ಕಮೀಷನ್‌ ಕೇಳುವ, ಕೊಲೆ ಮಾಡಿ ಎನ್ನುವ ಸರ್ಕಾರ: ಸುರ್ಜೇವಾಲಾ ವಾಗ್ದಾಳಿ

ಬಿಜೆಪಿಯದ್ದು ರಾಕ್ಷಸರ ಸರ್ಕಾರವಾಗಿದೆ. ಕಮೀಷನ್‌ ಕೇಳುವ, ಕೊಲೆ ಮಾಡಿ ಎನ್ನುವ ಸರ್ಕಾರವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೆವಾಲಾ ಆಕ್ರೋಶ ವ್ಯಕ್ತಪಡಿಸಿದರು.

Government asking for commission and killing surjewala outraged at gadag rav

ಗದಗ (ಫೆ.19) : ಬಿಜೆಪಿಯದ್ದು ರಾಕ್ಷಸರ ಸರ್ಕಾರವಾಗಿದೆ. ಕಮೀಷನ್‌ ಕೇಳುವ, ಕೊಲೆ ಮಾಡಿ ಎನ್ನುವ ಸರ್ಕಾರವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೆವಾಲಾ(Randeep surjewala) ಆಕ್ರೋಶ ವ್ಯಕ್ತಪಡಿಸಿದರು.

ನಗ​ರದ ಕೆ.ಎ​ಚ್‌.​ ಪಾ​ಟೀಲ ಸಭಾ​ಭ​ವನದಲ್ಲಿ ಶನಿ​ವಾರ ಕಾಂಗ್ರೆಸ್‌ ಪಕ್ಷದಿಂದ ನಡೆ​ದ ಗೃಹಜ್ಯೋತಿ, ಗೃಹಲಕ್ಷ್ಮೇ ಯೋಜ​ನೆ​ಯ ಕಾಂಗ್ರೆಸ್‌ ಪಕ್ಷದ ಭರವಸೆ ಪತ್ರವನ್ನು ಬಿಡು​ಗ​ಡೆ​ಗೊ​ಳಿಸಿ ಅವರು ಮಾತ​ನಾ​ಡಿದರು.

 

ಜನರ ಕಿವಿ ಮೇಲೆ ಹೂವಿಡುವ ಬಜೆಟ್‌: ಸುರ್ಜೇವಾಲಾ

ಎಚ್‌.ಕೆ. ಪಾಟೀಲ, ರಣದೀಪ ಅವರನ್ನು ಸಾಯಿಸಿದರೂ ಕಾಂಗ್ರೆಸ್‌ ಹೆದರುವುದಿಲ್ಲ. ಆದರೆ, ನಾವು ಬಡವರ ಪರವಾಗಿ ಕೆಲಸ ಮಾಡುವ ನಮ್ಮ ತತ್ವ, ಸಿದ್ಧಾಂತಗಳನ್ನು ಸಾಯಿಸಲು ಬಿಡುವುದಿಲ್ಲ. ಇಂದಿರಾ ಗಾಂಧಿ, ರಾಜೀವ ಗಾಂಧಿ ಸೇರಿ ಹಲವಾರು ನಮ್ಮ ನಾಯಕರನ್ನು ಹತ್ಯೆ ಮಾಡಿದ್ದಾರೆ. ಆದರೂ ಕಾಂಗ್ರೆಸ್‌ ಬಡವರ ಪರವಾಗಿ ಕೆಲಸ ಮಾಡುವ ಧ್ವನಿ ಕಡಿಮೆಯಾಗಿದೆಯೇ? ಎಂದು ಕಿಡಿಕಾರಿದರು.

ನರಕದಲ್ಲೂ ಲಂಚ:

ಬಿಜೆ​ಪಿ(BJP)ಯ ದುಷ್ಟ, ರಾಕ್ಷಸ ಪ್ರವೃ​ತ್ತಿಯ ಬಗ್ಗೆ ಗದಗ ಜಿಲ್ಲೆಯ ಶ್ರೀಗಳೊಬ್ಬರು ಬಹಿರಂಗವಾಗಿಯೇ ಹೇಳಿದ್ದಾರೆ. ರಾಕ್ಷಸ ಪ್ರವೃ​ತ್ತಿ​ಯುಳ್ಳ ಬಿಜೆಪಿಯರಿಗೆ ನರಕದಲ್ಲಿಯೂ ಜಾಗ ಸಿಗುವುದಿಲ್ಲ. ಅಲ್ಲೂ ಅವರು ಲಂಚ ಕೇಳುತ್ತಾರೆ. ಹೀಗಾಗಿ, ಅವರಿಗೆ ಪ್ರತ್ಯೇಕ ಜಾಗವೇ ಬೇಕು ಎಂದು ಕುಟು​ಕಿ​ದ​ರು.

