ್ರೀರಾಮುಲು, ಸುಧಾಕರ ಸುಧಾರಣೆ ಮಾಡಲಿಲ್ಲ, ಹೀಗಾಗಿ ಸ್ಪಲ್ಪ ಅಡೆತಡೆ ಆಗಿದೆ ಎಂದರು. ದಿನೇಶ್‌ ಗುಂಡೂರಾವ್‌ ಆರೋಗ್ಯ ಇಲಾಖೆ ಸುಧಾರಣೆ ಮಾಡುವ ಆತ್ಮವಿಶ್ವಾಸ ಇದೆ. ಅವರು ನಮ್ಮವರೇ ನಮ್ಮ ಪಕ್ಷದವರೇ ಇದ್ದಾರೆ, ಯಾವ ಇಲಾಖೆ ಕೊಟ್ಟರೂ ಕೆಲಸ ಮಾಡಬೇಕು. ಸಕ್ಕರೆ ಇಲಾಖೆಯಲ್ಲಿ ಸುಧಾರಣೆ ತಂದರೆ ನನಗೂ ತೃಪ್ತಿ ಅಲ್ವೇ ಎಂದರು.

ಬಜೆಟ್‌ನಲ್ಲಿ ಹೆಚ್ಚಿನ ಬದಲಾವಣೆ ಮಾಡದೇ ಹೊಸ ರೂಪ: ಡಿ.ಕೆ.ಶಿವಕುಮಾರ್‌

ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರೀತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರನ್ನ ಕೇಳಬೇಕು ಅವರನ್ನೇ ಕೇಳಿ ನಾನು ಹೇಗೆ ಉತ್ತರ ಕೊಡಬೇಕು. ಹೈಕಮಾಂಡ್‌ ಉತ್ತರ ಕೊಡೋದನ್ನು ನನಗೆ ಕೇಳಿದರೆ ಹೇಗೆ ?. ಕೆಲವು ಸಚಿವರು ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೀತಾರೆ ಅಂತಿದ್ದಾರೆ ಎಂದು ಮಾಧ್ಯಮಗಳ ಪ್ರಶ್ನೆಗೆ ನಿಮ್ಮ ಸಹೋದ್ಯೋಗಿಗಳ ಮೂಲಕ ಅವರನ್ನೇ ಮೈಸೂರು, ವಿಜಯಪುರದಲ್ಲಿ ಕೇಳಿ ಎಂದು ಹೇಳಿ. ಅದರ ಬಗ್ಗೆ ಉತ್ತರ ಕೊಡುವ ಶಕ್ತಿಯುತ ಮನುಷ್ಯ ನಾನಲ್ಲ. ಮುಖ್ಯಮಂತ್ರಿ ಇದ್ದಾರೆ ಅಂದರೆ ಐದು ವರ್ಷ ಇದ್ದೇ ಇರ್ತುತಾರಲ್ಲ ಎಂದರು.

Follow Us:
Download App:
  • android
  • ios