Prajadhwani Yatra: ಸರ್ಕಾರದ 4 ಸಚಿವರು, 17 ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ: ಸುರ್ಜೇವಾಲ ಆರೋಪ

ರಾಜ್ಯದ ಭಾರತೀಯ ಜನತಾ ಪಾರ್ಟಿ ಸರ್ಕಾರದಲ್ಲಿ ಒಟ್ಟು 4 ಸಚಿವರು ಹಾಗೂ 17 ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಆರೋಪಿಸಿದ್ದಾರೆ.

Government 4 ministers and 17 MLAs involved in corruption Surjewala alleges sat

ಮೈಸೂರು (ಜ.26): ರಾಜ್ಯದ ಭಾರತೀಯ ಜನತಾ ಪಾರ್ಟಿ ಸರ್ಕಾರದಲ್ಲಿ ಒಟ್ಟು 4 ಸಚಿವರು ಹಾಗೂ 17 ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಬಿಜೆಪಿ ಪಕ್ಷದ ಶಾಸಕ ಯತ್ನಾಳ್ ಅವರೇ ಮುಖ್ಯಮಂತ್ರಿ ಖುರ್ಚಿ 2,500 ಕೋಟಿ ರೂ.ಗೆ ಮಾರಾಟಕ್ಕಿದೆ ಎಂದಿರುವುದು ಸಾಕ್ಷಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಆರೋಪಿಸಿದ್ದಾರೆ.

ಮೈಸೂರಿನ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಭ್ರಷ್ಟ ಬಿಜೆಪಿ ಸರ್ಕಾರವನ್ನ ತೆಗೆಯಲು ಪ್ರಜಾಧ್ವನಿ ಯಾತ್ರೆ ಆರಂಭಿಸಿದೆ. ಜನರ ದೌರ್ಬಾಗ್ಯ ಕರ್ನಾಟಕ ಸರ್ಕಾರದಿಂದ 40% ಕಮಿಷನ್ ಪಡೆಯಲಾಗ್ತಿದೆ. ಬಿಜೆಪಿ ಸರ್ಕಾರಕ್ಕೆ 40% ಬಿಟ್ರೆ ಬೇರೆ ಏನು ಕಾಣ್ತಿಲ್ಲ. 40% ಕಮಿಷನ್ ಸರ್ಕಾರ ಇದ್ರು ಮೋದಿ ಯಾವುದೇ ಕ್ರಮ ತೆಗೆದುಕೊಳ್ತಿಲ್ಲ. ಸಂತೋಷ್ ಪಾಟೀಲ್ ಹಾಗೂ ರಾಜೇಂದ್ರ ಕಮಿಷನ್ ನೀಡಲಾಗದೆ ಆತ್ಮಹತ್ಯೆಗೆ ಶರಣಾದರು. ಬಸವರಾಜ್ ಬೊಮ್ಮಾಯಿ ಅವರು ಮೃತ ಟಿಎನ್ ಪ್ರಸಾದ್ ಹಾಗೂ ಸಂತೋಷ್ ಪಾಟೀಲ್ ಅವರನ್ನ ವಾಪಸ್ ಕರೆತರುತ್ತಾರಾ..? ಎಂದು ಸವಾಲು ಹಾಕಿದರು. 