ಬಿಜೆ​ಪಿ​ಗರ 40% ಕಮೀಷನ್‌ ನಿಂದಾಗಿ ಹಲವಾರು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮ​ಹತ್ಯೆ ಮಾಡಿ​ಕೊಂಡ ಜನ​ಸಾ​ಮಾ​ನ್ಯರ ಕೆಲಸಕ್ಕಾಗಿ ನಿಮಗೆ ನೀಡಬೇಕಾದ ಕಮೀಷನ್‌ ನೀಡುತ್ತೇವೆ. ಅವರ ಜೀವ ಮರಳಿ ಕೊಡಿಸುತ್ತೀರಾ? ಎಂದು ಸರ್ಕಾರವನ್ನು ಪ್ರಶ್ನಿಸಿ​ದ​ರು.

ಯತ್ನಾಳ ಅವರು ತಮ್ಮ​ದೇ ಸರ್ಕಾರ ಮತ್ತು ಸಚಿವರ ವಿರುದ್ಧ ಸಾಕಷ್ಟುಆರೋಪ ಮಾಡುತ್ತಿದ್ದಾರೆ. ಅವರ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ? ಎಂದರು.

ಕಾಂಗ್ರೆಸ್ಸಿಗೆæ ಆಶೀರ್ವದಿಸಿ:

ಶಾಸಕ ಎಚ್‌.​ಕೆ.​ ಪಾಟೀಲ ಮಾತ​ನಾ​ಡಿ​, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮೀಟಿಯಿಂದ ರಾಜ್ಯಾದ್ಯಂತ ಜನಧ್ವನಿ ಬಸ್‌ ಯಾತ್ರೆ ಮೂಲಕ ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರಗಳನ್ನು ಜನರಿಗೆ ತಲುಪಿಸುವ ಮೂಲಕ ಮುಂಬರುವ ದಿನಮಾನಗಳಲ್ಲಿ ರಾಜ್ಯದ ಜನತೆ ಕಾಂಗ್ರೆಸ್‌ಗೆ ಆಶೀರ್ವದಿಸಿ ಪಕ್ಷ ಅಧಿಕಾರಕ್ಕೆ ಬಂದರೆ ಚುನಾ​ವ​ಣಾ ಪ್ರಣಾಳಿಕೆಯಲ್ಲಿ ಸೂಚಿಸಿರುವಂತೆ ರಾಜ್ಯದ ಪ್ರತಿಮನೆಗೆ ಪ್ರತಿ ತಿಂಗಳು 200 ಯೂನಿಟ್‌ ಉಚಿ​ತ ವಿದ್ಯುತ್‌ ಹಾಗೂ ಪ್ರತಿ ಮನೆಯ ಯಜಮಾನಿಗೆ .2000 ನೀಡಲು ಉದ್ದೇ​ಶಿದೆ ಎಂದರು.

Karnataka Budget 2023: ಕೊಡಗಿನ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರು. ವಿಶೇಷ ಪ್ಯಾಕೇಜ್‌!

ಈ ವೇಳೆ ಗೃಹ ಜ್ಯೋತಿ, ಗೃಹ ಲಕ್ಷ್ಮೇ ಯೋಜ​ನೆಯ ಕಾಂಗ್ರೆಸ್‌ ಪಕ್ಷದ ಭರ​ವಸೆ ಪತ್ರ​ವನ್ನು ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೆವಾಲಾ ಬಿಡು​ಗ​ಡೆ​ಗೊ​ಳಿ​ಸಿ​ದ​ರು.

ವಿಪ ಸದಸ್ಯ ಸಲೀಂ ಅಹ್ಮದ, ಮಯೂರ ಜಯಕಮಾರ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಎಸ್‌. ಪಾಟೀಲ, ಮಾಜಿ ಶಾಸಕ ಡಿ.ಆ​ರ್‌.​ ಪಾ​ಟೀಲ, ಬಿ.ಆ​ರ್‌.​ ಯಾ​ವ​ಗ​ಲ್‌, ಟಿ. ಈ​ಶ್ವ​ರ, ವಾಸಣ್ಣ ಕುರ​ಡ​ಗಿ, ಸೇರಿ​ದಂತೆ ಪಕ್ಷದ ಮುಖಂಡ​ರು, ವಿವಿಧ ಘಟ​ಕ​ಗಳ ಪದಾ​ಧಿ​ಕಾ​ರಿ​ಗಳು, ಕಾರ್ಯ​ಕ​ರ್ತರು, ಅಭಿ​ಮಾ​ನಿ​ಗಳು ಇದ್ದ​ರು.

Latest Videos
Follow Us:
Download App:
  • android
  • ios