ಬಿಜೆಪಿ ಪಕ್ಷ ಶಿಸ್ತುಬದ್ಧ ಪಕ್ಷವಾಗಿದ್ದು, ಎಲ್ಲ ಸಮುದಾಯಗಳ ಅಭಿವೃದ್ಧಿ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶದ ಅಭಿವೃದ್ಧಿಗಾಗಿ ಕಾರ್ಯಪ್ರವೃತ್ತವಾಗಿದೆ. ಕಾಂಗ್ರೆಸ್‌ ಪಕ್ಷ ತನ್ನ ಧೋರಣೆಯಿಂದ ಅವನತಿಯತ್ತ ಸಾಗುತ್ತಿದೆ ಎಂದು ಲೇವಡಿ ಮಾಡಿದ ರಮೇಶ ಜಾರಕಿಹೊಳಿ 

ಗೋಕಾಕ(ಮೇ.04): ಸರ್ವೋಚ್ಛ ನ್ಯಾಯಾಲಯದಲ್ಲಿರುವ ಮಹಾಜನ ವರದಿಯ ತೀರ್ಪು ಬಂದ ನಂತರ ನಮ್ಮ ನಿಮ್ಮೆಲ್ಲರ ಬೇಡಿಕಾದ ಗೋಕಾಕ ಜಿಲ್ಲೆ ಮಾಡಲು ಕಾರ್ಯಪ್ರವೃತ್ತರಾಗೋಣ. ರಾಜ್ಯದ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲ ನ್ಯಾಯವಾದಿಗಳು ಬಿಜೆಪಿ ಪಕ್ಷವನ್ನು ಬೆಂಬಲಿಸಿ ನನಗೆ ತಮ್ಮ ಮತಗಳನ್ನು ನೀಡುವ ಮೂಲಕ ಆಶೀರ್ವದಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಕೋರಿದರು.

ನಗರದ ನ್ಯಾಯಾಲಯದ ಆವರಣದ ನ್ಯಾಯವಾದಿಗಳ ಸಂಘದ ಕಾರ್ಯಾಲಯದಲ್ಲಿ ಬುಧವಾರ ಮತಯಾಚಿಸಿ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ: ಅವಿವಾಹಿತ ಯುವಕರಿಗೆ ಮದುವೆ ಮಾಡಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ ಪಕ್ಷೇತರ ಅಭ್ಯರ್ಥಿಗಳು

ಬಿಜೆಪಿ ಪಕ್ಷ ಶಿಸ್ತುಬದ್ಧ ಪಕ್ಷವಾಗಿದ್ದು, ಎಲ್ಲ ಸಮುದಾಯಗಳ ಅಭಿವೃದ್ಧಿ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶದ ಅಭಿವೃದ್ಧಿಗಾಗಿ ಕಾರ್ಯಪ್ರವೃತ್ತವಾಗಿದೆ. ಕಾಂಗ್ರೆಸ್‌ ಪಕ್ಷ ತನ್ನ ಧೋರಣೆಯಿಂದ ಅವನತಿಯತ್ತ ಸಾಗುತ್ತಿದೆ ಎಂದು ಲೇವಡಿ ಮಾಡಿದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜು ಕೊಟಗಿ ಮಾತನಾಡಿ, ಅನುಭವಿ ರಾಜಕಾರಣಿ, ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ನ್ಯಾಯವಾದಿಗಳ ಸಂಘ ಸಂಪೂರ್ಣ ಬೆಂಬಲ ನೀಡುತ್ತಿದೆ. ರಮೇಶ ಜಾರಕಿಹೊಳಿ ಅವರು ಅದ್ಭುತ ಜಯ ಸಾಧಿಸಿ ಒಳ್ಳೆಯ ಕಾರ್ಯಗಳನ್ನು ಮಾಡಲೆಂದು ಹಾರೈಸಿದರು.

ವಿರೋಧಿಗಳೇನು ಹುಲಿಯಲ್ಲ, ಕರಡಿಯಲ್ಲ, ಎದುರು ನಿಂತರೆ ಓಡಿ ಹೋಗ್ತಾರೆ: ರಮೇಶ ಜಾರಕಿಹೊಳಿ

ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಬಿ.ಬಿ.ಬೀರಣಗಡ್ಡಿ, ಸಹ ಕಾರ್ಯದರ್ಶಿ ಜಗದೀಶ ಕಂಬಾರ, ನ್ಯಾಯವಾದಿಗಳಾದ ಎಸ್‌.ಪರಪ್ಪನವರ, ಎಂ.ಆರ್‌.ಭಜಂತ್ರಿ, ಎಸ್‌.ವಿ.ದೇಮಶೆಟ್ಟಿ, ವಿ. ಎಚ್‌.ಗಡೇನ್ನವರ, ಸಿ.ಡಿ.ಹುಕ್ಕೇರಿ, ಕೆ.ಟಿ.ಉದಪುಡಿ, ಜಿ.ಆರ್‌.ಪೂಜೇರಿ, ಎಸ್‌.ಬಿ.ನೇಸರಗಿ, ಆರ್‌.ಎಸ್‌.ಬೀರಣ್ಣವರ, ಎಲ್‌.ಎಚ್‌.ಭಂಡಿ, ರಮೇಶ ಭಂಡಿ, ಚೇತನ ಚಂದರಗಿ ಸೇರಿದಂತೆ ಅನೇಕರು ಇದ್ದರು.

ಬಿಜೆಪಿ ಪಕ್ಷ ಶಿಸ್ತುಬದ್ಧ ಪಕ್ಷವಾಗಿದ್ದು, ಎಲ್ಲ ಸಮುದಾಯಗಳ ಅಭಿವೃದ್ಧಿ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶದ ಅಭಿವೃದ್ಧಿಗಾಗಿ ಕಾರ್ಯಪ್ರವೃತ್ತವಾಗಿದೆ. ಕಾಂಗ್ರೆಸ್‌ ಪಕ್ಷ ತನ್ನ ಧೋರಣೆಯಿಂದ ಅವನತಿಯತ್ತ ಸಾಗುತ್ತಿದೆ ಅಂತ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.