Prajadhwani Yatre: ದೇವೇಗೌಡರು ಪ್ರಧಾನಿಯಾಗಿ ಜನರ ಮನ ಗೆಲ್ಲಲಿಲ್ಲ: ಡಿಕೆ ಶಿವಕುಮಾರ್ ಟೀಕೆ

ಬಿಜೆಪಿ ಸರ್ಕಾರದ 4 ಸಚಿವರು ಹಾಗೂ 17 ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪೊಲೀಸ್ ಅಧಿಕಾರಿಗಳ ಪೋಸ್ಟ್ ಗಳನ್ನ ಮಾರಾಟ ಮಾಡಲಾಗ್ತಿದೆ. ಇಂಜಿನಿಯರ್ ಪೋಸ್ಟ್ಗಳು 40 ಲಕ್ಷಕ್ಕೆ ಮಾರಾಟವಾಗ್ತಿದೆ. ಕೆಪಿಎಸ್ಸಿ ಕೂಡ ಮಾರಾಟ ಮಾಡಲಾಗ್ತಿದೆ. ಮಕ್ಕಳ ಪ್ರಶ್ನೆ ಪತ್ರಿಕೆಗಳನ್ನ 20 ಲಕ್ಷಕ್ಕೆ ಮಾರಾಟ ಮಾಡಲಾಗ್ತಿದೆ. ಇಂತ ಸರ್ಕಾರವನ್ನ ಬದಲಾಯಿಸಬೇಕಿದೆ. ಮೈಸೂರಿನ ನೆಲದಿಂದ ಇಂದು ಎಲ್ಲಾರು ಒಟ್ಟಾಗಿ ಹೊಸ ಇತಿಹಾಸ ಬರೆಯಬೇಕಿದೆ ಎಂದು ತಿಳಿಸಿದರು.

 

ಮಗನ ಅನುವಾದ ನೋಡಿ ಸಿದ್ದು ಫುಲ್ ಖುಷ್: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ ಭಾಷಣವನ್ನು ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅನುವಾದ ಮಾಡಿದರು. ರಣದೀಪ್ ಸಿಂಗ್ ಸುರ್ಜೇವಾಲ ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಮಾಡಿದ ಭಾಷಣವನ್ನು ಡಾ ಯತೀಂದ್ರರನ್ನು ಅನುವಾದ ಮಾಡುವುದನ್ನು ಸಿದ್ದರಾಮಯ್ಯ ತದೇಕಚಿತ್ತದಿಂದ ವೀಕ್ಷಿಸುತ್ತಾ ಕುಳಿತಿದ್ದರು. ಹಿಂದಿ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿ ನಿರರ್ಗಳವಾಗಿ ಮಾತನಾಡಿದ ಯತೀಂದ್ರರನ್ನು ಆಸಕ್ತಿಯಿಂದ ನೋಡುತ್ತಿದ್ದರು.

Assembly election: ಭ್ರಷ್ಟಾಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಾಮೀಲು: ಸಿದ್ದರಾಮಯ್ಯ ಆರೋಪ

ಈಶ್ವರಪ್ಪ ಕುರಿ ಕಾಯಬೇಕಿತ್ತು: ಸಂವಿಧಾನ ಇಲ್ಲವಾಗಿದ್ದರೆ ಕೆ ಎಸ್ ಈಶ್ವರಪ್ಪ ಕುರಿ ಕಾಯಬೇಕಿತ್ತು. ತ್ರಿವರ್ಣ ಧ್ವಜ ಸ್ವಾತಂತ್ರ್ಯ ಹೋರಾಟದ ಸಂಕೇತ. ಈ ಚುನಾವಣೆ ಸಂವಿಧಾನ ಬೇಕಾ ಅಥವಾ ರಾಜಾಡಳಿತ ಶಾನಭೋಗರ ಆಡಳಿತ ಬೇಕಾ ? ಇದನ್ನ ನೀವೆ ನಿರ್ಧಾರ ಮಾಡಿ. ಸಂವಿಧಾನ ಉಳಿಯಬೇಕಾದರೆ ಬಿಜೆಪಿ ತೊಲಗಬೇಕು. ಆರ್ ಎಸ್ ಎಸ್ ಶಕ್ತಿ ಪ್ರಾಬಲ್ಯವನ್ನು ಧ್ವಂಸ ಮಾಡಬೇಕು. ಬಿಜೆಪಿಯವರು ಶಿವಮೊಗ್ಗಕ್ಕೆ ಬಂದು ಚಾಕು ಚೂರಿ ತಲ್ವಾರ್ ಕೊಡಿ ಅಂತಾ ಹೇಳುತ್ತಿದ್ದಾರೆ. ಚಾಕು ಚೂರಿ ತಲವಾರ್ ಕೊಡಬೇಕಾ ? ಪೆನ್ನು‌ಕೊಡಬೇಕಾ ನಿರ್ಧಾರ ಮಾಡಿ. ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.

Latest Videos
Follow Us:
Download App:
  • android
  • ios